More

  ಕಲಾವಿದರನ್ನು ಪ್ರೋತ್ಸಾಹಿಸಲು ಮುಂದಾಗಿ

  ರಾಮದುರ್ಗ: ಮೂಲ ಜಾನಪದ ಹಾಡುಗಳನ್ನು ಗೌರವಿಸಿದಾಗ ಮಾತ್ರ ಜಾನದಪ ಕಲೆ ಉಳಿಯಲು ಸಾಧ್ಯ ಎಂದು ಜಾನಪದ ಸಾಹಿತಿ ಡಾ.ರಾಮು ಮೂಲಗಿ ಅಭಿಪ್ರಾಯಪಟ್ಟರು.

  ಪಟ್ಟಣದ ವಿದ್ಯಾ ಪ್ರಸಾರಕ ಸಮಿತಿಯ ಸಿ.ಎಸ್​.ಬೆಂಬಳಗಿ ಪದವಿ ಮಹಾವಿದ್ಯಾಲಯದ ಕರ್ನಾಟಕ ಸಂದ ಕನ್ನಡ ವಿಭಾಗ ಹಾಗೂ ಶ್ರೀ ಪಿ.ಎಂ.ಜಗತಾಪ ಹಾಗೂ ಕುಟುಂಬದವರ ದತ್ತಿ ನಿಧಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾನಪದ ಮಲಪ್ರಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

  ಜಾನಪದ ಕಲೆಯಲ್ಲಿ ನಾಡಿನ ಸಂಸತಿ, ಸಂಸ್ಕಾರ ಅಡಗಿದೆ. ಜತೆಗೆ ನೈತಿಕ ಮೌಲ್ಯಗಳನ್ನು ಸಹ ಜಾನಪದ ಕಲೆ ಹೊಂದಿದ್ದು, ಅದರ ಉಳಿವು ಹಾಗೂ ಬೆಳವಣಿಗೆಗೆ ಪ್ರತಿಯೊಬ್ಬರೂ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದರು. ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಪಟ್ಟಣದ ವೈದ್ಯ ಹಾಗೂ ವಿದ್ಯಾ ಪ್ರಸಾಕರ ಸಮಿತಿಯ ಸದಸ್ಯ ಡಾ. ವೈ.ಬಿ.ಕುಲಗೋಡ ಮಾತನಾಡಿ, ಇತ್ತೀಚಿನ ಕೆಲವು ನಕಲಿ ಹಾಡುಗಳ ಸುಳಿಗೆ ಸಿಕ್ಕ ಮೂಲ ಜಾನಪದ ಹಾಡುಗಳು ಮರೆಯಾಗುತ್ತಿವೆ ಎಂದರು.
  ಪ್ರಾಚಾರ್ಯ ಎಸ್​.ಎಂ.ಸಕ್ರಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್​.ಪಿ.ಹಾಲೊಳ್ಳಿ ಮಾತನಾಡಿದರು.

  ತೋರಣಗಟ್ಟಿಯ ಬಾಳಪ್ಪ ಬಗನಾಳ ಮತ್ತು ಸಂಗಡಿಗರಿಂದ ಕರಡಿ ಮಜಲು, ರಾಮದುರ್ಗದ ಕುಬೇರ ಗರಡಿಮನಿ ಮತ್ತು ಸಂಗಡಿಗರಿಂದ
  ತತ್ತ್ವಪದಗಳು, ಸಂಕಮ್ಮ ಗುದಗಾಪುರ ಹಾಗೂ ಸಂಗಡಿರಿಂದ ಸಂಪ್ರದಾಯದ ಪದಗಳು, ಅವರಾದಿಯ ಹಟೇಲಸಾಬ್​ ನದ್​ಾ ಮತ್ತು ಸಂಗಡಿಗರಿಂದ ಹಂತಿಯ ಪದಗಳು, ಶಿವಲೀಲಾ ಪಾಟೀಲ ಮತ್ತು ಸಂಗಡಿಗರಿಂದ ಜಾನಪದ ಕಲಾ ಪ್ರದರ್ಶನಗಳು ಜರುಗಿದವು.

  ವಿಪಿಎಸ್​ ಗೌರವ ಕಾರ್ಯದರ್ಶಿ ಎಸ್​.ಎಸ್​.ಸುಲ್ತಾನಪುರ ಅಧ್ಯತೆ ವಹಿಸಿದ್ದರು. ವಿದ್ಯಾಪ್ರಸಾರಕ ಸಮಿತಿ ಪದವಿ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಪ್ರದಿಪ ಪಟ್ಟಣ, ಮಹಾಂತೇಶ ಉಮತಾರ, ಕರ್ನಾಟಕ ಸಂದ ಕಾರ್ಯಾಧ್ಯ ಡಾ.ಎಂ.ಎನ್​.ಶಿದ್ಧಗಿರಿ, ಪ್ರಾಧ್ಯಾಪಕ ಸುರೇಶ ಅಥಣಿ, ಗೀತಾಂಜಲಿ ರಾಠೋಡ, ಡಾ.ಪಿ.ಎಂ ಸಿಂಗಾರಗೊಪ್ಪ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts