ಸಿನಿಮಾ

ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಶನಿವಾರಸಂತೆ: ಶನಿವಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಹಾಗೂ ಕೆಲ ಸಚಿವರು ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಶನಿವಾರಸಂತೆ ಗ್ರಾಪಂ ಸದಸ್ಯ ಎಸ್.ಸಿ.ಶರತ್‌ಶೇಖರ್ ಮಾತನಾಡಿ, ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಭ್ರಷ್ಟಚಾರ ನಿರ್ಮೂಲನೆ ಜತೆಗೆ ರಾಜ್ಯದ ಸಮಗ್ರ ಅಭಿವೃದ್ಧಿಯಾಗಲಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಇವರಿಬ್ಬರಿಗೆ ಎಲ್ಲರನ್ನೂ ಸಮಾನವಾಗಿ ಮತ್ತು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಚಂದ್ರಕಾಂತ್ ಮಾತನಾಡಿ, ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಎಲ್ಲ ಯೋಜನೆಗಳು ಮತ್ತು ಜನಪ್ರಿಯ ಕಾರ್ಯಕ್ರಮಗಳು ಸಾಮಾನ್ಯ ವ್ಯಕ್ತಿಗೂ ತಲುಪುವ ವಿಶ್ವಾಸವಿದ್ದು, ಈ ಕೆಲಸವನ್ನು ಸ್ಥಳೀಯ ಮುಖಂಡರು ಮಾಡಲಿದ್ದು ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದರು. ಕಾಂಗ್ರೆಸ್ ಪ್ರಮುಖರಾದ ಎನ್.ಕೆ.ಅಪ್ಪಸ್ವಾಮಿ, ಶನಿವಾರಸಂತೆ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ ಮತ್ತಿತರರು ಮಾತನಾಡಿದರು. ಕಾಂಗ್ರೆಸ್ ಪ್ರಮುಖರಾದ ಡಿ.ಬಿ.ಬೋಜಪ್ಪ, ಚಿ.ಜೆ.ಗಿರೀಶ್, ಬಿ.ಕೆ.ಚಂದ್ರು, ಆದಿತ್ಯಗೌಡ, ಗೀತ ಹರೀಶ್, ಸರೋಜ ಶೇಖರ್, ಸೌಭಾಗ್ಯಲಕ್ಷ್ಮೀ, ಶಿವಣ್ಣ, ಅಕ್ಮಲ್‌ಪಾಷ, ಶಿವಾನಂದ್, ಮತ್ತೂರು ಮಹೇಶ್, ಅಬ್ಬಾಸ್ ಪಕ್ಷದ ಕಾರ್ಯಕರ್ತರು ಇದ್ದರು.

Latest Posts

ಲೈಫ್‌ಸ್ಟೈಲ್