ಕಾಲೇಜು ತರುಣಿಯರಿಗೆ ಕುರ್ತಾ

ಈಗ ಶೈಕ್ಷಣಿಕ ವರ್ಷ ಆರಂಭವಾಗಿದೆ. ಹೆಚ್ಚಿನ ಕಾಲೇಜುಗಳಲ್ಲಿ ಯುನಿಫಾಮ್ರ್ ಇದ್ದರೂ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಸಮವಸ್ತ್ರ ತಡವಾಗುವ ಕಾರಣ ಒಂದೆರಡು ತಿಂಗಳು ಕಲರ್ ಡ್ರೆಸ್ ಭಾಗ್ಯ. ಹೀಗಿದ್ದಾಗ ಆಗ ತಾನೆ ಕಾಲೇಜು ಸೇರಿರುವವರಿಗೆ ಹೊಸ ಹುರುಪು. ಹುಡುಗಿಯರಂತೂ ದಿನವೂ ಒಂದೊಂದು ತರದ ಡ್ರೆಸ್ ಹಾಕಬೇಕೆಂದು ತಲೆಕೆಡಿಸಿಕೊಳ್ಳುತ್ತಾರೆ. ಆದರೆ ಟೀಶರ್ಟ್, ಸ್ಲೀವ್​ಲೆಸ್ ಟಾಪ್, ಸ್ಕರ್ಟ್ ತೊಡಬಾರದು ಎಂಬ ಕಾಲೇಜಿನ ನಿಯಮ ಅದಕ್ಕೆ ಬ್ರೇಕ್ ಹಾಕುತ್ತದೆ. ಹೀಗಿದ್ದಾಗ ನಿರಾಶರಾಗಬೇಕಿಲ್ಲ.

ಇದಕ್ಕೆ ಪರ್ಯಾಯವಾಗಿಯೇ ವಿಭಿನ್ನ ಟಾಪ್​ಗಳು ಮಾರುಕಟ್ಟೆಗೆ ಬಂದಿವೆ. ಕಾಲೇಜಿಗೆ ಹೋಗುವಾಗ ಸರಳವಾಗಿಯೂ ಸ್ಟೈಲಿಶ್ ಆಗಿಯೂ ಈ ಧಿರಿಸುಗಳಲ್ಲಿ ಕಾಣಬಹುದು. ತ್ರೀಫೋರ್ಥ್, ಹಾಫ್ ಸ್ಲೀವ್, ಸೆಂಟರ್ ಸ್ಲಿಟ್ ಟಾಪ್​ಗಳು ವಿಭಿನ್ನವಾಗಿ ಕಾಣುತ್ತವೆ. ಫ್ಲೇನ್ ಟಾಪ್​ಗೆ ಚಿತ್ತಾರಗಳಿರುವ ಲೆಗ್ಗಿಂನ್ಸ್, ಟಾಪ್​ವೆುೕಲೆ ಓವರ್​ಕೋಟ್ ಹಾಕಿದರೂ ಚಿನ್ನಾಗಿ ಕಾಣುತ್ತದೆ. ಕುರ್ತಾಗಳು ಸಿಂಪಲ್ ಇದ್ದರೂ ವಿಭಿನ್ನ ಕಟ್ಟಿಂಗ್​ನಿಂದ ಸುಂದರವಾಗಿ ಕಾಣುತ್ತವೆ. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಕಾಲರ್ ಇರುವ, ತೋಳು ಮುಚ್ಚುವ ಟಾಪ್​ಗಳು ಸಹಾಯ

ದಿನದಿಂದ ದಿನಕ್ಕೆ ಫ್ಯಾಷನ್ ಲೋಕದಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ. ಅದಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಅಪ್​ಡೇಟ್ ಆಗುತ್ತಿರುತ್ತಾರೆ. ನಮಗೆ ಗೊತ್ತಿರದ ಸ್ಟೈಲ್ ನಿಮಗೆ ಗೊತ್ತಿರಬಹುದು. ಅಂಥವನ್ನು [email protected]ಗೆ ಬರೆದು ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ.

Leave a Reply

Your email address will not be published. Required fields are marked *