ಕಾಲಿಗೆ ನಮಸ್ಕರಿಸಬೇಡಿ ಎಂದ ಮೋದಿ

ಹುಬ್ಬಳ್ಳಿ: ಗಂಗಾವತಿ ಬಿಜೆಪಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ವಿಶೇಷ ವಿಮಾನದ ಮೂಲಕ ಶುಕ್ರವಾರ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಪಾದ ಮುಟ್ಟಿ ನಮಸ್ಕರಿ ಸಲು ಮುಂದಾಗಿದ್ದ ಕಾರ್ಯಕರ್ತರನ್ನು ತಡೆದು ತಾವೇ ಶಿರಬಾಗಿ ನಮಸ್ಕರಿಸಿದ ಪ್ರಸಂಗ ಜರುಗಿತು.

ಎಸ್​ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಂಚಪ್ಪ ಮಲ್ಲಮ್ಮನವರ ಮೋದಿ ಅವರ ಕಾಲಿಗೆ ನಮಸ್ಕರಿಸಲು ಮುಂದಾಗಿದ್ದರು. ಕೂಡಲೇ ಅವರ ಭುಜ ಹಿಡಿದು ಎತ್ತಿದ ಮೋದಿ ‘ಐಸಾ ನಹೀ ಭಾಯ್’ ಎಂದು ಶಿರಬಾಗಿ ನಮಸ್ಕರಿಸಿದರು. ಪ್ರಧಾನಿ ಮೋದಿ ಅವರನ್ನು ಹತ್ತಿರದಿಂದ ನೋಡುವುದೇ ಒಂದು ಭಾಗ್ಯ. ಅವರನ್ನು ರ್ಸ³ಸುವ ಅವಕಾಶ ದೊರೆತಿದ್ದು ಹೆಚ್ಚು ಸಂತಸ ನೀಡಿದೆ ಎಂದು ಕೆಂಚಪ್ಪ ಸಂತಸ ಹಂಚಿಕೊಂಡರು.

ಶಿರಡಿಯಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರು, ಸೇನಾ ಹೆಲಿಕಾಪ್ಟರ್ ಮೂಲಕ ಗಂಗಾವತಿಗೆ ತೆರಳಿದರು. ಜಿಲ್ಲಾ ಬಿಜೆಪಿ ಕೈಗಾರಿಕಾ ಪ್ರಕೋಷ್ಠ ಅಧ್ಯಕ್ಷ ಎಸ್.ಆರ್. ರಾಮನಗೌಡರ, ಐಟಿ ಸೆಲ್ ಸಂಚಾಲಕ ಶಂಕರಕುಮಾರ ದೇಸಾಯಿ, ಧಾರವಾಡ ಎಪಿಎಂಸಿ ಸದಸ್ಯ ಬಸವರಾಜ ಹೊಸೂರ, ಮೋದಿ ಅವರಿಗೆ ಗುಲಾಬಿ ಹೂ ಕೊಟ್ಟು ಸ್ವಾಗತಿಸಿದರು. ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಸಂಗಪ್ಪ ಬಾಡಗಿ, ಅಪರ ತಹಸೀಲ್ದಾರ್ ಪ್ರಕಾಶ ನಾಶಿ, ಇತರರು ಇದ್ದರು.

Leave a Reply

Your email address will not be published. Required fields are marked *