ಕಾಡುಬೆಕ್ಕು ಸಾಗಿಸುತ್ತಿದ್ದ ವ್ಯಕ್ತಿ ಬಂಧನ 

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಮದಲ್ಲಿ ಅಳಿವಿನಂಚಿಲ್ಲಿರುವ ಕಾಡುಬೆಕ್ಕನ್ನು ಕೊಂದು ಸಾಗಿಸುತ್ತಿದ್ದ ಒಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಸಂಜೆ ಬಂಧಿಸಿದ್ದು. ಪರಾರಿಯಾದ ವ್ಯಕ್ತಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ಸೊರಬ ತಾಲೂಕಿನ ಕುದುರೆಗಣಿಯ ರಮೇಶ ಕೃಷ್ಣಬಾಬು ಭೋವಿ ಬಂಧಿತ ವ್ಯಕ್ತಿ. ಕುದುರೆಗಣಿಯ ಶಿವು ವೆಂಕಟೇಶ ಭೋವಿ ಪರಾರಿಯಾಗಿದ್ದಾನೆ.
ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಡಿ. ಸುದರ್ಶನ, ಸಿದ್ದಾಪುರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಶೇಖ್ ಅವರ ಮಾರ್ಗದರ್ಶನದಲ್ಲಿ ಸಿದ್ದಾಪುರ ವಲಯ ಅರಣ್ಯಾಧಿಕಾರಿ ಕಿರಣಕುಮಾರ ವೈ.ಕೆ., ಉಪವಲಯ ಅರಣ್ಯಾಧಿಕಾರಿ ಅಶೋಕ ಸಿ. ಪೂಜಾರ, ಅರಣ್ಯ ರಕ್ಷಕರಾದ ಮಾರುತಿ ಜಿ. ನಾಯ್ಕ, ಹನುಮಂತ ಕಿಲಾರಿ, ಕ್ಷೇಮಾಭಿವೃದ್ಧಿ ನೌಕರ ರಾಮ ನಾಗು ನಾಯ್ಕ, ಚಾಲಕ ರಾಜು ಟಿ. ನಾಯ್ಕ ಕಾರ್ಯಾಚರಣೆಯಲ್ಲಿ ಇದ್ದರು.