More

  ಕಲ್ಪಿತ ಯುವ ಸಂಸತ್,ರಾಜ್ಯಮಟ್ಟದ ಸ್ಪರ್ಧೆಗೆ ಮೂವರ ಆಯ್ಕೆ

  ಚಿತ್ರದುರ್ಗ: ಆರೋಗ್ಯ, ಶಿಕ್ಷಣ ಹಾಗೂ ಕಾನೂನು ಕ್ಷೇತ್ರದ ಜ್ವಲಂತ ಸಮಸ್ಯೆಗಳ ಕುರಿತ ಚರ್ಚೆಗೆ ಜಿಪಂದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮ ಟ್ಟದ ಯುವ ಸಂಸತ್ ಕಲ್ಪಿತ ಕಲಾಪ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಚಯಕ್ಕೆ ವೇದಿಕೆ ಒದಗಿಸಿತು.
  ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನಾ ಸಚಿವಾಲಯ, ಜಿಪಂ ಮತ್ತು ಶಿಕ್ಷಣ ಇಲಾಖೆ ಆಶ್ರಯದಲ್ಲಿ 2023-24ನೇ ಸಾಲಿನ ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಜಿಲ್ಲೆಯ ಆರು ತಾಲೂಕುಗಳ ಸರ್ಕಾರಿ ಪ್ರೌಢ ಶಾಲೆಯಿಂದ ಆಯ್ಕೆಯಾದ 20 ಮಕ್ಕಳು ಭಾಗವಹಿಸಿದ್ದರು.
  ಕಲಾಪ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ,ನಾಯಕತ್ವ ಗುಣಗಳನ್ನು ಪ್ರೋತ್ಸಾಹಿಸಿತು. ಪ್ರಜಾಪ್ರಭುತ್ವದ ವ್ಯವಸ್ಥೆಯ ಅರಿವಿಗೆ ನೆರವಾ ಯಿತು. ಹೊಸದುರ್ಗ ಸರ್ಕಾರಿ ಪಪೂ ಕಾಲೇಜು ಪ್ರೌಢಶಾಲಾ ವಿಭಾಗದ 10ನೇ ತರಗತಿ ವಿದ್ಯಾರ್ಥಿ ಯಶವಂತ್‌ಪಾಟೀಲ್ ಸಭಾಧ್ಯಕ್ಷರಾಗಿ ಕಲಾಪ ನಿರ್ವಹಿಸಿದರು.
  ಹಿರಿಯೂರು ತಾಲೂಕು ಹರಿಯಬ್ಬೆ ಕೆಪಿಎಸ್ ಶಾಲೆ ವಿದ್ಯಾರ್ಥಿನಿ, ಪ್ರತಿಪಕ್ಷ ನಾಯಕಿ ಎಸ್.ವಿ.ನಂದಿತಾ, ಶಿಕ್ಷಣದ ಗುಣಮಟ್ಟ ವೃದ್ಧಿ ಗೆ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದರು. ಉತ್ತರಿಸಿದ ಹೊಳಲ್ಕೆರೆ ಎಂಎಂ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಶಿಕ್ಷಣ ಸಚಿವೆ ಜಿ.ಆರ್.ಶಾಲಿನಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ವ್ಯವಸ್ಥೆ ಇನ್ನಷ್ಟು ಸುಧಾರಣೆಗೆ ಸರ್ಕಾರ ಕ್ರಮ ವಹಿಸಿದೆ ಎಂದರು.
