ಕಾಫಿ ತೋಟದಲ್ಲಿ ಕಾಣಿಸಿಕೊಂಡ ಹೆಬ್ಬಾವು

ಗೋಣಿಕೊಪ್ಪಲು: ಪಾಲಿಬೆಟ್ಟ ಗ್ರಾಮದ ಕೋಟೆಬೆಟ್ಟ ಕಾಫಿ ತೋಟದಲ್ಲಿ ಸೋಮವಾರ ಪತ್ತೆಯಾದ ಬೃಹತ್ ಗಾತ್ರದ ಹೆಬ್ಬಾವನ್ನು ಹಿಡಿದು ಅರಣ್ಯಕ್ಕೆ ಬಿಡಲಾಯಿತು.

ಸುಮಾರು 10 ಅಡಿಗಿಂತಲೂ ಉದ್ದವಿದ್ದ ಹಾವನ್ನು ಗೋಣಿಕೊಪ್ಪದ ಉರಗ ಪ್ರೇಮಿ ಶಾಜಿ, ತಿತಿಮತಿ ವಲಯ ಅರಣ್ಯ ಆರ್‌ಆರ್‌ಟಿ ತಂಡದ ನಾಯಕ ಸಂಜು ಸಂತೋಷ್ ಹಿಡಿದು ತಿತಿಮತಿ ಅರಣ್ಯಕ್ಕೆ ಬಿಟ್ಟರು.

ಕೋಟೆಬೆಟ್ಟ ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಹಾವು ಕಾಣಿಸಿಕೊಂಡಿದೆ. ಸುತ್ತಿಕೊಂಡು ಮಲಗಿದ್ದ ಹೆಬ್ಬಾವು ಕಾರ್ಮಿಕನ ಕಾಲಿಗೆ ತಗುಲಿದೆ. ಹಾವನ್ನು ಕಂಡು ಭಯಗೊಂಡ ಕಾರ್ಮಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ತಿತಿಮತಿ ಆರ್‌ಆರ್‌ಟಿ ತಂಡದ ಸಿಬ್ಬಂದಿ ಹಾವನ್ನು ಹಿಡಿದು ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾದರು.

Leave a Reply

Your email address will not be published. Required fields are marked *