More

  ಕಾಂಗ್ರೆಸ್ ವ್ಯಾರಂಟಿ ಖತಂ ಆಗಿದೆ


  ಯಾದಗಿರಿ: ದೇಶದಲ್ಲಿ ಕಾಂಗ್ರೆಸ್ನ ವ್ಯಾರಂಟಿ ಖತಂ ಅಗಿದ್ದು ಜನರಿಗೆ ಗ್ಯಾರೆಂಟಿ ಕೊಡುತ್ತೇವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ವ್ಯಂಗ್ಯವಾಡಿದರು.
  ನಗರದ ಮುದ್ನಾಳ ಲೇಔಟ್ ನಲ್ಲಿ ಶನಿವಾರ ಬಿಜೆಪಿ ಅಭ್ಯಥರ್ಿ ವೆಂಕಟರಡ್ಡಿ ಮುದ್ನಾಳ್ ಪರ ಆಯೋಜಿಸಿದ್ದ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ರಾಜ್ಯ ಕಾಂಗ್ರೆಸ್ನಲ್ಲಿ ಅಕಾರಕ್ಕಾಗಿ ಕಚ್ಚಾಟ ಆರಂಭಗೊಂಡಿದೆ. ಅಲ್ಲಿನ ನಾಯಕರಲ್ಲಿ ಒಗ್ಗಟ್ಟಿಲ್ಲ. ಇನ್ನೂ ಸತತ 40 ವರ್ಷ ಗಾಂ ಖಾನ್ದಾನ್ ಲೋಕಸಭೆಯಲ್ಲಿ ಅಕಾರ ನಡೆಸಿತ್ತು. ಆದರೆ, ಅವರು ಒಂದು ದಿನವಾದರೂ ಜನರ ಬಳಿಗೆ ಬಂದಿದ್ದಾರೆಯೇ? ಎಂದು ಪ್ರಶ್ನಿಸಿದರು.
  ದೇಶದಲ್ಲಿ ಹೆಮ್ಮಾರಿ ಕರೊನಾ ತಂಡವವಾಡುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ನಿಭರ್ೀತಿಯಿಂದ ಎದುರಿಸಿದರು. ಕರೊನಾ ವ್ಯಾಕ್ಸಿನ್ ಕಂಡು ಹಿಡಿದಾಗ ಇದೇ ಕಾಂಗ್ರೆಸ್ನವರು ಅದು ನಕಲಿ ಎಂದು ಅಪಪ್ರಚಾರ ಮಾಡಿದ್ದರು. ಆಗ ಪ್ರಧಾನಿ ಮೋದಿ ಅವರೇ ಮೊಟ್ಟ ಮೊದಲು ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮೂಲಕ ಜನತೆಗೆ ಧೈರ್ಯ ತುಂಬಿದರು ಎಂದು ಹೇಳಿದರು.
  ರಾಜ್ಯದಲ್ಲಿ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಅಕಾರಕ್ಕೆ ಕೆಕೆಆರ್ಡಿಬಿಗೆ 7500 ಕೋಟಿ ಒದಗಿಸಲಾಗುವುದು. ನಮ್ಮ ಸಕರ್ಾರ 450 ರಾಷ್ಟ್ರೀಯ ಹೆದ್ದಾರಿ, ಬೀದರ್- ನಾಂಡೆಡ್ ರೈಲ್ವೆ ಲೈನ್, ರಾಜ್ಯದಲ್ಲಿ 10 ಸಾವಿರ ಕಿ.