ಕಾರ್ವಿುಕರ ಮುಷ್ಕರದಿಂದ ಕಸ ಸಂಗ್ರಹ ತಾಣವಾದ ಶೃಂಗೇರಿ

ಶೃಂಗೇರಿ: ಶಾಸಕ ಟಿ.ಡಿ.ರಾಜೇಗೌಡರ ನಿರ್ಲಕ್ಷ್ಯಂದ ಶೃಂಗೇರಿ ಕಸದಗೂಡಾಗುತ್ತಿದೆ ಎಂದು ಪಪಂ ಬಿಜೆಪಿ ಚುನಾಯಿತ ಸದಸ್ಯರು ಆರೋಪಿಸಿದ್ದಾರೆ.

ಪಪಂನ ಹೊರಗುತ್ತಿಗೆ ಕಾರ್ವಿುಕರು ನೇರ ವೇತನ ಪಾವತಿಗೆ ಪಪಂ ಕಚೇರಿ ಎದುರು ಮುಷ್ಕರ ನಡೆಸುತ್ತಿದ್ದರೂ ಅವರ ಬೇಡಿಕೆ ಈಡೇರಿಸಲು ಶಾಸಕರು ವಿಳಂಬ ಮಾಡುತ್ತಿದ್ದಾರೆ. ಪಟ್ಟಣಕ್ಕೆ ಲಕ್ಷಾಂತರ ಪ್ರವಾಸಿಗರು ಬಂದು ಹೋಗುತ್ತಾರೆ. ಪ್ರವಾಸಿಗರ ಸಂಖ್ಯೆ ಆಧಾರವಾಗಿಟ್ಟುಕೊಂಡು ಪಪಂ ರಚಿಸಲಾಗಿದೆ. ಶೃಂಗೇರಿ ಪ್ರವಾಸಿ ಸ್ಥಳ ಎಂಬುದನ್ನು ಮನಗಂಡು 20 ನೌಕರರನ್ನು ಕಾಯಂಗೊಳಿಸಿ ಪೌರನೌಕರರ ಬೇಡಿಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೊಪ್ಪ, ಎನ್.ಆರ್.ಪುರದಲ್ಲಿ ಮಾಜಿ ಶಾಸಕ ಡಿ.ಎನ್.ಜೀವರಾಜ್ ಸೂಚನೆ ಮೇರೆಗೆ ಕಾರ್ವಿುಕರಿಗೆ ವೇತನ ನೇರ ಪಾವತಿ ಮಾಡಲಾಗುತ್ತಿದೆ. ಆದರೆ ಶಾಸಕರು ಪೌರಕಾರ್ವಿುಕರಿಗೆ ಸ್ಪಷ್ಟ ಭರವಸೆ ನೀಡದಿರುವುದರಿಂದ ಪೌರಕಾರ್ವಿುಕರು ಕೆಲಸಕ್ಕೆ ಹಾಜರಾಗದೆ ಪಟ್ಟಣದಲ್ಲಿ ಕಸದ ರಾಶಿ ಸೃಷ್ಟಿಯಾಗಿದೆ ಎಂದು ದೂರಿದ್ದಾರೆ.

ಪಪಂ ಚುನಾವಣೆ ನಡೆದು 15 ದಿನವಾದರೂ ಬೋರ್ಡ್ ಸ್ಥಾಪನೆಗೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಪಪಂನಲ್ಲಿ ಬಿಜೆಪಿ ಅಧಿಕಾರ ಬಂದ ಕೂಡಲೇ ಪೌರನೌಕರರ ಪರ ನಿರ್ಣಯ ಅಂಗೀಕರಿಸಿ ಸರ್ಕಾರದ ಗಮನಕ್ಕೆ ತಂದು ಕಾರ್ವಿುಕರ ನ್ಯಾಯಯುತ ಬೇಡಿಕೆಗೆ ಆದ್ಯತೆ ನೀಡಲಾಗುವುದು ಎಂದು ಪಪಂ ಚುನಾಯಿತ ಸದಸ್ಯರಾದ ವೇಣುಗೋಪಾಲ್, ಹರೀಶ್ ವಿ. ಶೆಟ್ಟಿ, ರತ್ನಾಕರ ಶೆಟ್ಟಿ, ಪ್ರಕಾಶ್ ಎಂ.ಎಲ್. ಶ್ರೀವಿದ್ಯಾ, ಅರುಣ, ರಾಧಿಕಾ ಜಯಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *