ಕಾಂಗ್ರೆಸ್​ ಮುಕ್ತ ಕರ್ನಾಟಕ ಖಚಿತ

ಹೊಸಕೋಟೆ: ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಏರುವುದು ನಿಶ್ಚಿತವಾಗಿದ್ದು, ಕಾಂಗ್ರೆಸ್​ವುುಕ್ತ ಕರ್ನಾಟಕ ನಿರ್ವಣವಾಗಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್​ರಾವ್ ಭವಿಷ್ಯ ನುಡಿದಿದ್ದಾರೆ. ಹೊಸಕೋಟೆ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬಿಜೆಪಿ ಜನಸಂಪರ್ಕ ಅಭಿಯಾನ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ರೈತರ ಸಾಲಮನ್ನಾ ಹೆಸರಿನಲ್ಲಿ ರಾಹುಲ್ ಗಾಂಧಿ ಮಧ್ಯಪ್ರದೇಶದಲ್ಲಿ ನಾಟಕ ಮಾಡಲು ಹೊರಟಿದ್ದಾರೆ. ಆದರೆ, ಅವರ ರಾಜಕೀಯ ಗಿಮಿಕ್​ಗೆ ಮತದಾರರು ಬೆಂಬಲಿಸಿಲ್ಲ ಎಂಬುದು ಇತ್ತೀಚಿನ ಪಂಚರಾಜ್ಯಗಳ ಚುನಾವಣೆಯಲ್ಲಿ ಗೊತ್ತಾಗಿದೆ ಎಂದು ವ್ಯಂಗ್ಯವಾಡಿದರು.

ಹೆದ್ದಾರಿಗಳಲ್ಲಿ ಬಾರ್​ಗಳ ಎತ್ತಗಂಡಿ ಅದೇಶವನ್ನು ಸುಪ್ರಿಂಕೋರ್ಟ್ ಹೊರಡಿಸಿದ್ದರೆ, ಅದನ್ನು ಉಲ್ಲಂಘನೆ ಮಾಡಲು ಹೊರಟಿದ್ದಾರೆ. ಕೋರ್ಟ್ ಆದೇಶ ಪಾಲಿಸದಿದ್ದರೆ ರಾಜ್ಯಾದ್ಯಂತ ಮಹಿಳೆಯರಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಎಚ್ಚರಿಸಿದರು.

 

ಕುತಂತ್ರ ರಾಜಕಾರಣದಿಂದಾಗಿ ರಾಜ್ಯದಲ್ಲಿ ಜೆಡಿಎಸ್ ಅಸ್ತಿತ್ವ ಕಳೆದು ಕೊಂಡಿದೆ. ದೇವೇಗೌಡ, ಕುಮಾರಸ್ವಾಮಿಯವರ ಕುತಂತ್ರಕ್ಕೆ ಸಿಲುಕಿ ಲೋಕಸಭಾ ಚುನಾವಣೆಯಲ್ಲಿ ಬಚ್ಚೇಗೌಡ, ಉಪಚುನಾವಣೆಯಲ್ಲಿ ನಾನು ಸೋಲಬೇಕಾಯಿತು.

| ಶ್ರೀನಿವಾಸ ಪ್ರಸಾದ್ ಮಾಜಿ ಸಚಿವ

 

ತುಘಲಕ್ ಸರ್ಕಾರ

ತುಘಲಕ್ ದರ್ಬಾರ್, ಭ್ರಷ್ಟಾಚಾರದ ಮೂಲಕ ರಾಜ್ಯದ ಕೊಳ್ಳೆ ಹೊಡೆಯುತ್ತಿರುವ ಸಿದ್ದರಾಮಯ್ಯ ಸರ್ಕಾರ ರೈತರ ಸಾಲಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ ಎಂದು ಯಡಿಯೂರಪ್ಪ ಟೀಕಿಸಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಸಂಕಲ್ಪ ತೊಟ್ಟಿದ್ದಾರೆ. ಮಿಷನ್ 150 ಸಾಧನೆ ನಿಟ್ಟಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಅಗತ್ಯ ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಬೂತ್​ವುಟ್ಟದಲ್ಲಿ ಬಿಜೆಪಿ ಬಲಪಡಿಸುವಲ್ಲಿ ಯುವ ಸಮುದಾಯ ಶ್ರಮಿಸಬೇಕು ಎಂದರು.

 

Leave a Reply

Your email address will not be published. Required fields are marked *