More

  ಕಾಯಕ ನಿಷ್ಠೆ ಸಂದೇಶಗಳು ಸಾರ್ವಕಾಲಿಕ

  ಶಿವಮೊಗ್ಗ: ವಚನಕಾರರು 12ನೇ ಶತಮಾನದಲ್ಲೇ ಕಾಯಕ ನಿಷ್ಠೆ ಬಗ್ಗೆ ತಿಳಿಸಿರುವ ಸಂದೇಶಗಳು ಸಾರ್ವಕಾಲಿಕ. ಪ್ರತಿಯೊಬ್ಬರೂ ಅವುಗಳನ್ನು ಪಾಲಿಸಿದರೆ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಅಭಿಪ್ರಾಯಪಟ್ಟರು.

  ಜಿಲ್ಲಾಡಳಿತದಿಂದ ಶುಕ್ರವಾರ ಏರ್ಪಡಿಸಿದ್ದ ಕಾಯಕ ಶರಣರ ಜಯಂತಿ ಉದ್ಘಾಟಿಸಿ ಮಾತನಾಡಿ, ಮೂಢನಂಬಿಕೆ, ಜಾತಿ ಪದ್ಧತಿಗಳ ವಿರುದ್ಧ ವೈಚಾರಿಕ ಕ್ರಾಂತಿ ನಡೆಸಿದ ಶಿವಶರಣರು ಜೀವನದ ಮೌಲ್ಯಗಳನ್ನು ಎತ್ತಿ ಹಿಡಿದಿದ್ದರು. ಇದು ಸದಾ ಕಾಲಕ್ಕೂ ಅನುಕರಣೀಯ ಎಂದರು.

  ಕಾಯಕ ಶರಣರ ದೊಡ್ಡ ಸಮೂಹವೇ 12ನೇ ಶತಮಾನದಲ್ಲಿ ಸಾಮಾಜಿಕ ಹಾಗೂ ಧಾರ್ವಿುಕ ಬದಲಾವಣೆಗೆ ಕಾರಣವಾಯಿತು. ಬಸವಣ್ಣ, ಅಕ್ಕಮಹಾದೇವಿ ಮುಂತಾದವರು ಜನರಲ್ಲಿನ ಮೌಢ್ಯ ದೂರಾಗಿಸುವಲ್ಲಿ ಇನ್ನಿಲ್ಲದ ಶ್ರಮ ವಹಿಸಿದ್ದರು. ಹೀಗಾಗಿ 12ನೇ ಶತಮಾನ ಐತಿಹಾಸಿಕವಾಗಿ ಮಹತ್ವದ್ದೆನಿಸಿದೆ ಎಂದು ಹೇಳಿದರು.

  ಸುಧಾರಣೆ ಆಗಬೇಕಾದರೆ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕಾಗಿದೆ. ಸಮಾಜದಲ್ಲಿ ಕೆಲವು ಜಯಂತಿಗಳನ್ನು ಆಚರಿಸಿದರೆ ಸಾಲದು. ಪಠ್ಯಪುಸ್ತಕಗಳಲ್ಲಿ ಇವರ ತತ್ವಗಳನ್ನು ಅಳವಡಿಸಬೇಕು. ಸಮಾಜದಲ್ಲಿ ಸಮಾನತೆ ಸಾರುವುದು ಬಹುಮುಖ್ಯ ಎಂದರು.

  ಉಪನ್ಯಾಸಕ ಡಾ. ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಸತ್ಯ, ಶುದ್ಧ ಕಾಯಕದ ಮೂಲಕ ಜೀವನ ನಡೆಸುವ ಕುರಿತಂತೆ ಅನೇಕ ವಚನಕಾರರು ತಮ್ಮ ಪರಿಣಾಮಕಾರಿಯಾದ ವಚನಗಳ ಮೂಲಕ ತಿಳಿಸಿದ್ದಾರೆ. ಜನರ ಬದುಕನ್ನು ರೂಪಿಸುವ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಮಾಡಿದ್ದರು. ಅವರ ವಚನಗಳು ಇಂದಿನ ಸಮಾಜಕ್ಕೂ ಪ್ರಸ್ತುತ ಎಂದರು.

  ಹರಿಹರ ಎಸ್​ಜೆವಿಸಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಎ.ಬಿ.ರಾಮಚಂದ್ರಪ್ಪ ಕಾಯಕ ಶರಣರ ಜಯಂತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ದಾಕ್ಷಾಯಿಣಿ ರಾಜಕುಮಾರ್ ಮತ್ತು ತಂಡದವರು ವಚನ ಗಾಯನ ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್, ಡಿಎಸ್​ಎಸ್ ಮುಖಂಡ ಎಸ್.ಟಿ.ಹಾಲೇಶಪ್ಪ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts