ಕಾರ್ಯಾಚರಣೆಯಲ್ಲಿ 10 ಆಟೋ ವಶ

ಕೋಲಾರ: ಸಂಚಾರಿ ನಿಯಮ ಉಲ್ಲಂಘಿಸಿ ಆಟೋ ಚಾಲನೆ ಮಾಡುತ್ತಿದ್ದ ಚಾಲಕರಿಗೆ ಗುರುವಾರ ಬೆಳ್ಳಂಬೆಳಗ್ಗೆ ಸಂಚಾರಿ ಠಾಣೆ ಪೊಲೀಸರು ಶಾಕ್ ನೀಡಿದ್ದು, 10ಕ್ಕೂ ಹೆಚ್ಚು ಆಟೋಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಟೇಕಲ್ ಮುಖ್ಯರಸ್ಥೆ ಬಳಿ ಅಗತ್ಯಕ್ಕಿಂತ ಹೆಚ್ಚಿನ ಮಕ್ಕಳನ್ನು ಹತ್ತಿಸಿಕೊಂಡು ಆಟೋಗಳು ಸಂಚರಿಸುತ್ತಿದ್ದವು. ಈ ವೇಳೆ ಆಟೋ ವಶಕ್ಕೆ ಪಡೆದ ಪೊಲೀಸರು ತಪಾಸಣೆ ನಡೆಸಿದಾಗ ಆಟೋಗೆ ಪರವಾನಗಿ, ವಿಮೆ ಇಲ್ಲದಿರುವುದು, ಎಮಿಷನ್ ಟೆಸ್ಟ್ ಮಾಡಿಸದಿರುವುದು, ಚಾಲನಾ ಪರವಾನಗಿ ಆರ್​ಸಿಬುಕ್ ಮತ್ತಿತರ ದಾಖಲೆ ಇಲ್ಲದಿರುವುದು ಕಂಡು ಬಂತು.

ತಪಾಸಣೆ ನಡೆಸಿದ ಸುಮಾರು 25ರಲ್ಲಿ 10 ಆಟೋಗಳು ಸಮರ್ಪಕ ದಾಖಲೆ ಒದಗಿಸದೆ ಸಂಚಾರಿ ನಿಯಮ ಉಲ್ಲಂಘಿಸಿದ ಕಾರಣ ವಶಕ್ಕೆ ಪಡೆಯಲಾಯಿತು.

ಕಾರ್ಯಾಚರಣೆಯಲ್ಲಿ ಸಂಚಾರಿ ಪಿಎಸ್​ಐ ನವೀನ್ ಕುಮಾರ್, ನಾರಾಯಣಸ್ವಾಮಿ, ಸಂಚಾರಿ ಪೇದೆಗಳಾದ ವಿಜಯಕುಮಾರ್, ಕವಿರಾಜು, ಪ್ರಶಾಂತ್ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *