ಕಲಾಪ ಬಹಿಷ್ಕರಿಸಿ ಪ್ರತಿಭಟನೆ

ಚಿಂತಾಮಣಿ : ಬ್ಯಾಂಕ್​ನಲ್ಲಿ ಸಾಲ ಪಡೆಯಲು ವಕೀಲರು ನೀಡಿರುವ ಲೀಗಲ್ ಒಪೀನಿಯನ್ (ಕಾನೂನು ಸಲಹೆ) ಸರಿಯಿಲ್ಲ ಎಂದು ವಕೀಲರ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಜೆಎಂಎಫ್​ಸಿ ನ್ಯಾಯಾಲಯದ ಎದುರು ವಕೀಲರು ಕಲಾಪ ಬಹಿಷ್ಕರಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

ವಕೀಲ ರಾಜಾರಾಮ್ ಮಾತನಾಡಿ, ಮುಂಗಾನಹಳ್ಳಿ ಹೋಬಳಿ ಮೂಡಲಗೊಲ್ಲಹಳ್ಳಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್​ನಲ್ಲಿ 4 ವರ್ಷದ ಹಿಂದೆ ಗ್ರಾಹಕರು ಸಾಲ ಪಡೆಯಲು ವಕೀಲರಾದ ಪ್ರಭಾಕರ್, ರವಿಪ್ರಕಾಶ್, ಎನ್.ಕೆ.ಪ್ರಸಾದ್ ಎಂಬುವವರು ಲೀಗಲ್ ಒಪೀನಿಯನ್ ನೀಡಿದ್ದರು. ಆದರೆ ಬ್ಯಾಂಕ್​ನವರು ಲೀಗಲ್ ಒಪೀನಿಯನ್ ಸರಿಯಿಲ್ಲ ಎಂದು ಹೇಳಿ ಮೂರು ದಿನಗಳ ಹಿಂದೆ ಬಟ್ಲಹಳ್ಳಿ ಠಾಣೆಯಲ್ಲಿ ವಕೀಲರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದರು.

ವಕೀಲರ ಸಂಘದ ಉಪಾಧ್ಯಕ್ಷ ಎಸ್.ಈಶ್ವರ್​ಗೌಡ, ವಕೀಲರಾದ ಟಿ.ಎನ್.ಶ್ರೀರಾಮರೆಡ್ಡಿ, ರಚನಾ ಗೌಡ, ದೇವರಾಜ್, ಆರ್.ಕೆ.ವೆಂಕಟರವಣಪ್ಪ, ಇಬ್ರಾಹಿಂ, ವಿಶ್ವನಾಥ್​ಶೆಟ್ಟಿ, ವೆಂಕಟಸ್ವಾಮಿ, ರಾಮಾಂಜಿನೇಯಲು, ರಾಯಪ್ಪಲ್ಲಿ ಮಂಜುನಾಥ್, ಜಿ.ಬಿ.ವೆಂಕಟಶಿವಾರೆಡ್ಡಿ, ವಜೀರ್, ಶ್ರೀನಾಥ್, ಶ್ರೀದೇವಿ ಮತ್ತಿತರರಿದ್ದರು.