ಕಾಂಗ್ರೆಸ್ ಬಿಡಲ್ಲ, ಬಿಎಸ್​ವೈ ಕೈ ಸೇರಲಿ!

ದಾವಣಗೆರೆ: ಬಿಜೆಪಿಗೆ ಸೇರ್ಪಡೆಯಾಗುವುದು ಶುದ್ಧ ಸುಳ್ಳು, ಬೇಕಿದ್ದರೆ ಯಡಿಯೂರಪ್ಪನವರೇ ಕಾಂಗ್ರೆಸ್ ಸೇರಲಿ ಎಂದು ಹಿರಿಯ ಕಾಂಗ್ರೆಸ್ಸಿಗ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಮಾತನಾಡಿ, ಯಡಿಯೂರಪ್ಪ ಜತೆ ಊಟ ಮಾಡಿದಾಕ್ಷಣ ಬಿಜೆಪಿಗೆ ಸೇರುತ್ತಾರೆ ಎಂದು ಭಾವಿಸುವುದು ತಪ್ಪು. ನಾನು 1968ರಿಂದಲೂ ಕಾಂಗ್ರೆಸ್​ನಲ್ಲಿದ್ದೇನೆ. ಪಕ್ಷ ಬಿಡುವ ಮಾತಿಲ್ಲ. ಆಹ್ವಾನ ನೀಡಿದ ತಕ್ಷಣ ತಾವು ಬಿಜೆಪಿಗೆ ಹೋಗಲು ಸಾಧ್ಯವೆ ಎಂದು ಪ್ರಶ್ನಿಸಿದರು.

ವೀರಶೈವ ಲಿಂಗಾಯತ ಧರ್ಮ ವಿಚಾರದಲ್ಲಿ ನಮ್ಮ ನಿರ್ಧಾರ ಗಟ್ಟಿಯಾಗಿಯೇ ಇದೆ. ಅವರು ಏನು ಬೇಕಾದರೂ ಮಾಡಲಿ. ಲಿಂಗಾಯತ ಧರ್ಮ ಕುರಿತಂತೆ ಸಲ್ಲಿಸಲಾದ ತಜ್ಞರ ವರದಿ ಬಿದ್ದು ಹೋಗುವುದು ಖಚಿತ ಎಂದರು.

 ಯಡಿಯೂರಪ್ಪ ಮತ್ತು ಶಾಮನೂರು ಶಿವಶಂಕರಪ್ಪ ಅವರ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ನಮ್ಮ ಸಮುದಾಯದ ವಿಚಾರ ಬಂದಾಗ ನಾನು ಮತ್ತು ಕುಮಾರಸ್ವಾಮಿ ಒಂದೆಡೆ ಸೇರುತ್ತೇವೆ. ಅದೇ ರೀತಿ ಜವಾಬ್ದಾರಿ ಇರುವವರು ಅವರ ಸಮುದಾಯದ ವಿಚಾರಕ್ಕೆ ಮಠದಲ್ಲಿ ಸೇರಿದ್ದಾರೆ.

| ಡಿ.ಕೆ. ಶಿವಕುಮಾರ್ ಇಂಧನ ಸಚಿವ

Leave a Reply

Your email address will not be published. Required fields are marked *