ಬಾಗಲಕೋಟೆ: ಮಹಾ ಕುಂಭ ಮೇಳ ಸೇರಿದಂತೆ ಉತ್ತರ ಭಾತರದ ಧಾರ್ಮಿಕ ಕ್ಷೇತ್ರಗಳಿಗೆ ಸಂಗಡಿಗರೊAದಿಗೆ ಪ್ರವಾಸಕ್ಕೆ ತೆರಳಿದ್ದ ಬಾಗಲಕೋಟೆ ಮೂಲದ ವ್ಯಕ್ತಿ ಗಂಗಾ ನದಿಯಲ್ಲಿ ಮುಳಗಿ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ಸತೀಶ ಜೋಶಿ(೪೪) ಮೃತ ಪಟ್ಟ ದುರ್ದೈವಿ. ಬಾಗಲಕೋಟೆ ನಗರದ ನವನಗರದ ಸೆಕ್ಟರ್ ೧೫ ನಿವಾಸಿಯಾಗಿರುವ ಸತೀಶ ಜೋಶಿ ಜಿಲ್ಲಾ ಪಂಚಾಯಿತಿಯಲ್ಲಿ ಡಾಟಾ ಎಂಟ್ರೀ ಆಪರೇಟರ್ ಆಗಿ ಸೇವೆ ಮಾಡುತ್ತಿದ್ದರು. ತಮ್ಮ ವೃತ್ತಿಯಲ್ಲಿರುವ ಸ್ನೇಹಿತರೊಂದಿಗೆ ಕಳೆದ ಒಂದು ವಾರದ ಹಿಂದೆ ಪ್ರಯಾಗ ರಾಜ, ಅಯೋಧ್ಯೆ ಸೇರಿದಂತೆ ಉತ್ತರ ಭಾರತದ ಧಾರ್ಮಿಕ ಸ್ಥಳಗಳ ದರ್ಶನಕ್ಕೆ ತೆರಳಿದ್ದರು.
ಭಾನುವಾರ ಬೆಳಗ್ಗೆ ವಾರಾಣಾಶಿ(ಕಾಶಿ) ಗಂಗಾ ನದಿ ಸ್ನಾನಕ್ಕೆ ಇಳಿದಿದ್ದರು. ಎರಡು ಗಂಟೆ ಕಳೆದರು ವಾಪಸ್ ಬರಲಿಲ್ಲ. ಇದರಿಂದ ಗಾಬರಿಗೊಂಡ ಸ್ನೇಹಿತರು ಎನ್‌ಡಿಆರ್‌ಎ-ï ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿಗಳು, ಮುಳುಗುವ ತಜ್ಞರು ನದಿಯಲ್ಲಿ ಕಾರ್ಯಾಚರಣೆ ನಡೆಸಿದರು. ಬಹು ಹೊತ್ತಿನ ಬಳಿಕ ಶವ ಪತ್ತೆಯಾಗಿದೆ.
ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದ್ದು, ವಿಮಾನ ಮೂಲಕ ಸೋಮವಾರ ಬಾಗಲಕೋಟೆ ಪಾರ್ಥಿವ ಶರೀರ ತರಲಾಗುತ್ತಿದೆ ಅಂತ ಹೇಳಲಾಗಿದೆ. ಆದರೇ ಯಾವುದೇ ನಿಖರ ಮಾಹಿತಿ ಸಿಕ್ಕಿಲ್ಲ. ಜಿಲ್ಲೆಯ ಜನ ಪ್ರತಿನಿಽಗಳು ಕೇಂದ್ರ ಸರ್ಕಾರ, ಯುಪಿ ಸರ್ಕಾರದೊಂದಿಗೆ ಸಂಪರ್ಕ ಸಾಽಸಿ ಪಾರ್ಥಿವ ಶರೀರ ಬಾಗಲಕೋಟೆಗೆ ತರಲು ಪ್ರಯತ್ನ ಮಾಡುತ್ತಿದ್ದಾರೆ.