More

  ಕಾನೆಹಳ್ಳಕ್ಕೆ ಸೇತುವೆ ನಿರ್ಮಿಸಿ

  ಪರಶುರಾಮಪುರ: ಗ್ರಾಮದ ಹೊರವಲಯದ ಕಲ್ಯಾಣದುರ್ಗ ಮಾರ್ಗದ ರಾಜ್ಯ ಹೆದ್ದಾರಿಯ ಮುಖ್ಯರಸ್ತೆಯಲ್ಲಿನ ಕಾನೆಹಳ್ಳಕ್ಕೆ ಸೇತುವೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
  ಈ ರಸ್ತೆ ಕರ್ನಾಟಕ-ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತಿದ್ದು, ಆಂಧ್ರದ ಅನಂತಪುರ, ಕಲ್ಯಾಣದುರ್ಗ, ಪುಟ್ಟಪರ್ತಿ, ಕರ್ನೂಲ್ ನಗರಗಳಿಗೆ ತೆರಳಲು ಅತಿ ಸುಲಭವಾಗಿದೆ.
  ಹೋಬಳಿಯ ವ್ಯಾಪ್ತಿಯ ಕರೇಕಲ್ಲಹಟ್ಟಿ, ಕೊರ‌್ಲಕುಂಟೆ, ಬೊಮ್ಮನಕುಂಟೆ, ವೃಂದಾವನಹಳ್ಳಿ, ಪಗಡಲಬಂಡೆ, ಜಾಜೂರು ಸೇರಿದಂತೆ ಹತ್ತಾರು ಹಳ್ಳಿಗಳ ಶಾಲಾ, ಕಾಲೇಜು ವಿದ್ಯಾರ್ಥಿಗಳು ನಿತ್ಯ ಕಾಲ್ನಡಿಗೆ, ಆಟೋ, ದ್ವಿಚಕ್ರವಾಹನ, ಲಘುವಾಹನಗಳ ಮೂಲಕ ಪ್ರಯಾಣ ಮಾಡುತ್ತಾರೆ. ಸ್ವಲ್ಪ ಆಯ ತಪ್ಪಿದರೂ ಹಳ್ಳಕ್ಕೆ ಬೀಳುವುದು ಗ್ಯಾರಂಟಿ. ಹೀಗಾಗಿ ಕೂಡಲೇ ಚಳ್ಳಕೆರೆ ಪಿಡಬ್ಲ್ಯುಡಿ, ಜಿಲ್ಲಾಡಳಿತ ಎಚ್ಚೆತ್ತು ಕೂಡಲೇ ಬ್ರಿಡ್ಜ್ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
  ಪ್ರತಿಭಟನೆ ಎಚ್ಚರಿಕೆ:
  ಕಾನೆಹಳ್ಳಕ್ಕೆ ಕೂಡಲೇ ಬ್ರಿಡ್ಜ್ ನಿರ್ಮಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರೇಕಲ್ಲಹಟ್ಟಿ ರಾಮಪ್ಪ, ಕೊರ‌್ಲಕುಂಟೆ ಚನ್ನಕೇಶವ, ಕೆಂಗಪ್ಪ, ನರೇಂದ್ರ ಎಚ್ಚರಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts