ತನ್ನದೇ ಕಾಫಿ ತೋಟದಲ್ಲಿ ಕಾಡು ಕುರಿ ಬೇಟೆಯಾಡಿದ್ದವನನ್ನು ಬಂಧಿಸಿದ ಅರಣ್ಯ ಸಂಚಾರ ದಳದ ಪೊಲೀಸರು

ಕೊಡಗು: ಕಾಡುಕುರಿ ಬೇಟೆಯಾಡಿದ ಆರೋಪದ ಮೇಲೆ ಮಡಿಕೇರಿ ತಾಲೂಕಿನ ಹೆಬೆಟ್ಟಗೇರಿ ಗ್ರಾಮದ ನಿಚಾಸಿ ಎಚ್.ಸಿ. ಅಪ್ಪಣ್ಣ (೫೬) ಎಂಬಾತನನ್ನು ಅರಣ್ಯ ಸಂಚಾರ ದಳದ ಪೊಲೀಸರು ಬಂಧಿಸಿದ್ದಾರೆ.

ತನ್ನ ಕಾಫಿ ತೋಟದಲ್ಲಿ ಉರುಳು ಹಾಕಿ ಕಾಡುಕುರಿಯೊಂದನ್ನು ಅಪ್ಪಣ್ಣ ಬೇಟೆಯಾಡಿದ್ದ. ವಿಷಯ ತಿಳಿದು ಸೋಮವಾರ ರಾತ್ರಿ ಆತನ ಮನೆ ಮೇಲೆ ಮಡಿಕೇರಿ ಅರಣ್ಯ ಸಂಚಾರ ದಳ ಪೊಲೀಸರು ದಾಳಿ ಮಾಡಿದ್ದರು.

ದಾಳಿ ವೇಳೆ 6 ಕೆ.ಜಿ. ಬೇಯಿಸಿದ ಮಾಂಸ ಪತ್ತೆಯಾಗಿತ್ತು. ಅಪ್ಪಣ್ಣನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮಾಂಸವು ಕಾಡುಕುರಿಯದ್ದು ಎಂದು ಅಪ್ಪಣ್ಣ ಒಪ್ಪಿಕೊಂಡರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಪ್ಪಣ್ಣ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾ’ಗಿ ಅರಣ್ಯ ಸಂಚಾರ ದಳ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *