ಕಾಂಗ್ರೆಸ್ ಗೆಲುವಿನಿಂದ ತಾಲೂಕು ಅಭಿವೃದ್ಧಿ

blank
blank

ಕಿಕ್ಕೇರಿ: ಎಲ್ಲೆಡೆ ಕಾಂಗ್ರೆಸ್ ಅಲೆಯ ಪರ್ವವಿದ್ದು, ತಾಲೂಕಿನಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಡಿ ಎಂದು ಅಭ್ಯರ್ಥಿ ಬಿ.ಎಲ್.ದೇವರಾಜು ಮನವಿ ಮಾಡಿದರು.
ಹೋಬಳಿಯ ಸಾಸಲು ಕ್ಷೇತ್ರದ ಸೋಮೇಶ್ವರ, ಶಂಭುಲಿಂಗೇಶ್ವರ ದೇವಸ್ಥಾನಗಳಿಗೆ ಮಂಗಳವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ದೇವರ ಆಶೀರ್ವಾದ ಮತದಾರ ಮೂಲಕ ಇದೆ ಎಂದು ನಂಬಿರುವೆ. ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡಿ ಜನರ ಮನಸಿನಲ್ಲಿ ಉಳಿದಿದೆ. ಉತ್ತಮ ಪ್ರಣಾಳಿಕೆ ನೀಡಿದ್ದು, ಇದರ ಅನುಷ್ಠಾನಕ್ಕೆ ಕಾಂಗ್ರೆಸ್ ಗೆಲಿಸಿಕೊಡಿ ಎಂದು ವಿನಂತಿಸಿದರು.
ನಾಲ್ಕು ದಶಕ ಜೆಡಿಎಸ್‌ಗಾಗಿ ದುಡಿದೆ. ಇದು ತನ್ನ ಕೊನೆಯ ಚುನಾವಣೆ ಎಂದು ತಿಳಿಸಿದೆ. ಆದರೂ ಜೆಡಿಎಸ್ ವರಿಷ್ಠರು ಸೀಟು ಕೊಡಲಿಲ್ಲ. ಕಾಂಗ್ರೆಸ್ ವರಿಷ್ಠರು, ತಾಲೂಕು ನಾಯಕರು ಪ್ರೀತಿಯಿಂದ ಕರೆದು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಮತದಾರ, ಕಾಂಗ್ರೆಸ್ ಪಕ್ಷದ ನಂಬುಗೆಯ ಸೇವಕನಾಗಿ ಕೆಲಸ ಮಾಡಲು ಅವಕಾಶ ಕೊಡಿ ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಬಿ. ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್, ನಾಗೇಂದ್ರಕುಮಾರ್, ಮುಖಂಡರಾದ ಕೋಡಿಮಾರನಹಳ್ಳಿ ದೇವರಾಜು, ಹರಳಹಳ್ಳಿ ವಿಶ್ವನಾಥ್, ರಮೇಶ್, ಎಂ.ಡಿ. ಕೃಷ್ಣಮೂರ್ತಿ, ಬಸ್‌ಕೃಷ್ಣೇಗೌಡ, ವಿಠಲಾಪುರ ಸುಬ್ಬೇಗೌಡ, ಈರಪ್ಪ, ಚಂದ್ರು, ಚೇತನಾ ಮಹೇಶ್, ವೆಂಕಟೇಶ್, ಕಾಯಿ ಸುರೇಶ್, ಸೊಳ್ಳೇಪುರ ಮಂಜಪ್ಪ, ಬೋಜೇಗೌಡ ಮತ್ತಿತರರಿದ್ದರು.

12ಕೆಕೆಆರ್1
ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್. ದೇವರಾಜು ಸೋಮೇಶ್ವರ, ಶಂಭುಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮತದಾರರೊಂದಿಗೆ ಮಾತನಾಡಿದರು. ಕೆ.ಬಿ. ಚಂದ್ರಶೇಖರ್, ಬಿ.ಪ್ರಕಾಶ್, ಸುರೇಶ್, ನಾಗೇಂದ್ರಕುಮಾರ್, ಮುಖಂಡರಾದ ಕೋಡಿಮಾರನಹಳ್ಳಿ ದೇವರಾಜು, ಹರಳಹಳ್ಳಿ ವಿಶ್ವನಾಥ್, ರಮೇಶ್, ಎಂ.ಡಿ. ಕೃಷ್ಣಮೂರ್ತಿ, ಬಸ್‌ಕೃಷ್ಣೇಗೌಡ ಮತ್ತಿತರರಿದ್ದರು.

Share This Article

ಈ ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಉಂಟಾಗಬಹುದು: ತಜ್ಞರ ಎಚ್ಚರಿಕೆ..! Health Tips

Health Tips: ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಸೊಂಟ, ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ…

ದೇಹದಲ್ಲಿ ಈ ವಿಚಿತ್ರ ಸೂಚನೆಗಳು ಕಾಣಿಸಿದ್ರೆ ಸಕ್ಕರೆ ಕಾಯಿಲೆ ಇದೆ ಎಂದರ್ಥ! | Diabetes

Diabetes: ಪ್ರಸ್ತುತ ಬದಲಾಗುತ್ತಿರುವ ಜೀವನಶೈಲಿ, ಸರಿಯಾದ ಆಹಾರ ಪದ್ಧತಿ ಇಲ್ಲದಿರುವುದು, ವ್ಯಾಯಾಮದ ಕೊರತೆ ಇತ್ಯಾದಿಗಳಿಂದಾಗಿ, ಚಿಕ್ಕ…