ಹುಮನಾಬಾದ್: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಬಹುಮತ ಪಡೆದಿದ್ದಾರೆ.
ಒಟ್ಟು ೧೪ ಸ್ಥಾನಗಳ ಪೈಕಿ ೪ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಉಳಿದ ೧೦ ಸ್ಥಾನಗಳಿಗೆ ನಡೆದ ಚುನಾವಣೆ ಅತ್ಯಂತ ಕುತೂಹಲ ಕೆರಳಿಸಿತ್ತು. ಒಟ್ಟು ೧೪ ಸ್ಥಾನಗಳಲ್ಲಿ ೧೦ ಕಾಂಗ್ರೆಸ್ ಬೆಂಬಲಿತ, ೩ ಬಿಜೆಪಿ ಬೆಂಬಲಿತ ಹಾಗೂ ೧ ಸ್ವತಂತ್ರ ಅಭ್ಯರ್ಥಿ ಜಯಗಳಿಸಿದ್ದಾರೆ.
ಬಸವರಾಜ ಶರಣಪ್ಪ ಪಾಟೀಲ ಗಡವಂತಿ (ಹುಮನಾಬಾದ್ ಗ್ರಾಮೀಣ ಕ್ಷೇತ್ರ), ಶಿವಕುಮಾರ ಕಂಟೆಪ್ಪ ದಾನಪ್ಪ (ಹುಡಗಿ), ಶರಣಬಸಪ್ಪ ಏಖೇಳ್ಳಿ ಕಂದಗೂಳ (ಚಿಟಗುಪ್ಪ ಗ್ರಾಮೀಣ), ಪ್ರದೀಪ ಮಾಲೀಪಾಟೀಲ್ (ಹಳ್ಳಿಖೇಡ(ಕೆ), ಸಂತೋಷ ಗುರುನಾಥ ಪಂಚಾಳ (ಘಾಟಬೋರಾಳ) ಸಂಗೀತಾ ಮಲ್ಲಿಕಾರ್ಜುನ ಖಾಶೆಂಪುರೆ (ಮಹಿಳಾ ಕ್ಷೇತ್ರ ನಿರ್ಣಾ), ವೈನಾಬಾಯಿ ಉಮೇಶ (ಹಳ್ಳಿಖೇಡ(ಬಿ), ದೇವಿಂದ್ರ ಸೈಬಣ್ಣಾ ಮಂಗಲಗಿಕರ (ಮನ್ನಾಏಬ್ಬೇಳಿ), ಮಲ್ಲಿಕಾರ್ಜುನ ಕಾಶಪ್ಪನೋರ್ (ದುಬಲಗುಂಡಿ) ಸಾಲ ಪಡೆದ ಸದಸ್ಯರು. ಸಾಲ ಪಡೆಯದ ಸಾಮಾನ್ಯ ಕ್ಷೇತ್ರದಿಂದ ವೀರೇಶ ನೀಲಕಂಟೆಪ್ಪ ಮುಸ್ತರಿ ಜಯಗಳಿಸಿದ್ದಾರೆ.
ಮಲ್ಲಿಕಾರ್ಜುನ ಪಂಚಪ್ಪ ಮಾಳಶೆಟ್ಟಿ (ಹುಮನಾಬಾದ್ ನಗರ), ಮಲ್ಲಿಕಾರ್ಜುನ ಪಾಂಡಪ್ಪ ಗಣಜಲಖೇಡ (ಕೊಡಂಬಲ್), ವೀರಪ್ಪ ರೇವಪ್ಪ ಮುದ್ದಾ (ಬೇಮಳಖೇಡಾ) ಹಾಗೂ ಸೂರ್ಯಕಾಂತ ಮಠಪತಿ (ಚಿಟಗುಪ್ಪ ನಗರ ) ಅವಿರೋಧವಾಗಿ ಆಯ್ಕೆಗೊಂಡವರು.
ಹರ್ಷ: ಚುನಾವಣೆ ಫಲಿತಾಂಶ ಹೊರಬರುತ್ತಿದ್ದಂತೆ ಮುಖಂಡರು,ಕಾರ್ಯಕರ್ತರು, ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಜಿಪಂ ಮಾಜಿ ಸದಸ್ಯ ವೀರಣ್ಣ ಪಾಟೀಲï, ಮಾಜಿ ಉಪಾಧ್ಯಕ್ಷ ಲಕ್ಷ್ಮಣರಾವ ಬುಳ್ಳಾ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಫ್ಸರಮಿಯಾ, ಗ್ರಾಮೀಣ ಅಧ್ಯಕ್ಷ ಓಂಕಾರ ತುಂಬಾ, ಯುವ ಘಟಕದ ಅಧ್ಯಕ್ಷ ಉಮೇಶ ಜಮಗಿ ಇತರರಿದ್ದರು.
ಪ್ರಾಮಾಣಿಕತೆಯಿಂದ ಕೆಲಸ ಮಾಡಿ: ರೈತರ ಹಿತ ಕಾಪಡಲು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಬಹುಮತದಿಂದ ಗೆಲ್ಲಿಸಿ ಮತ್ತಷ್ಷು ಜವಾಬ್ದಾರಿ ಹೆಚ್ಚಿಸಿದ್ದು, ಅದರಂತೆ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಬೇಕೆಂದು ನೂತನ ನಿರ್ದೇಶಕರಿಗೆ ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು. ಚುನಾವಣೆ ಫಲಿತಾಂಶದ ನಂತರ ತಮ್ಮ ನಿವಾಸದಲ್ಲಿ ನೂತನ ನಿರ್ದೇಶಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಹಿಂದಿನ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಿದ್ದಕ್ಕಾಗಿ ರೈತರು ಅಧ್ಯಕ್ಷ ಮಲ್ಲಿಕಾರ್ಜುನ ಮಾಶೆಟ್ಟಿ ನೇತೃತ್ವದ ಪೆನಾಲ್ನ ೧೦ ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರನ್ನು ಗೆಲ್ಲಿಸಿದ್ದು , ಈ ಮೂಲಕ ಪ್ರತಿಪಕ್ಷದವರಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಏನು ಎಂದು ತೋರಿಸಿ ಕೊಡಲಾಗಿದೆ. ಜಿಪಂ, ತಾಪಂ ಚುನಾವಣೆಯಲ್ಲಿಯೂ ಪಕ್ಷದ ಮುಖಂಡರು, ಕಾರ್ಯಕರ್ತರು ಪಕ್ಷದ ಸಂಘಟನೆಗೆ ಶ್ರಮಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಒಗ್ಗಟ್ಟಾಗಿ ಶ್ರಮಿಸಬೇಕೆಂದು ಹೇಳಿದರು.