ಅರಕಲಗೂಡು: ತಾಲೂಕಿನ ರಾಮನಾಥಪುರದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನಾ ಸಮಿತಿಯಿಂದ 50ನೇ ಹುಣ್ಣಿಮೆ ಪ್ರಯುಕ್ತ ಕಾವೇರಿ ನದಿಗೆ ಮಹಾ ಆರತಿ ಹಾಗೂ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶ್ರೀ ರಾಮೇಶ್ವರ ದೇವಾಲಯದ ಅರ್ಚಕ ಶ್ರೀನಿವಾಸ್ ನೇತೃತ್ವದಲ್ಲಿ ಕಾವೇರಿ ನದಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಿಸಲಾಯಿತು.
ನಂತರ ನದಿ ತಟ, ಮೆಟ್ಟಿಲುಗಳು ಹಾಗೂ ದೇವಾಲಯದ ಸುತ್ತಲಿನ ಪ್ರದೇಶದಲ್ಲಿ ಗಿಡ ಗಂಟಿಗಳನ್ನು ಕಿತ್ತು, ತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸಿ ಶ್ರಮದಾನ ಮಾಡಲಾಯಿತು.
ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷ ಡಾ. ಕುಮಾರಸ್ವಾಮಿ, ತಾಲೂಕು ಘಟಕದ ಅಧ್ಯಕ್ಷ ಸಿದ್ದರಾಜು, ಮುಖಂಡರಾದ ಶ್ರೀಧರ್, ಕಾಳಬೋಯಿ, ರಘು, ಕೇಶವ, ಪಿಎನ್‌ಟಿ ಶಿವಪ್ಪ, ಸುಬ್ಬರಾಯಿ, ಅಶ್ವಿನ್, ಭಾಗಮ್ಮ ಮತ್ತಿತರರು ಹಾಜರಿದ್ದರು.