ಮೀಟರ್ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ ಗ್ರಾಮೀಣ ರಸ್ತೆ ನಿಮರ್ಾಣ ಮಾಡಲಾಗಿದೆ.ಸೂರತ್ ಚೈನ್ನೈ ಎಕಾನಾಮಿಕ್ ಕಾರಿಡಾರ್ ಯೋಜನೆ ಪ್ರಗತಿಯಲ್ಲಿದೆ. ಶಾಕ ಮುದ್ನಾಳ್ರನ್ನು ಮತ್ತಿಮ್ಮೆ ಆರಿಸಿ ತಂದಲ್ಲಿ 10 ಗಿಗಾ ಮೆಗವ್ಯಾಟ್ ಸೌರ ವಿದ್ಯತ್ ಘಟಕ ಆರಂಭಿಸಲಾಗುವುದು. ಯಾದಗಿರಿಯಲ್ಲಿ ಸಕರ್ಾರಿ ನಸಿರ್ಂಗ್ ಕಾಲೇಜು ಮಂಜೂರುಗೊಳಿಸಲಾಗುವುದು ಎಂದು ಭರವಸೆ ನೀಡಿದ ಸ್ಮೃತಿ, ರಾಜ್ಯ ಬಿಜೆಪಿ ಪ್ರನಾಳಿಕೆಯಲ್ಲಿನ ಭರವಸೆಗಳ ಮಹತ್ವವನ್ನು ಒಂದೊಂದಾಗಿಯೇ ತಿಳಿಸುವ ಪ್ರಯತ್ನ ಮಾಡಿದರು. ಬಡವರಿಗೆ ನಿತ್ಯ ಅರ್ಧ ಲೀಟರ್ ಹಾಲು, ಪರಿಶಿಷ್ಟ ಜಾತಿ, ಪಂಗಡ ಮತ್ತು ಬುಡಕಟ್ಟು ಮಹಿಳೆಯರಿಗೆ 10 ಸಾವಿರ ರೂ.ಫಿಕ್ಸ್ ಡೆಪಾಸಿಟ್ ಹೀಗೆ ನಾನಾ ಯೋಜನೆಗಳ ಬಗ್ಗೆ ವಿವರಿಸಿದರು.
  ಅಭ್ಯಥರ್ಿ ವೆಂಕಟರಡ್ಡಿ ಮುದ್ನಾಳ್, ಜಾಖರ್ಂಡ್ ಶಾಸಕ ಅನಂತಕುಮಾರ್ ಓಜಾ, ಬಿಜೆಪಿ ಜಿಲ್ಲಾದ್ಯಕ್ಷ ಡಾ.ಶರಣಭೂಪಾಲರಡ್ಡಿ, ನಗರಸಭೆ ಅದ್ಯಕ್ಷ ಸುರೇಶ ಅಂಬಿಗೇರ, ಚಂದ್ರಕಲಾ ಮಡ್ಡಿ, ಪ್ರಮುಖರಾದ ದೇವೇಂದ್ರನಾಥ ನಾದ್, ಸಿದ್ದಪ್ಪ ಹೊಟ್ಟಿ, ಭೀಮನಗೌಡ ಕ್ಯಾತನಾಳ, ದೇವರಾಜ ನಾಯಕ, ವೀಣಾ ಮೋದಿ, ಸುನೀತಾ ಚವ್ಹಾಣ, ಸ್ವಾಮಿದೇವ ದಾಸನಕೇರಿ ಇದ್ದರು.
  ನೀಲಕಂಠರಾಯ ಯಲ್ಹೇರಿ ಪ್ರಾಸ್ತಾವಿಕ ಮಾತನಾಡಿದರು. ವೆಂಕಟರಡ್ಡಿ ಅಬ್ಬೆತುಮಕೂರ ಸ್ವಾಗತಿಸಿದರು. ಶರಣಗೌಡ ಬಾಡಿಯಾಳ ನಿರೂಪಿಸಿದರು.

  See also  ಕಾಂಗ್ರೆಸ್ ಕಾರ್ಯಕರ್ತನ ಮೇಲೆ 'ರೇಪ್ ಕೇಸ್​' ! ಮಹಿಳೆಗೆ ದಂಡ ವಿಧಿಸಿದ ಹೈಕೋರ್ಟ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts