ಕಾರ್ಮಿಕರ ಹಿತಾಸಕ್ತಿ ಮರೆತ ಸರ್ಕಾರಗಳು – ಸೋಮಶೇಖರ್ ವಿಷಾಧ -ಎಐಯುಟಿಯುಸಿಯ ಪ್ರಥಮ ಜಿಲ್ಲಾ ಸಮ್ಮೇಳನ 

blank

ದಾವಣಗೆರೆ: ಉಭಯ ಸರ್ಕಾರಗಳೂ ಕಾರ್ಮಿಕ ಹಿತಾಸಕ್ತಿಯನ್ನು ಮರೆತಿವೆ. ಅವರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿವೆ ಎಂದು ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ವಿಷಾಧಿಸಿದರು.
ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್‌ನ ಪ್ರಥಮ ದಾವಣಗೆರೆ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರ ಹಕ್ಕು ಖಾತ್ರಿಪಡಿಸದ ಸರ್ಕಾರಗಳು ಕನಿಷ್ಠ ವೇತನ, ಇಎಸ್‌ಐ, ಪಿಎಫ್ ಜಾರಿ ನೀಡುತ್ತಿಲ್ಲ. ಬೋನಸ್, ರಜಾ ಸೌಲಭ್ಯ ಇತ್ಯಾದಿಗೂ ಹೋರಾಟ ಮಾಡಿ ಪಡೆದುಕೊಳ್ಳುವ ಸ್ಥಿತಿ ಇದೆ. ಸುಮಾರು 20 ವರ್ಷಗಳ ಕಾಲ ಗುತ್ತಿಗೆ ಕೆಲಸ ಮಾಡಿದವರಿಗೆ ಸೇವಾ ಕಾಯಮಾತಿ ಆಗುತ್ತಿಲ್ಲ. ಗುತ್ತಿಗೆ ನೌಕರರ ಪಾಡು ನರಕಯಾತನೆಯದಾಗಿದೆ. ಕಾರ್ಮಿಕ ಇಲಾಖೆ ನೇಪಥ್ಯಕ್ಕೆ ಇದೆ ಎಂದು ಹೇಳಿದರು.
ದೇಶದಲ್ಲಿ ಆಶಾ, ಅಂಗನವಾಡಿ, ಬಿಸಿಯೂಟ ಮೊದಲಾದ ಯೋಜನೆ ಕಾರ್ಮಿಕರು 1 ಕೋಟಿ ಜನರಿದ್ದಾರೆ. ಸರ್ಕಾರ ಅವರನ್ನು ಕಾಯಂ ಮಾಡಿಕೊಳ್ಳುತ್ತಿಲ್ಲ. ಅವರಿಗೆ ನೀಡುತ್ತಿರುವ ಪ್ರೋತ್ಸಾಹಧನದಲ್ಲಿ ಕುಟುಂಬ ನಿರ್ವಹಣೆಯೂ ಕಷ್ಟವಾಗಿದೆ ಎಂದರು.
29 ಕಾರ್ಮಿಕ ಕಾಯ್ದೆಗಳನ್ನು ಏಕಪ್ಷಕೀಯವಾಗಿ ನಾಲ್ಕು ಸಂಹಿತೆಗಳನ್ನಾಗಿ ಮಾಡಿದ ಕೇಂದ್ರ ಸರ್ಕಾರ, ಇದರ ಮೂಲಕ ಬಂಡವಾಳಿಗರು, ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಕಾರ್ಮಿಕರ ಹೋರಾಟ ದಮನ ಮಾಡುವ ಹುನ್ನಾರ ಇದರಲ್ಲಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಸರ್ಕಾರ ಬದಲಾವಣೆ ಆದರೆ ಕಾರ್ಮಿಕರ ಸಮಸ್ಯೆಗಳು ಬಗೆಹರಿಯಲಿವೆ ಎಂಬ ಭ್ರಮೆ ಬೇಡ. ಇಷ್ಟು ವರ್ಷ ಆಳ್ವಿಕೆ ನೀಡಿದ್ದ ಕಾಂಗ್ರೆಸ್‌ನಿಂದಲೂ ಕಾರ್ಮಿಕರ ಬಿಕ್ಕಟ್ಟುಗಳು ಪರಿಹಾರವಾಗಿಲ್ಲ. ಶೋಚನೀಯ ಬದುಕು ಮುಂದುವರಿದಿದೆ ಎಂದ ಅವರು, ಕಾರ್ಮಿಕರಿಗೆ 35 ಸಾವಿರ ರೂ.ಗಳ ಕನಿಷ್ಠ ವೇತನದ ಜತೆಗೆ ಸೇವಾ ಭದ್ರತೆ ಸಿಗಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದ್ದು ಅನೇಕ ಕಾರ್ಖಾನೆಗಳು ಬಾಗಿಲು ಹಾಕುತ್ತಿವೆ. ಫ್ರಾನ್ಸ್, ಜರ್ಮನಿ ಮೊದಲಾದ ದೇಶಗಳಲ್ಲಿ ವಾರಕ್ಕೆ 30 ತಾಸು ದುಡಿಮೆ ಅವಧಿ ಇದೆ. ಹೀಗಿರುವಾಗ ಯುವಕರು ವಾರಕ್ಕೆ 70 ಗಂಟೆಗಳ ಕಾಲ ದುಡಿಮೆ ಮಾಡಬೇಕೆಂಬ ಇನ್ಫೋಸಿಸ್‌ನ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿಕೆ ಅಸಂಬದ್ಧ ಎಂದು ಟೀಕಿಸಿದರು.
ಇಂದು ಶಿಕ್ಷಣ, ಆರೋಗ್ಯ, ಬ್ಯಾಂಕ್, ರೈಲ್ವೆ ಎಲ್ಲವೂ ಖಾಸಗೀಕರಣ ಆಗಿವೆ. ದೇಶದ ಲೂಟಿಯೇ ಇದರ ಭಾಗವಾಗಿದೆ. ಅದಾನಿ, ಅಂಬಾನಿ ಮೊದಲಾದವರು ಶ್ರೀಮಂತರಾಗುತ್ತಿದ್ದರೆ, ಬಡವರ ಸ್ಥಿತಿ ಮಾತ್ರ ಬದಲಾಗಿಲ್ಲ. ಬಡತನ, ನಿರುದ್ಯೋಗ, ಬೆಲೆಯೇರಿಕೆ, ಹಣದುಬ್ಬರ ನಿಂತಿಲ್ಲ. ಕಾರ್ಮಿಕರ ಶೋಷಣೆಮುಕ್ತ ಆಗಬೇಕು. ಸಮಾಜವಾದ ಸ್ಥಾಪನೆ ಆಗಬೇಕಿದೆ ಎಂದು ಹೇಳಿದರು.
ಕೆನರಾಬ್ಯಾಂಕ್ ಸ್ಟಾಫ್ ಫೆಡರೇಷನ್‌ನ ಮಾಜಿ ಅದ್ಯಕ್ಷ ಎಂ.ಆರ್.ಹಿರೇಮಠ್ ಮಾತನಾಡಿ ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ದೆಹಲಿಯಲ್ಲಿ ರೈತರು ಒಂದು ವರ್ಷ ಕಾಲ ಹೋರಾಟ ಮಾಡಿದ್ದರ ತರುವಾಯ ಕೇಂದ್ರ ಸರ್ಕಾರ ತಿದ್ದುಪಡಿ ಹಿಂಪಡೆಯಿತು. ಈ ಹೋರಾಟ ನಮ್ಮೆಲ್ಲ ಕಾರ್ಮಿಕ ಸಂಘಟನೆಗಳಿಗೆ ದಿಕ್ಸೂಚಿಯಾಗಬೇಕು. ಹೋರಾಟಗಳು ಬಹುಮುಖಿ ಆಗಬೇಕು ಎಂದು ಆಶಿಸಿದರು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಯಾದಗಿರಿ ಮಾತನಾಡಿ ದಾವಣಗೆರೆ, ಕಾರ್ಮಿಕ ಚಳವಳಿಯ ನೆಲವಾಗಿದೆ. ಸರ್ಕಾರಗಳು ಖಾಸಗೀಕರಣ ನೀತಿ ಮೂಲಕ ಹೋರಾಟಗಳನ್ನು ಹತ್ತಿಕ್ಕುತ್ತಿವೆ. ಚಳವಳಿ ಇನ್ನಷ್ಟು ತೀವ್ರವಾಗಬೇಕಿದ್ದರೆ ಕಾರ್ಮಿಕರು ವೈಚಾರಿಕವಾಗಿಯೂ ಸದೃಢರಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಮಂಜುನಾಥ ಕೈದಾಳೆ, ಕಾರ್ಯದರ್ಶಿ ಮಂಜುನಾಥ್ ಕುಕ್ಕುವಾಡ, ಜಿಲ್ಲಾ ಉಪಾಧ್ಯಕ್ಷ ಶಿವಾಜಿರಾವ್, ತಿಪ್ಪೇಸ್ವಾಮಿ ಅಣಬೇರು, ಎನ್.ಎಚ್.ಪ್ರಕಾಶ್ ಇದ್ದರು.

Share This Article

honeymoon destinations : 2024 ರಲ್ಲಿ ನವವಿವಾಹಿತರನ್ನು ಆಕರ್ಷಿಸಿದ ನೆಚ್ಚಿನ ಹನಿಮೂನ್ ತಾಣಗಳು ಇವು..!

 honeymoon destinations  : ವ್ಯಕ್ತಿಯ ಆದ್ಯತೆಗಳು ಮತ್ತು ಆಯ್ಕೆಗಳು ವರ್ಷಗಳಲ್ಲಿ ಬದಲಾಗುತ್ತವೆ. ಈಗ ನಾವು 2024…

Kitchen Hacks: ಹಣ್ಣು, ತರಕಾರಿಗಳ ಸಿಪ್ಪೆ ಎಸೆಯುತ್ತಿದ್ದೀರಾ? ಹೀಗೆ ಮರುಬಳಕೆ ಮಾಡಬಹುದು ನೋಡಿ

Kitchen Hacks: ಹಣ್ಣುಗಳು, ತರಕಾರಿಗಳು ಆರೋಗ್ಯಕ್ಕೆ ಎಷ್ಟು ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ಇವುಗಳನ್ನು ಬಳಸಿದ…

ಹಣದ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಆಗಾಗ ಜಗಳವೇ? ಹೌದು ಎಂದಾದರೆ ಹೀಗೆ ಮಾಡಿ… Money Problems

Money Problems : ಪತಿ ಮತ್ತು ಪತ್ನಿ ಪರಸ್ಪರ ಅರ್ಥ ಮಾಡಿಕೊಂಡು ಒಟ್ಟಿಗೆ ಸಾಗಿದರೆ ಜೀವನ…