More

  ಕಾಣೆಯಾದ ಪರಸ್ಪರ ಅಂತರ

  ಹುಬ್ಬಳ್ಳಿ: ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಪರಸ್ಪರ ಅಂತರ ಕಾಪಾಡದಿರುವುದು, ಸರಿಯಾಗಿ ಮಾಸ್ಕ್ ಧರಿಸದಿರುವುದು, ರಸ್ತೆ ಮೇಲೆ ಉಗುಳುವುದು ನಗರದಲ್ಲಿ ಮುಂದುವರಿದಿದೆ.

  ನಗರದ ಮಿನಿ ವಿಧಾನಸೌಧದಲ್ಲಿರುವ ಉಪ ನೋಂದಣಿ ಕಚೇರಿಗೆ ಶುಕ್ರವಾರ ಆಗಮಿಸಿದ್ದ ಜನ ಪರಸ್ಪರ ಅಂತರ ಕಾಯ್ದುಕೊಳ್ಳದೇ ನಿಂತಿದ್ದರು. ಮಾಸ್ಕ್ ಹಾಕಿದ್ದರೂ ಅದನ್ನು ಸರಿಯಾಗಿ ಧರಿಸದೇ ಪರಸ್ಪರ ಚರ್ಚೆಯಲ್ಲಿ ತೊಡಗಿದ್ದರು.

  ಉಪ ನೋಂದಣಿ ಕಚೇರಿಯಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಬಿಳಿ ಬಣ್ಣದ ಗುರುತು ಹಾಕಲಾಗಿದೆ. ಆದರೆ, ಕಚೇರಿ ಹೊರಗೆ ನೋಂದಣಿ ಕೆಲಸಕ್ಕೆ ಆಗಮಿಸಿದ್ದ ಜನರು ಗುಂಪುಗುಂಪಾಗಿ ನಿಂತು, ರ್ಚಚಿಸುತ್ತಿದ್ದರು. ಪಕ್ಕದಲ್ಲಿಯೇ ಗ್ರಾಮೀಣ ಪೊಲೀಸ್ ಠಾಣೆ ಇದ್ದರೂ, ಲಾಕ್​ಡೌನ್ ನಿಯಮ ಪಾಲಿಸುವಂತೆ ಪೊಲೀಸರು ಅಲ್ಲಿದ್ದ ಜನರಿಗೆ ತಿಳಿಹೇಳುವುದಕ್ಕೆ ಮುಂದಾಗಲಿಲ್ಲ.

  ಅಂಗವಿಕಲ, ವಿಧವೆ ಸೇರಿ ವಿವಿಧ ಪಿಂಚಣಿ ಪಡೆಯುವುದಕ್ಕಾಗಿ ದಾಖಲೆ ಸಲ್ಲಿಸಲು ಕಂದಾಯ ಕಚೇರಿಯ ಕೌಂಟರ್ ಬಳಿ ನಿಂತಿದ್ದ ಮಹಿಳೆಯರೂ ಪರಸ್ಪರ ಅಂತರ ಮರೆತಂತೆ ವರ್ತಿಸಿದರು. ಹೊಸ ಹಾಗೂ ಹಳೇ ಬಸ್ ನಿಲ್ದಾಣಗಳಲ್ಲಿ ಶುಕ್ರವಾರವೂ ಸಾಕಷ್ಟು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿರುವ ವಾತಾವರಣ ಸೃಷ್ಟಿಯಾಗಿತ್ತು. ಆಗೊಮ್ಮೆ, ಈಗೊಮ್ಮೆ ಎನ್ನುವಂತೆ ಬೆರಳೆಣಿಕೆಯ ಪ್ರಯಾಣಿಕರು ನಿಲ್ದಾಣಕ್ಕೆ ಬರುತ್ತಿದ್ದರು. ಪ್ರಯಾಣಿಕರಲ್ಲಿ ಅನೇಕರು ಸರಿಯಾಗಿ ಮಾಸ್ಕ್ ಧರಿಸಿರಲಿಲ್ಲ. ಬಸ್ ನಿಲ್ದಾಣದ ಒಳಗೆ, ಮಾರುಕಟ್ಟೆ, ರಸ್ತೆ ಸೇರಿದಂತೆ ಸಿಕ್ಕಸಿಕ್ಕಲ್ಲಿ ಜನರು ಉಗುಳುತ್ತಿರುವುದು ಕಂಡುಬಂದಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts