More

    ಕಾರ್ವಿುಕ ವರ್ಗದಿಂದ ಆರ್ಥಿಕ ಅಭಿವೃದ್ಧಿ

    ಹುಬ್ಬಳ್ಳಿ: ಈ ದೇಶದ ಆರ್ಥಿಕ ಅಭಿವೃಧಿ್ಧ ಮತ್ತು ಸಮತೋಲನಕ್ಕೆ ಕಾರ್ವಿುಕರು, ಕೂಲಿಕಾರರು ಹಾಗೂ ಬಡವರು ಮೂಲ ಕಾರಣ ಎಂದು ಗೃಹ ಹಾಗೂ ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ತಿಂಗಳಿಗೆ 6, 7 ಸಾವಿರ ರೂ. ಖರ್ಚಿನಲ್ಲಿ ಜೀವನ ನಿರ್ವಹಿಸುವ ಕಾರ್ವಿುಕರು 50, 60 ಸಾವಿರ ರೂ. ಖರ್ಚು ಮಾಡಲು ಬಯಸಿದರೆ ಈ ದೇಶದ ಪರಿಸ್ಥಿತಿ ಏನಾಗಬಹುದು ಎಂದು ಊಹಿಸಲೂ ಸಾಧ್ಯವಿಲ್ಲ. ಕನಿಷ್ಠ ಖರ್ಚಿನಲ್ಲಿ ಜೀವನ ನಡೆಸುವ ಕಾರ್ವಿುಕ ವರ್ಗದ ಕ್ಷೇಮಾಭಿವೃದ್ಧಿಯತ್ತ ನಾವು ಗಮನ ಹರಿಸಬೇಕು ಎಂದರು.

    ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ, ಉಪಾಧ್ಯಕ್ಷರಾದ ವಿನಯ ಜವಳಿ, ಸಿದ್ದೇಶ್ವರ ಕಮ್ಮಾರ, ಜಿ.ಜಿ. ಹೊಟ್ಟಿಗೌಡರ, ಅಶೋಕ ಗಡಾದ, ಉಮೇಶ ಗಡ್ಡದ, ಸುರೇಶಗೌಡ ಪಾಟೀಲ, ವಿವಿಧ ಎಪಿಎಂಸಿ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

    ಬ್ಯಾಡಗಿ ಮೆಣಸಿನಕಾಯಿ ತಳಿ ಅಭಿವೃದ್ಧಿ
    ನಶಿಸಿ ಹೋಗುತ್ತಿರುವ ಬ್ಯಾಡಗಿ ಮೆಣಸಿನಕಾಯಿ ತಳಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಬ್ಯಾಡಗಿಯಲ್ಲಿ ಪ್ರತ್ಯೇಕ ಪ್ರಯೋಗಾಲಯ ಸ್ಥಾಪಿಸಬೇಕು. ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯನ್ನು ‘ಬಿ’ ಗ್ರೇಡ್​ನಿಂದ ‘ಎ’ ಗ್ರೇಡ್​ಗೆ ಏರಿಸಬೇಕು ಎಂದು ಮಾಜಿ ಶಾಸಕ, ಬ್ಯಾಡಗಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಮನವಿ ಸಲ್ಲಿಸಿದರು. ಉತ್ತರಿಸಿದ ಗೃಹಸಚಿವ ಬಸವರಾಜ ಬೊಮ್ಮಾಯಿ, ಬ್ಯಾಡಗಿ ಮೆಣಸಿನಕಾಯಿ ತಳಿ ಅಭಿವೃದ್ಧಿಗಾಗಿ ಕೃಷಿ ವಿವಿ ಜತೆ ರ್ಚಚಿಸಿ, ಈ ಬಜೆಟ್​ನಲ್ಲಿ ವಿಶೇಷ ಅನುದಾನ ನೀಡಲಾಗುವುದು. 2021ರ ಒಳಗಾಗಿ ಬ್ಯಾಡಗಿಯಲ್ಲಿ ಪ್ರಯೋಗಾಲಯ ನಿರ್ವಿುಸಲಾಗುವುದು ಎಂದು ಭರವಸೆ ನೀಡಿದರು.

    ಕೆಸಿಸಿಐ ಮನವಿಗೆ ಸ್ಪಂದನೆ
    ತೆರಿಗೆಗೆ ಸಂಬಂಧಿಸಿದ 35 ಎ ಕಾಯ್ದೆ ತಿದ್ದುಪಡಿಗೆ ಅವಕಾಶ ಕಲ್ಪಿಸಬೇಕು. 35 ಬಿ ರದ್ದುಪಡಿಸಬೇಕು ಎಂದು ಕೆಸಿಸಿಐ ಪರವಾಗಿ ಶಂಕರಣ್ಣ ಮುನವಳ್ಳಿ ಮನವಿ ಸಲ್ಲಿಸಿದರು. ಈ ಕುರಿತು ಅಧಿಕಾರಿಗಳೊಂದಿಗೆ ರ್ಚಚಿಸಿ ತೀರ್ವನಿಸಲಾಗುವುದು. ಸೆಸ್ ಹೊರೆ ಕಡಿಮೆ ಮಾಡುವ ಕುರಿತು ಸಿಎಂ ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಬಜೆಟ್​ಗಿಂತ ಮೊದಲು ರ್ಚಚಿಸಿ ನಿರ್ಣಯ ಕೈಗೊಳ್ಳಲಾಗುವುದು. 3 ತಿಂಗಳಿಗೊಮ್ಮೆ ಮಾರುಕಟ್ಟೆ ಅಧಿಕಾರಿಗಳಿಂದ ಪ್ರಗತಿ ಪರಿಶೀಲನೆ ಸಭೆ ನಡೆಸಲು ಸೂಚಿಸುತ್ತೇನೆ. ಸಮಗ್ರ ಉತ್ತರ ಕರ್ನಾಟಕ ಅಭಿವೃಧಿ್ಧುೕ ನಮ್ಮ ಗುರಿ ಎಂದು ಬೊಮ್ಮಾಯಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts