ಕಾಮಾಕ್ಷಿಯಮ್ಮ ದೇಗುಲದ ವಾರ್ಷಿಕೋತ್ಸವ

ಮಡಿಕೇರಿ: ನಗರದ ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದ 12ನೇ ವರ್ಷದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮತ್ತು ಕುಂಭಾಭಿಷೇಕ ಶ್ರದ್ಧಾಭಕ್ತಿಯಿಂದ ಜರುಗಿತು.

ಕೇರಳದ ಪಯ್ಯನೂರಿನ ಶ್ರೀ ಈಶ್ವರ ನಂಬೂದರಿಯವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪಶುದಾನ ಪುಣ್ಯಾಹ, ವಿಷ್ಣು ಪೂಜೆ, ಭಗವತಿ ಸೇವೆ, ಸುದರ್ಶನ ಹೋಮ, ವಾಸ್ತುಬಲಿ ಪೂಜೆ, ಗಣಪತಿ ಹೋಮ, ಮಹಾಮೃತ್ಯುಂಜಯ ಹೋಮ, ಬಿಂಬ ಶುದ್ಧಿ, ಕಳಸಗಳಿಗೆ ವಿಶೇಷ ಪೂಜೆಗಳು ನೆರವೇರಿದವು.

ಕೇರಳದ ಸಾಂಪ್ರದಾಯಿಕ ಚಂಡೆವಾದ್ಯ, ಸಿಂಗಾರಿ ಮೇಳ, ತೇಯ್ಯಂ ಕಥಕ್ಕಳಿ, ನವಿಲು ಕುಣಿತ ಹಾಗೂ ಕೊಡಗಿನ ವೈವಿಧ್ಯಮಯ ಕಲಾ ತಂಡಗಳೊಂದಿಗೆ ನಗರದ ಮುಖ್ಯಬೀದಿಯಲ್ಲಿ ಕಳಸಗಳ ಮೆರವಣಿಗೆ ನಡೆಯಿತು.

ಬಾಲಕ ಮಂಡಳಿ ವತಿಯಿಂದ ಅಂದಾಜು 10 ಪವನ್ ಹೊಂದಿರುವ ಚಿನ್ನದ ತಾಳಿ ಸರಗಳನ್ನು ಕಂಚಿಕಾಮಾಕ್ಷಿಯಮ್ಮ ಹಾಗೂ ಮುತ್ತು ಮಾರಿಯಮ್ಮ ದೇವಿಗೆ ಸಮರ್ಪಿಸಲಾಯಿತು. ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಪಿ.ಎ. ಲೋಕನಾಥ್, ಉಪಾಧ್ಯಕ್ಷ ಜಿ.ವಿ. ರವಿಕುಮಾರ್, ಕೋಶಾಧಿಕಾರಿ ರಮೇಶ್, ಗೌರವ ಅಧ್ಯಕ್ಷ ಜಿ.ಎ. ಚಾಮಿ, ಉಪಾಧ್ಯಕ್ಷ ಜಿ.ಪಿ. ಶ್ರೀನಿವಾಸ್ ಮತ್ತಿತರರು ಉಸ್ತುವಾರಿ ವಹಿಸಿದ್ದರು.

Leave a Reply

Your email address will not be published. Required fields are marked *