ಬಾಗಲಕೋಟೆ : ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹವೇಲಿ ಕ್ರಾಸ್ ಬಳಿ ನಸುಕಿನ ಜಾವ ನಡೆದಿದೆ.
ವಿಶಾಲ ಸರಗಣಾಚಾರಿ (೨೭) ಮೃತ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಕಾರಿನಲ್ಲಿದ್ದ ಇನ್ನಿಬ್ಬರ ವ್ಯಕ್ತಿಗಳಿಗೂ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಬಾಗಲಕೋಟೆ- ವಿದ್ಯಾಗಿರಿ ರಸ್ತೆಯಲ್ಲಿರುವ ಹವೇಲಿ ಕ್ರಾಸ್ ಸಮೀಪ ಈ ಘಟನೆ ಸಂಭವಿಸಿದ್ದು, ನಿಯಂತ್ರಣ ತಪ್ಪಿದ ಕಾರು ಪಲ್ಪಿ ಹೊಡೆದ ಪರಿಣಾಮ ವಿಶಾಲ ತಲೆಗೆ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆಂದು ಹೇಳಲಾಗುತ್ತಿದೆ.
TAGGED:ಬಾಗಲಕೋಟೆ