ಕಳವು ಆರೋಪಿಗಳು ಪೊಲೀಸ್ ಬಲೆಗೆ

ಅರಸೀಕೆರೆ: ಕಳವು ಪ್ರಕರಣದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಚರ್ಚ್ ಕಾಲನಿಯ ರಾಜೇಶ್ ಹಾಗೂ ಅಂಚೆ ಕಚೇರಿಯ ದಿನಗೂಲಿ ನೌಕರ ಕೆ.ಎಸ್.ಕಾರ್ತಿಕ್ ಬಂಧಿತ ಆರೋಪಿಗಳು.

ನಗರದ ಕೆಪಿಎಸ್ ಬಡಾವಣೆಯ ಇ- ಕಾಮ್ ಎಕ್ಸ್‌ಪ್ರೆಸ್ ಕಚೇರಿಗೆ ಕನ್ನ ಹಾಕಿದ್ದ ಈ ಆರೋಪಿಗಳು, 65 ಸಾವಿರ ರೂ. ಬೆಲೆಬಾಳುವ ಮೊಬೈಲ್‌ಗಳು ಸೇರಿದಂತೆ 70 ಸಾವಿರ ನಗದು ದೋಚಿ ಪರಾರಿಯಾಗಿದ್ದರು. ಕಚೇರಿ ಸಿಬ್ಬಂದಿ ನೀಡಿದ ದೂರಿನ ಅನ್ವಯ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ರಂಗಸ್ವಾಮಿ ನೇತೃತ್ವದ ತಂಡ ಈ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply

Your email address will not be published. Required fields are marked *