ಕಾಲೇಜಿನ ಸಹಪಠ್ಯ ಚಟುವಟಿಕೆಗಳ ಉದ್ಘಾಟಿಸಿದ ಶಾಸಕರು

ಹಾಸನ: ನಗರದ ಬಾಲಕಿಯರ ವಿಭಜಿತ ಸರ್ಕಾರಿ ಪದವಿ ಪೂರ್ವ ಕಾಲೇಜು ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಕಲಿಕೆಯ ಕೇಂದ್ರವಾಗಿರುವ ಕಾಲೇಜಿನ ಮೂಲಭೂತ ಸೌಕರ್ಯಗಳನ್ನು ಸುಧಾರಿಸಲು ಕಂಕಣ ಬದ್ಧನಾಗಿದ್ದೇನೆ ಎಂದು ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಭರವಸೆ ನೀಡಿದರು.
ನಗರದ ಆರ್.ಸಿ. ರಸ್ತೆಯಲ್ಲಿರುವ ಬಾಲಕಿಯರ ವಿಭಜಿತ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ಕಾಲೇಜಿನ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದ ಕೇಂದ್ರ ಭಾಗದಲ್ಲಿರುವ ಈ ಕಾಲೇಜಿಗೆ ಜಿಲ್ಲೆಯ ಗ್ರಾಮೀಣ ಭಾಗದಿಂದ ವಿದ್ಯಾರ್ಥಿನಿಯರ ಆಗಮಿಸುತ್ತಾರೆ. ಈ ಕಾಲೇಜು ಮತ್ತು ಇತರೆ ಸರ್ಕಾರಿ ಶಾಲೆ ಕಾಲೇಜುಗಳ ಅಭಿವೃದ್ಧಗೆ ಶ್ರಮಿಸುವುದ್ದಾಗಿ ತಿಳಿಸಿದರು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಕಾಲೇಜು ಕೀರ್ತಿ ಹೆಚ್ಚಿಸಿದ 20 ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ನೀಡಿ ಗೌರವಿಸಿರುವುದು ನನಗೆ ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಶೋಭಾರಾಣಿ ಅವರು ಮಾತನಾಡಿ, ವಿದ್ಯಾರ್ಥಿನಿಯರು ತಮ್ಮ ಮುಂದಿನ ಗುರಿಯನ್ನು ಸಾಧಿಸಬೇಕಾದ್ದರೆ ಅವರಲ್ಲಿ ಶ್ರಮ ಹೆಚ್ಚು ಇರಬೇಕು ಆ ನಿಟ್ಟಿನಲ್ಲಿ ಹೆಚ್ಚು ಪಠ್ಯಕ್ರಮಗಳ ಬಗ್ಗೆ ಆಸಕ್ತಿ ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಟಿ.ಎಚ್. ನಾಗೇಶ್, ಸಿ.ಎಸ್. ವಿಜಯಕುಮಾರ್, ಕಾಲೇಜಿನ ಉಪ ಪ್ರಾಂಶುಪಾಲ ಡಿ.ಆರ್. ಕುಮಾರ್, ಉಪನ್ಯಾಸಕ ಎಂ.ಆರ್. ಸಹದೇವ್, ಎಸ್.ಜೆ. ರಾಮಕೃಷ್ಣಯ್ಯ , ಸಣ್ಣೇಗೌಡ , ಕೆ.ಸಿ. ಚಂದ್ರಮೌಳಿ ಇತರರು ಇದ್ದರು.

Share This Article

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…