  ಸಚಿವರ ಉತ್ತರಕ್ಕೆ ಪ್ರತಿಪಕ್ಷದವರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೊಳಲ್ಕೆರೆ ಎಂ.ಎಂ.ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಮುಖ್ಯಮಂತ್ರಿ ಎಸ್.ಅಂಕಿತಾ, ನಮ್ಮ ಸರ್ಕಾರ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದೆ ಎಂದರು. ಈ ವೇಳೆ ಅನಗತ್ಯ ವಾದ-ವಿವಾದ ಬೇಡವೆಂದು ಸಭಾಧ್ಯಕ್ಷರು ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರಿಗೆ ಸೂಚಿಸಿದರು.
  ಐದು ಗ್ಯಾರಂಟಿಗಳನ್ನು ಸರ್ಕಾರ ಅನುಷ್ಠಾನಗೊಳಿಸಿರುವ ನಮ್ಮ ಸರ್ಕಾರ ಯುವ ನಿಧಿ ಯೋಜನೆಯನ್ನೂ ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು. ಆರೋಗ್ಯ ಮತ್ತಿತರ ಸಮಸ್ಯೆಗಳೆಡೆ ಚರ್ಚೆ ನಡೆಯಿತು.
  ಎಚ್.ಕೆ.ಅಕ್ಷತಾ, ಬಿ.ಎಂ.ಸಿದ್ದಾರ್ಥ, ಎ.ಆರ್.ಅಮಿತ್, ಎಸ್.ನಂದನಾ, ಮನೋಹರ, ಕುಶಲ್, ರೋಹಿತ್, ರೋಹಿತ್‌ಕುಮಾರ್ ಸೇರಿದಂತೆ ನಾನಾ ವಿದ್ಯಾರ್ಥಿಗಳು ಕಲಾಪದಲ್ಲಿ ಭಾಗವಹಿಸಿದ್ದರು.
  ರಾಜ್ಯಮಟ್ಟಕ್ಕೆ ಆಯ್ಕೆ
  ಹಾವೇರಿಯಲ್ಲಿ ನ.25ರಂದು ನಡೆಯಲಿರುವ ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆಗೆ ಜಿಲ್ಲೆಯ ಎಸ್.ವಿ.ನಂದಿತಾ,ಎಸ್.ಅಂಕಿತಾ ಹಾಗೂ ಮೊಳಕಾಲ್ಮೂರು ಆದರ್ಶ ವಿದ್ಯಾಲಯದ ಟಿ.ಮನೋಹರ ಆಯ್ಕೆಯಾದರು. ಕಲಾಪಕ್ಕೂ ಮೊದಲು ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ ಮಾತನಾಡಿದರು.
  ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಆಂಗ್ಲ ಮತ್ತು ಸಮಾಜ ವಿಷಯದ ವಿಷಯ ಪರಿ ವೀಕ್ಷಕ ಚಂದ್ರಣ್ಣ, ಸಮಾಜ ವಿಜ್ಞಾನ ಸಂಘದ ಅಧ್ಯಕ್ಷ ಎ.ನೀಲಕಂಠಪ್ಪ, ಡಯಟ್ ಉಪನ್ಯಾಸಕ ಜ್ಞಾನೇಶ್, ತೀರ್ಪುಗಾರರಾದ ಬುಡೇನ್‌ಸಾಬ್, ಜೈಶ್ರೀನಿವಾಸ್, ಬಸವರಾಜ್ ಮತ್ತಿತರರು ಇದ್ದರು.
  (ಸಿಟಿಡಿ 18 ಪಾರ್ಲಿಮೆಂಟ್)
  ಚಿತ್ರದುರ್ಗದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆಯನ್ನು ಡಿಡಿಪಿಐ ಕೆ.ರವಿಶಂಕರರೆಡ್ಡಿ ಉದ್ಘಾಟಿಸಿದ ರು. ಬಿಇಒ ಎಸ್.ನಾಗಭೂಷಣ್, ಚಂದ್ರಣ್ಣ, ಎ.ನೀಲಕಂಠಪ್ಪ, ಜ್ಞಾನೇಶ್, ಬುಡೇನ್‌ಸಾಬ್, ಜೈಶ್ರೀನಿವಾಸ್, ಬಸವರಾಜ್ ಹಾಗೂ ವಿದ್ಯಾರ್ಥಿಗಳು ಇದ್ದರು.


  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts