ಸಿನಿಮಾ

ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಇಲವಾಲ ಮತಗಟ್ಟೆ ಬಳಿ ಮತ ಕೇಳುವ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ದೂರದ ಮನೆಗಳಿಂದ ಮತದಾರರನ್ನು ವಾಹನಗಳಲ್ಲಿ ಮೂರು ಪಕ್ಷದ ಮುಖಂಡರು ಕರೆದುಕೊಂಡು ಬರುತ್ತಿದ್ದರು. ಕಾಂಗ್ರೆಸ್‌ನವರು ವಾಹನದಲ್ಲಿ ಕರೆತಂದ ಮತದಾರರ ಬಳಿ ಜೆಡಿಎಸ್ ಕಾರ್ಯಕರ್ತರು ಬಂದು ತಮ್ಮ ಪಕ್ಷಕ್ಕೆ ಮತಹಾಕುವಂತೆ ಮನವೊಲಿಸಲು ಮುಂದಾದರು. ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು, ಆಕ್ಷೇಪ ವ್ಯಕ್ತಪಡಿಸಿದರು. ಮಾತಿಗೆ ಮಾತು ಬೆಳೆದು ಎರಡು ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ವೇಳೆ ಮಧ್ಯ ಪ್ರವೇಶಿಸಿದ ಸ್ಥಳದಲ್ಲಿದ್ದ ಅರೆಸೇನಾ ಪಡೆ ಸಿಬ್ಬಂದಿ, ಎರಡು ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿ ದೂರ ಕಳುಹಿಸಿದ ಬಳಿಕ ಪರಿಸ್ಥಿತಿ ತಹಬದಿಗೆ ಬಂದು ಶಾಂತಿಯುತ ಮತದಾನ ಮುಂದುವರಿಯಿತು.

Latest Posts

ಲೈಫ್‌ಸ್ಟೈಲ್