ಕಾಂಗ್ರೆಸ್ ಅಭ್ಯರ್ಥಿ ತಮ್ಮಣ್ಣವರ ವಿರುದ್ಧ ದೂರು ದಾಖಲು

2

ಹಾರೂಗೇರಿ: ಕುಡಚಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಹೇಂದ್ರ ತಮ್ಮಣ್ಣವರ ಅವರ ಪರವಾಗಿ ಏ.19 ರಂದು 19 ರಂದು ಡಾ.ಚಂದ್ರಕಾಂತ ಕುಲಗೋಡ ಅವರು, ಮುಗಳಖೋಡ ಪಟ್ಟಣದಲ್ಲಿ ಚುನಾವನಾಧಿಕಾರಿಗಳ ಅನುಮತಿ ಇಲ್ಲದೆ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಚುನಾವಣೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾಂಗ್ರೆಸ್ ಪಕ್ಷದ ಪ್ರಚಾರದ ವೇಳೆ ಉದ್ವೇಗಕ್ಕೆ ಒಳಗಾಗಿರುವ ಡಾ.ಚಂದ್ರಕಾಂತ ಕುಲಗೋಡ ಅವರು, ಕಾಂಗ್ರೆಸ್ ಪಕ್ಷಕ್ಕೆ ಮತಹಾಕದಿದ್ದರೇ, ನಿಮ್ಮನ್ನು ವಾರ್ಡ್‌ದಿಂದ ಹೊರಗೆ ಓಡಿಸಬೇಕಾಗುತ್ತದೆ ಎಂದು ಮತದಾರರನ್ನು ಹೆದರಿಸುವಂತಹ ಹೇಳಿಕೆ ನೀಡಿರುವುದರಿಂದ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿಕೊಂಡು, ಚುನಾವಣೆ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.