ಕಾರಿಗೆ ಲಾರಿ ಡಿಕ್ಕಿಯಾಗಿ ಇಬ್ಬರು ಮೃತ

ಶಿರಾಳಕೊಪ್ಪ: ಸಮೀಪದ ಭದ್ರಾಪುರ ಗ್ರಾಮದ ಬಳಿ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಲೆಬೆನ್ನೂರಿನ ಮಂಜಪ್ಪ (65) ಮತ್ತು ವಸಂತಮ್ಮ (45) ಮೃತರು. ಕಾರು ಮಲೆಬೆನ್ನೂರಿನಿಂದ ಆನವಟ್ಟಿಗೆ ಹೊರಟಿತ್ತು. ಶಿರಾಳಕೊಪ್ಪ ಮುಖಾಂತರ ಶಿವಮೊಗ್ಗಕ್ಕೆ ಹೋಗುತ್ತಿದ್ದ ಲಾರಿ ಭದ್ರಾಪುರ ಬಳಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟರು. ಆನವಟ್ಟಿಯ ಸಂಬಂಧಿಕರ ಮನೆಗೆ ಇವರು ಹೊರಟಿದ್ದಾಗ ಈ ಅಪಘಾತ ಸಂಭವಿಸಿದ್ದು ಕಾರಿನಲ್ಲಿ ಇಬ್ಬರೇ ಇದ್ದರು ಎನ್ನಲಾಗಿದೆ. ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಚಾಲಕನನ್ನು ಬಂಧಿಸಿ ಲಾರಿ ವಶಕ್ಕೆ ಪಡೆದಿದ್ದಾರೆ.