ಕಲೆ, ಕಲಾವಿದರಿಗೆ ಪ್ರೋತ್ಸಾಹ ಅಗತ್ಯ

ವಿಜಯವಾಣಿ ಸುದ್ದಿಜಾಲ ಚಿಟಗುಪ್ಪ
ಪರಂಪರಾಗತವಾಗಿ ಬೆಳೆದು ಬಂದಿರುವ ಕನರ್ಾಟಕ ಸಂಗೀತ, ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ಹಾಗೂ ವಿವಿಧ ವಾಧ್ಯಗಳ ನುಡಿಸುವಿಕೆ ಕಲೆಗಳಿಗೆ ಸಕರ್ಾರ ಹಾಗೂ ಕಲಾ ಆಸಕ್ತರು ಪ್ರೋತ್ಸಾಹಿಸಿದಾಗ ಮಾತ್ರ ಸಂಗೀತ ಕಲೆ ಉಳಿಸಿ ಬೆಳಸಲು ಸಾಧ್ಯ ಎಂದು ಸ್ಥಳಿಯ ಯೋಗಾಶ್ರಮದ ಶ್ರೀ ಚೆನ್ನಮಲ್ಲೇಶ್ವರ ತ್ಯಾಗಿ ಹೇಳಿದರು.

ಇಟಗಾ ಗ್ರಾಮದ ಯೋಗಾಶ್ರಮದಲ್ಲಿ ಲಿಂ.ಪಂ.ಪಂಚಾಕ್ಷರ ಗವಾಯಿ ಅವರ 74ನೇ ಪುಣ್ಯತಿಥಿ ಅಂಗವಾಗಿ ಗಾನಯೋಗಿ ಪಂಚಾಕ್ಷರಿ ಗವಾಯಿ ಸೇವಾ ಸಂಘ ಬೀದರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಸಂಗೀತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಬಗೆಯ ಸಂಗೀತ ಕಲೆ ಅವನತಿಯತ್ತ ಸಾಗಿದರೆ, ನಾಡು ಸಾಂಸ್ಕೃತಿಕವಾಗಿ ಬಡತನವನ್ನು ಅನುಭವಿಸುವಂತಾಗುತ್ತದೆ ಎಂದರು.

ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಸಂಗೀತ ಸಮ್ಮೇಳನ ನಡೆಯಬೇಕು. ಭಾರತವು ಶ್ರೀಮಂತ ಸಾಂಸ್ಕೃತಿಕ ನೆಲೆಯನ್ನು ಹೊಂದಿದೆ. ಸಂಗೀತ ಮನುಷ್ಯನನ್ನು ಮಾನವತ್ವದ ಕಡೆಗೆ ಕರೆದೊಯ್ಯುತ್ತದೆ. ಜಾತಿ, ಭಾಷೆ, ಪಥ ಮೀರಿ ಬೆಳೆಯುವ ಸಾರ್ಮರ್ಥಯ ಸಂಗೀತಕ್ಕಿದೆ. ವಿಷೇಶವಾಗಿ ಕನರ್ಾಟಕ ಶಾಸ್ತ್ರೀಯ ಸಂಗೀತ ಮನಸುಗಳ ನಡುವೆ ಮಧುರ ಬಾಂಧವ್ಯಬೆಸೆಯುತ್ತದೆ ಎಂದರು.

ಅಕ್ಕನ ಬಳಗ ಉದಗೀರ ಕಲಾತಂಡದವರಿಂದ ಕೊಲಾಟ, ನೂಪುರ ನೃತ್ಯ ಅಕಾಡೆಮಿ ಬೀದರ್ದಿಂದ ಉಷಾ ಪ್ರಭಾಕರ್ ಹಾಗೂ ಸಂಗಡಿಗರಿಂದ ಭರತನಾಟ್ಯ, ರಾಜ್ಯದ ವಿವಿಧಡೆಯಿಂದ ಬಂದಿರುವ ಸಂಗೀತ ಕಲಾವಿಧರಿಂದ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ, ಕೊಳಲು ವಾದನ, ಶಾಸ್ತ್ರೀಯ ಸಂಗೀತ ಸೇರಿದಂತೆ ತಮ್ಮ ಸೇವೆ ಸಲ್ಲಿಸಿದರು. ಸಂಘದ ಅಧ್ಯಕ್ಷ ಸಂಗಯ್ಯ ಕಲ್ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾವಿರ ಪುರಾಣ ಬಸವರಾಜ ಶಾಸ್ತ್ರಿ ಗೋಪಾ ದಂಪತಿಗಳಿಗೆ ಸಂಘದ ವತಿಯಿಂದ ಪಂಚಾಕ್ಷರ ಗವಾಯಿ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಮಹಾರಾಷ್ಟ್ರದ ಉದಗೀರನ ಶಂಕರಲಿಂಗ ಮಹರಾಜ, ಉದ್ಭವ ಮಹಾರಾಜ, ಸುರೇಶ ಚೌಧರಿ, ಮಹಾರುದ್ರಪ್ಪ ಅಣದೂರ, ಸಂಗಮೇಶ ಜವಾದಿ, ಕಂಠಯ್ಯಾಸ್ವಾಮಿ ಇಟಗಾ, ಸಿದ್ದಪ್ಪಾ ವಾಲಿ, ದೇವೆಂದ್ರ ಕಮಲ, ನಿಲಕಂಠ ಇಸ್ಲಾಂಪೂರ, ರಾಜೇಂದ್ರಸಿಂಗ್ ಪವಾರ, ಸಂಗಯ್ಯ ಹಿರೇಮಠ ಇತರರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಸ್ವಾಗತಿಸಿದರು. ರೇಣುಕಾ ಮಠಪತಿ ನಿರೂಪಣೆ ಮಾಡಿದರು.