ಚಿಟಗುಪ್ಪ: ಮನಸ್ಸನ್ನು ಅರಳಿಸುವ ಶಕ್ತಿ ಸಂಗೀತಕ್ಕಿದ್ದು, ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ನಡೆಯಬೇಕೆಂದು ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.
ಕರಕನಳ್ಳಿ ಗ್ರಾಮದಲ್ಲಿ ಶ್ರೀ ಗುರು ಗಂಗಾಧರ ಭಕ್ಕಪ್ರಭುಗಳ ೨೧೧ನೇ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ರಾತ್ರಿಯಿಡೀ ನಡೆದ ಸಂಗೀತ ದರ್ಬಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಗುರು ಗಂಗಾಧರ ಬಕ್ಕಪ್ರಭು ಅವರು ಈ ಭಾಗದಲ್ಲಿ ಪವಾಡ ಪುರುಷರಾಗಿದ್ದರಿಂದ ಇಂದಿಗೂ ಸಹ ಅಪಾರ ಭಕ್ತ ಸಮೂಹ ಹೊಂದಿದ್ದಾರೆ. ತಪಸ್ವಿಗಳಾದ ಅವರು ಬೇಡಿದ ವರವ ನೀಡುವ ಕಾಮಧೇನು ಕಲ್ಪವೃಕ್ಷವಾಗಿದ್ದಾರೆ ಎಂದರು.
ನೇತೃತ್ವ ವಹಿಸಿದ್ದ ಜಹೀರಾಬಾದ್‌ನ ಮಲ್ಲಯಗಿರಿಯ ಶ್ರೀ ಡಾ. ಬಸವಲಿಂಗ ಅವಧೂತರು ಮಾತನಾಡಿ, ಪ್ರಭುಗಳ ತತ್ವ ಆದರ್ಶಗಳೊಂದಿಗೆ ಭಕ್ತಿ ಪರಂಪರೆ ಮೈಗೂಡಿಸಿಕೊಂಡು ತಾನು ನನ್ನವರು ಎಂದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಮತ್ತು ಜೀವನ ಇರೋವರೆಗೂ ತಂದೆ ತಾಯಿಗಳ ಸೇವೆ ಮಾಡಿದಾಗ ನಿಜವಾದ ಭಗವಂತ ಅವರಲ್ಲಿ ನೆಲೆಸಿರುತ್ತಾನೆ ಎಂದರು.
ಸ್ವಂತದ ಶ್ರೀ ಶಿವಕುಮಾರ ಶಿವಾಚಾರ್ಯರು, ಚಾಂಗಲೇರಾದ ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಶ್ರೀ ಶಿವಯೋಗಿ ಶಿವಾಚಾರ್ಯರು, ಶ್ರೀ ಡಾ.ವೀರಪ್ರಭು ಪಂಡಿತಾರಾಧ್ಯ ಶಿವಾಚಾರ್ಯರು, ಪ್ರಮುಖರಾದ ಡಾ.ನೀತಾ ಬೆಲ್ದಾಳೆ, ಶಕುಂತಲಾ ಬೆಲ್ದಾಳೆ, ಗ್ರಾಪಂ ಅಧ್ಯಕ್ಷೆ ನೀಲಾವತಿ ಪಾಟೀಲ್, ಮೋಹನದಾಸ ಮಾಧವಶೆಟ್ಟಿ, ದೇವಿಂದ್ರಪ್ಪ ಚಾಂಗಲೇರಾ, ಲಕ್ಷ್ಮೀಕಾಂತರೆಡ್ಡಿ,ಗೋಪಾರೆಡ್ಡಿ ನಿರ್ಣಾ, ಅಶೋಕ ರಾಮಜಿ, ರಾಜಪ್ಪ ಮುತ್ಯಾ, ಲಕ್ಷ್ಮೀಕಾಂತ ಕುಲಕರ್ಣಿ, ಜಗನ್ನಾಥ ರೆಡ್ಡಿ ಮಟಾಟಿ, ನಾಗಪ್ಪ ಮಕಾಜಿ, ಪ್ರಭು ಘಾಟೊಳ್ಳಿ, ಜಗನ್ನಾಥ ಗಾರಿ ಇತರರಿದ್ದರು.
ಕಲಾವಿದರಾದ ಧುಳಪ್ಪ ಮುಡಬಿ, ಗೋಪಾಲ ಸಾವರಮಠ, ಶಿವಾನಿ, ರೇವಣಸಿದ್ದಯ್ಯ ಸ್ವಾಮಿ ಹಿರೇಮಠ, ನಾಗೇಂದ್ರ ರಾಣಾಪುರ ವಿನೀತಕುಮಾರ ರಾಣಾಪುರ, ಶಿವಕುಮಾರ ಪಂಚಾಳ, ತುಕಾರಾಮ ಚಿಮಕೋಡೆ, ಅಶ್ವಿನಿ ರಾಜಕುಮಾರ ಹಿರೇಮಠ, ಮಾನಸಾ ಶಿವಕುಮಾರ ಪಂಚಾಳ, ನವಲಿಂಗ ಪಾಟೀಲ್, ದಯಾನಂದ ಹಿರೇಮಠ, ಜನಾರ್ಧನ ವಾಘಮಾರೆ ಮತ್ತಿತರರು ಸಂಗೀತ ದರ್ಬಾರ್‌ನಲ್ಲಿ ಸಂಗೀತ ಸೇವೆ ಸಲ್ಲಿಸಿದರು.
