‘ಕವಚ’ ಸಿನೆಮಾಗೆ ಉತ್ತಮ ಪ್ರತಿಕ್ರಿಯೆ

ಹುಬ್ಬಳ್ಳಿ: ‘ಕವಚ’ ಇದೊಂದು ವಿಭಿನ್ನ ಸಿನಿಮಾ. ಅಂಧನಾಗಿ ಮೊದಲ ಬಾರಿಗೆ ಅಭಿನಯಿಸಿದ್ದು ವಿಶಿಷ್ಟ ಅನುಭವ ಕೊಟ್ಟಿದೆ. ಸಿನೆಮಾಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ನಟ ಶಿವರಾಜಕುಮಾರ್ ಹೇಳಿದರು.

ಮಂಗಳವಾರ ಚಿತ್ರದ ಪ್ರಚಾರಕ್ಕೆ ಬಂದಿದ್ದ ಅವರು ಇಲ್ಲಿನ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕವಚ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 241 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಟಗರು ಬಳಿಕ ಕವಚ ಚಿತ್ರ ವಿಭಿನ್ನವಾಗಿ ಮೂಡಿಬಂದಿದೆ. ಅಂಧನ ಪಾತ್ರದಲ್ಲಿ ನಟಿಸಲು ತುಂಬಾ ಕಠಿಣವಾಗಿತ್ತು. ಕಣ್ಣು ನೋವು ಬಂದಿತ್ತು. ಇದೊಂದು ವಿಭಿನ್ನ ಕತಾ ಹಂದರ. ಕ್ಲಾಸ್ ಹಾಗೂ ಮಾಸ್ ಎರಡೂ ರೀತಿಯ ಪ್ರೇಕ್ಷಕರು ಮನಸಾರೆ ಇಷ್ಟಪಟ್ಟಿದ್ದಾರೆ ಎಂದರು.

ಮಚ್ಚು ಹಿಡಿದುಕೊಂಡೇ ಹಿಟ್ ಕೊಟ್ಟಿಲ್ಲ. ಓಂ, ಜೋಗಿ, ವಿಲನ್ ಜೊತೆಗೆ ಜನುಮದ ಜೋಡಿ, ಟಗರು, ಅಣ್ಣತಂಗಿ, ಚಿಗುರಿದ ಕನಸು, ವಜ್ರಕಾಯ ಸಿನಿಮಾಗಳನ್ನು ಮಾಡಿದ್ದೇನೆ. ಎರಡೂ ವಿಧಧ ಜನರಿಗೆ ಇಷ್ಟವಾಗುವ ಸಿನಿಮಾ ಮಾಡುತ್ತೇನೆ. ರುಸ್ತುಂ, ಮೈ ನೇಮ್ ಈಸ್ ರಾಕಿ ಮುಂದಿನ ಸಿನಿಮಾಗಳು. ಬಾಹುಬಲಿ, ಕೆಜಿಎಫ್​ನಂಥ ದೊಡ್ಡ ಬಜೆಟ್ ಸಿನೆಮಾ ಸಿಕ್ಕರೆ ಖಂಡಿತ ಮಾಡುತ್ತೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಹನಟ ವಸಿಷ್ಠ ಸಿಂಹ, ಕವಚ ನಿರ್ದೇಶಕ ಜಿವಿಆರ್ ವಾಸು, ನಿರ್ವಪಕ ಎಂವಿವಿ ಸತ್ಯನಾರಾಯಣ, ಆಫೀಸರ್ಸ್ ಚಾಯ್್ಸ ಕಂಪನಿ ಮಾಲೀಕ ನಿರ್ಮಲ್, ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಮತ್ತಿತರರು ಇದ್ದರು.