ಕಾಪಾಡು ದೇವಿ ಕೋಡಿಯಲ್ಲಮ್ಮ

ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಕೋಡಿ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ರಥೋತ್ಸವ ಅಪಾರ ಭಕ್ತ ಸಮೂಹದೊಂದಿಗೆ ಅದ್ದೂರಿಯಾಗಿ ನೆರವೇರಿತು. ರಥೋತ್ಸವ ವೇಳೆ ಭಕ್ತರಿಂದ ದೇವಿಯ ನಾಮಸ್ಮರಣೆ, ಉಧೋ ಉಧೋ ಉದ್ಘಾರ ಘೊಷಣೆಗೈದರು. ರಥಕ್ಕೆ ಉತ್ತತ್ತಿ, ಬೆಲ್ಲದ ಚೂರು, ಬಾಳೆಹಣ್ಣು ಎಸೆದು ಭಕ್ತಿಭಾವ ಮೆರೆದರು. ಇತ್ತೀಚೆಗೆ ವಿವಾಹ ಬಂಧನಕ್ಕೊಳಗಾದ ನವ ಜೋಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಥ ನೋಡಲು ಆಗಮಿಸಿದ್ದು ಕಂಡು ಬಂತು. ಮಂಡಕ್ಕಿ, ಮಿರ್ಚಿಯನ್ನು ಭಕ್ತರು ಸವಿದರು.

ಬೆಳಗ್ಗೆ ವಾದ್ಯವೈಭವಗಳೊಂದಿಗೆ ಶೃಂಗರಿಸಿದ ಎತ್ತಿನ ಬಂಡಿಯಲ್ಲಿ ದೇವಿ ಭಾವಚಿತ್ರದ ಭವ್ಯ ಮೆರವಣಿಗೆ ಪ್ರಮುಖ ರಸ್ತೆಗಳ ಮೂಲಕ ನೆರವೇರಿತು. ಶನಿವಾರ ಸಂಜೆ 5ಕ್ಕೆ ಕಡುಬಿನ ಕಾಳಗ ಮತ್ತು ಜಾತ್ರಾಮಹೋತ್ಸವ ಅಂಗವಾಗಿ ಪಾರಂಪರಿಕವಾಗಿ ನಡೆದು ಬಂದ ಬಯಲು ಕುಸ್ತಿಗಳು ಏ. 23, 24, 25 ರಂದು ಮೂರು ದಿನಗಳ ಕಾಲ ದೇವಸ್ಥಾನ ಹತ್ತಿರದ ಬಯಲಿನಲ್ಲಿ ನಡೆಯಲಿವೆ.

Leave a Reply

Your email address will not be published. Required fields are marked *