ಕಲ್ಯಾಣ ಮಂಟಪಕ್ಕೆ ಹೆಚ್ಚಿನ ಅನುದಾನ

1 Min Read
ಕಲ್ಯಾಣ ಮಂಟಪಕ್ಕೆ ಹೆಚ್ಚಿನ ಅನುದಾನ
ಸಂಕೇಶ್ವರ ಸಮೀಪದ ನಿಡಸೋಸಿ ದುರದುಂಡೀಶ್ವರ ಮಠದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಗಣ್ಯರು ಚಾಲನೆ ನೀಡಿದರು. ನಿಡಸೋಸಿ ಶ್ರೀ, ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ನಿಖಿಲ ಕತ್ತಿ ಇತರರಿದ್ದರು.

ಸಂಕೇಶ್ವರ: ಗಡಿ ಭಾಗದ ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಮೊದಲ ಹಂತದಲ್ಲಿ 50 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಸಮೀಪದ ನಿಡಸೋಸಿ ದುರದುಂಡೀಶ್ವರ ಮಠದ ನೂತನ ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕಲ್ಯಾಣ ಮಂಟಪಕ್ಕೆ ಏರಡನೇ ಹಂತದಲ್ಲಿ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು. ನನಗೆ ಧಾರ್ಮಿಕ ಚಿಂತನೆಗಳ ಮೇಲೆ ಹೆಚ್ಚಿನ ನಂಬಿಕೆಯಿದೆ. ದೇವರ ಆಶೀರ್ವಾದದಿಂದ ದೇವಸ್ಥಾನಗಳ ಅಭಿವೃದ್ಧಿಪಡಿಸುವ ಅವಕಾಶ ಸಿಕ್ಕಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮಠ-ಮಾನ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು. ತ್ರಿವಿಧ ದಾಸೋಹ ಪರಂಪರೆ ಮೂಲಕ ನಿಡಸೋಸಿ ಮಠ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದೆ. ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತೃ ಹೃದಯಿ ಕಾರ್ಯಗಳಿಂದ ಮಠ ಭಕ್ತರ ಪಾಲಿಗೆ ಶ್ರದ್ಧಾ ಕೇಂದ್ರವಾಗಿದೆ ಎಂದರು. ಹಿರಾ ಶುಗರ್ಸ್‌ ಅಧ್ಯಕ್ಷ ನಿಖಿಲ ಕತ್ತಿ ಮಾತನಾಡಿ, ನಿಡಸೋಸಿ ಶ್ರೀಮಠ ಗಡಿಭಾಗದಲ್ಲಿ ಧಾರ್ಮಿಕ ನಂಬಿಕೆ ಉಳಿಸಿ-ಬೆಳೆಸುವ ಕಾರ್ಯ ಮಾಡುತ್ತಿದೆ. ಮಠದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನ ನೀಡುವಂತೆ ಕೋರಿದರು.

ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಮಠಗಳಲ್ಲಿ ಧಾರ್ಮಿಕತೆ ಜತೆಗೆ ಸಮಾಜದ ಇತರ ಕಾರ್ಯಗಳು ನೆರವೇರಿಸಲು ಅಭಿವೃದ್ಧಿ ಕಾರ್ಯಗಳ ಅವಶ್ಯಕವಿದೆ. ಈ ನಿಟ್ಟಿನಲ್ಲಿ ಜೊಲ್ಲೆ ದಂಪತಿ 50 ಲಕ್ಷ ರೂ. ಅನುದಾನ ಒದಗಿಸಿರುವುದು ಮಠದ ಚಟುವಟಿಕೆಗಳಿಗೆ ಅನುಕೂಲ ಒದಗಿಸಿದೆ ಎಂದರು.

ಮಂಗಳೂರು ರಾಮ ಕೃಷ್ಣ ಆಶ್ರಮದ ಏಕಗಮ್ಯಾನಂದ ಸ್ವಾಮೀಜಿ, ದುಂಡಪ್ಪ ಹೆದ್ದೂರಿ, ರಾಯಪ್ಪ ನಿಂಗನೂರಿ, ದುಂಡಪ್ಪ ಗಳಗಿ, ಬಸವಣ್ಣಿ ಹೆಗ್ಗಾಯಿ, ಸಾತಪ್ಪ ಕಾರತಗಿ, ಮಲ್ಲಪ್ಪ ತನೋಡಿ, ಗಿರೀಶ ಪಾಟೀಲ, ಪ್ರಶಾಂತ ಪಾಟೀಲ, ಶಿವಾನಂದ ಕರೋಶಿ, ಸುಭಾಷ ಪಾಟೀಲ, ಸಂಜು ಪಾಟೀಲ, ಸಂತೋಷ ಪಾಟೀಲ, ಡಾ. ಎಸ್.ಸಿ.ಕಮತೆ, ರಾಜು ಯರಗಟ್ಟಿ, ಮಹಾಲಿಂಗ ಕುಂಬಾರ, ಗ್ರಾಪಂ ಅಧ್ಯಕ್ಷೆ ಪಾರ್ವತಿ ಮಠದ, ಉಪಾಧ್ಯಕ್ಷ ಬಸವರಾಜ ಕರಿಶೆಟ್ಟಿ, ಎಂ.ಕೆ.ಚೌಗಲಾ, ಅಣ್ಣಪ್ಪ ಮಗದುಮ್ಮ, ಜಿನೇಂದ್ರ ಖಾನಾಪುರಿ, ನಿಜಲಿಂಗ ಹೂಗಾರ ಇತರರಿದ್ದರು.

See also  ಸಾರಿಗೆ ನಿಯಂತ್ರಕರ ಕಚೇರಿಗೆ ಬೀಗ
Share This Article