ಕ್ಷಾತ್ರತೇಜ ಮರೆತಿದ್ದೇ ಕಾಶ್ಮೀರ ಸಮಸ್ಯೆಗೆ ಕಾರಣ

ಬೆಂಗಳೂರು: ಆಕ್ರಮಣಕ್ಕೆ ತಕ್ಕ ಪರಾಕ್ರಮದ ಉತ್ತರ (ಕ್ಷಾತ್ರತೇಜ) ಭಾರತದ ಸತ್ವಗಳಲ್ಲಿ ಒಂದಾಗಿದ್ದು, ಅದನ್ನು ಸೂಕ್ತ ಕಾಲದಲ್ಲಿ ತೋರದ ಪರಿಣಾಮದಿಂದಲೇ ಕಾಶ್ಮೀರದ ವಿಚಾರದಲ್ಲಿ ಹಿನ್ನಡೆ ಎದುರಿಸುವಂತಾಗಿದೆ ಎಂದು ಸಾಹಿತಿ ಸಂದೀಪ್ ಬಾಲಕೃಷ್ಣ ವಿಶ್ಲೇಷಿಸಿದ್ದಾರೆ. ಜಯನಗರದ ರಾಷ್ಟ್ರೆೊತ್ಥಾನ ಶಾರೀರಿಕ ಕೇಂದ್ರದಲ್ಲಿ ಜಮ್ಮು-ಕಾಶ್ಮೀರ ಅಧ್ಯಯನ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪಾಕಿಸ್ತಾನ, ಜಿಹಾದ್ ಮತ್ತು ರಾಜಕಾರಣ’ ಕುರಿತು ಉಪನ್ಯಾಸ ನೀಡಿದರು. 24 ಗಂಟೆಗಳ ಹಿಂದೆ ನಡೆದಿದ್ದನ್ನು ಹೇಳಬಲ್ಲ ನಾವು, 6 ಸಾವಿರ ವರ್ಷಗಳ ಇತಿಹಾಸ ಮರೆತಿದ್ದೇವೆ. ಹಿಂದುಸ್ತಾನವನ್ನು ವಶಪಡಿಸಿಕೊಳ್ಳಬೇಕೆಂಬ ಮೊಘಲರ ಭಗ್ನ ಕನಸನ್ನು ಪೂರ್ಣಗೊಳಿಸಲು ಪಾಕ್ ಮುಂದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೆಹಲಿಯ ಜೆಎನ್​ಯುುದಲ್ಲಿ ಪಾಕ್ ಬೆಂಬಲಿಸಿ ಘೋಷಣೆ ಕೂಗುತ್ತಾರೆ. ಕೆಲವು ಪ್ರಾಧ್ಯಾಪಕರು ಸರ್ಕಾರಿ ಸೇವೆಯಲ್ಲಿರುವಾಗಲೇ ಪಾಕ್ ಪರ ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದಾಗ ನಾವು ಭಾರತದಲ್ಲಿದ್ದೇವೊ ಅಥವಾ ಪಾಕ್​ನಲ್ಲಿ ಇದ್ದೇವೊ ಎಂಬ ಅನುಮಾನ ಉಂಟಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂಶೋಧಕ ಪ್ರದೀಪ್​ಕುಮಾರ್ ಶರ್ವ, ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ರಾಜ್ಯ ಸಂಚಾಲಕ ವಸಂತ ಉಪಸ್ಥಿತರಿದ್ದರು.

ಪಾಕಿಸ್ತಾನದ ಇತಿಹಾಸ(ಅವಿಭಜಿತ ಭಾರತ)ದಲ್ಲಿ ಹಿಂದುಗಳ ಪಾತ್ರದ ಕುರಿತಾಗಿದ್ದ ದಾಖಲೆಗಳು ಲಭ್ಯವಿಲ್ಲ. ಭಾರತದ ಪಠ್ಯದಲ್ಲಿ ಎಲ್ಲಿಯೂ ಪಾಕಿಸ್ತಾನದಲ್ಲಿದ್ದ ಹಿಂದುಗಳ ಶ್ರದ್ಧಾಕೇಂದ್ರಗಳು, ಅಲ್ಲಿ ನೆಲೆಸಿದ್ದ ಹಿಂದುಗಳ ವಿಚಾರ ಉಲ್ಲೇಖವಿಲ್ಲ. ನೆಹರು ತಪು್ಪಗಳು ಕೂಡ ಇದಕ್ಕೆ ಕಾರಣ.

| ಸಂದೀಪ್ ಬಾಲಕೃಷ್ಣ ಸಾಹಿತಿ

ಪಾಕ್​ಗೆ ನಿಷ್ಠರು

ಕಾಶ್ಮೀರದಲ್ಲಿ ಭಾರತೀಯರು ಪಾಕಿಸ್ತಾನವನ್ನು ಹಿಮ್ಮೆಟ್ಟಿಸುವ ಕಾರ್ಯವನ್ನು ಮರೆತಿರುವ ಪರಿಣಾಮವೇ ಭಾರತ ಕುಗ್ಗುವ ಸ್ಥಿತಿ ಎದುರಾಗಿದೆ. ಎಲ್ಲರೂ ಇತಿಹಾಸವನ್ನು ಮರೆತಿರುವುದರ ಪರಿಣಾಮ ಅದು ಇತರೆಡೆಗೆ ಹರಡುವ ಭೀತಿಯೂ ಇದೆ ಎಂದು ಸಂದೀಪ್ ಬಾಲಕೃಷ್ಣ ಹೇಳಿದರು. ಕೆಲವು ರಾಜಕಾರಣಿಗಳು, ಬುದ್ಧಿಜೀವಿಗಳೆನಿಸಿಕೊಂಡವರು ಪಾಕ್​ಗೆ ನಿಷ್ಠರಾದವರಂತೆ ವರ್ತಿಸುತ್ತಾರೆ. ಈ ಕಡೆ ನಮ್ಮ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಅರಿಯದ ಸ್ಥಿತಿಯಲ್ಲಿ ಸಮಾಜವಿದೆ. ಕಾಶ್ಮೀರದಲ್ಲಿ ನಿರಂತರ ದಬ್ಬಾಳಿಕೆ ಮೂಲಕ ಒತ್ತಡ ಹೇರಲಾಗುತ್ತಿದೆ. ಹಂತಹಂತವಾಗಿ ಭಾರತದ ಪ್ರದೇಶಗಳನ್ನು ಪ್ರತ್ಯೇಕತಾವಾದಿಗಳು ತಮ್ಮದಾಗಿಸಿಕೊಳ್ಳುತ್ತಿದ್ದಾರೆ ಎಂದು ಕಾಶ್ಮೀರದ ಚಿತ್ರಣವನ್ನು ಬಿಚ್ಚಿಟ್ಟರು.