Friday, 16th November 2018  

Vijayavani

Breaking News

ಕಳವು ಮಾಡಿದ್ದ ನಾಲ್ವರ ಬಂಧನ

Thursday, 12.07.2018, 10:19 PM       No Comments

ಹಳಿಯಾಳ: ಹಳಿಯಾಳ ತಾಲೂಕಿನ ವಿವಿಧೆಡೆ ಕಳವು ಮಾಡುತ್ತಿದ್ದ ಮಧ್ಯಪ್ರದೇಶ ರಾಜ್ಯದ ನಾಲ್ವರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಅಜಗಾಂವ ಗ್ರಾಮದ ಶಿವಾಜಿ ವಾಲೇಕರ್​ಅವರ ಕಬ್ಬಿನ ಗದ್ದೆಯಲ್ಲಿ ಅವಿತು ಕುಳಿತಿದ್ದ ಕಳ್ಳರನ್ನು ದಾಂಡೇಲಿ ಡಿವೈಎಸ್​ಪಿ ಮೋಹನಪ್ರಸಾದ ನೇತೃತ್ವದ ವಿಶೇಷ ತಂಡ ಸ್ಥಳೀಯರು ಹಾಗೂ ಕೆಸರೊಳ್ಳಿ ಗ್ರಾಮಸ್ಥರ ಸಹಕಾರದಲ್ಲಿ ಬಂಧಿಸಿದೆ.

ಜೂನ್ 12 ರಂದು ಆನೆಗುಂದಿ ಪ್ಲಾಟ್ ಬಳಿ ಬೆಳಗ್ಗೆ ಮನೆಗೆ ನುಗ್ಗಿದ ತಂಡ ಮನೆಯವರನ್ನು ಬೆದರಿಸಿ ಸ್ವತ್ತುಗಳನ್ನು ಕಳವು ನಡೆಸಿತ್ತು. ಜುಲೈ 6 ರಂದು ಕಾವೇರಿ ಫಾಸ್ಟ್​ಫುಡ್ ಬಳಿಯ ಹೊಂಡಾ ಶೈನ್ ಬೈಕ್ ಹಾಗೂ2ನೇ ನಂಬರ್ ಶಾಲೆಯ ಬಳಿ ಮನೆಯೊಂದರಲ್ಲಿ ಕಳ್ಳತನ ಮಾಡಲಾಗಿತ್ತು. ಮಧ್ಯಪ್ರದೇಶ ರಾಜ್ಯದ ಅಲಿರಾಜ್ಯಪುರ ಜಿಲ್ಲೆಯ ಬಹದ್ದೂರ್ ಸಿಂಗ್ ರಾಯಚಂದ್ ಬಿಲ್​ವಾಲ (26), ಇಗ್ರಾಮ್ ಪಾನ್​ಸಿಂಗ್ (25), ಸುರಬ್ ದೊಲು ಬುರಿಯಾ (22), ಸುರಮ್ ಕಾಲಿಯಾ ಮಿನಾವಟ್ ಬಿಲ್ (30) ಬಂಧಿತರು. ಇವರು ಕೂಲಿ ಕೆಲಸಗಾರರ ಸೋಗಿನಲ್ಲಿ ಬಂದು ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ಹಳಿಯಾಳ ಸಿಪಿಐ ಸುಂದ್ರೇಶ ಹೊಳೆಣ್ಣವರ್ ಪಿಎಸ್​ಐ ಆನಂದಮೂರ್ತಿ ಸಿ, ದಾಂಡೇಲಿ ನಗರ ಪಿಎಸ್​ಐ ಪುಟ್ಟೇಗೌಡ ಎಸ್.ಎನ್. ಎಎಸ್​ಐಗಳಾದ ಎ.ಡಿ. ಪಾವಸ್ಕರ್, ಪರಮೇಶ್ವರಪ್ಪಾ ಶೇಟ್ ಸನಧಿ, ಬಿ.ವಿ.ಹೆಗಡೆ, ಮುಳೆ, ಪಾಠನಕರ ಹಾಗೂ ಸಿಬ್ಬಂದಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ತಂಡಕ್ಕೆ ಎಸ್​ಪಿ ವಿನಾಯಕ ಪಾಟೀಲ್ ಬಹುಮಾನ ಘೊಷಿಸಿದ್ದಾರೆ.

Leave a Reply

Your email address will not be published. Required fields are marked *

Back To Top