ಸಾಗರ: ವ್ಯಕ್ತಿ ಮತ್ತು ಕಾರ್ಯಕ್ರಮದ ಚಿತ್ರಗಳನ್ನು ನಾವು ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿಯಲು ಕಾತುರರಾಗಿರುತ್ತೇವೆ. ಇತ್ತೀಚೆಗೆ ಕಿಸೆಯೊಳಗೆ ತುಂಬಿಸಿಕೊಳ್ಳುವ ಮೊಬೈಲ್‌ನಿಂದಾಗಿ ಛಾಯಾಗ್ರಹಣ ಎನ್ನುವುದು ಬಹು ಸುಲಭ ಎಂದುಕೊಂಡಿದ್ದೇವೆ. ಆದರೆ ಕ್ಯಾಮರಾದ ಒಳನೋಟಗಳು ಅನಾವರಣಗೊಂಡದ್ದು ನೀನಾಸಂನಲ್ಲಿ ಸಾಗರ್ ಫೋಟೋಗ್ರಪಿಕ್ ಸೊಸೈಟಿ ನಾಲ್ಕು ದಿನಗಳ ಕಾಲ ಆಯೋಜಿಸಿದ್ದ ಕಲಾತ್ಮಕ ಛಾಯಾಗ್ರಹಣ ತರಬೇತಿ ಕಾರ್ಯಾಗಾರದಲ್ಲಿ.
ಛಾಯಾಗ್ರಹಣ ಎನ್ನುವುದು ಕೇವಲ ಕ್ಯಾಮರಾ ಕಣ್ಣಿನಲ್ಲಿ ಕ್ಲಿಕ್ ಎನಿಸುವುದಿಲ್ಲ, ನಾವು ತೆಗೆದ ಫೋಟೋ ಒಂದು ಘಟನಾವಳಿಯ ಅಥವಾ ಒಬ್ಬ ವ್ಯಕ್ತಿಯ ಅಭಿವ್ಯಕ್ತಿಯನ್ನು ಸೆರೆಹಿಡಿಯುತ್ತದೆ. ಇಂತಹ ಒಂದು ಅಪರೂಪದ ಶಿಬಿರದಲ್ಲಿ ಕರ್ನಾಟಕದ ಮೂಲೆ ಮೂಲೆಗಳಿಂದ 40ಕ್ಕೂ ಹೆಚ್ಚು ಹವ್ಯಾಸಿ ಛಾಯಾಗ್ರಾಹಕರು ಪಾಲ್ಗೊಂಡು ಛಾಯಾಗ್ರಹಣದ ಕಲಾತ್ಮಕತೆಗೆ ತೆರೆದುಕೊಂಡರು.
ಕತ್ತಲಿನಲ್ಲಿ ಬೆಳಕು ಸಂಯೋಜಿಸಿ ಆನಂದಪುರ ಸಮೀಪ ಚಂಪಕ ಸರಸ್ಸು ಐತಿಹಾಸಿಕ ಪ್ರದೇಶವನ್ನು ಲೈಟ್ ಫೋಟೋಗ್ರಫಿ ಮೂಲಕ ಸೆರೆಹಿಡಿದರು. ಇನ್ನು ಯಕ್ಷಗಾನ, ಡೊಳ್ಳುಕುಣಿತ, ಪೋಟ್ರೈಟ್‌ಗಳನ್ನು ತೆಗೆಯುವುದು ಹೇಗೆ ಎಲ್ಲವನ್ನು ಇಲ್ಲಿ ಅನಾವರಣಗೊಳಿಸಲಾಯಿತು. ಟಿ.ಎಸ್.ಗೋಪಾಲ್ ದೇವಾಲಯಗಳ ಛಾಯಾಗ್ರಹಣ ಮಾಡುವಾಗ ಏನೆಲ್ಲಾ ಗಮನಿಸಬೇಕು. ಒಂದು ಐತಿಹಾಸಿಕ ಪರಂಪರೆಯುಳ್ಳ ಕೌಶಲದ ಕೆತ್ತನೆಯ ದೇವಾಲಯವನ್ನು ಹೇಗೆ ಸೆರೆಹಿಡಿಯಬೇಕು ಎಂಬ ಕೌತುಕವನ್ನು ಪರಿಚಯಿಸಿದರು. ಇದರ ಛಾಯಾಗ್ರಹಣ ಎಷ್ಟು ಕರಾರುವಕ್ಕಾಗಿ ಇರಬೇಕು ಎನ್ನುವುದನ್ನು ಗೌತಮ್ ರಮೇಶ್ ತೋರಿಸಿಕೊಟ್ಟರು.
ಛಾಯಾಗ್ರಹಣ ಎಂದರೇನು? ಅದು ಹೇಗಿರಬೇಕು ಕ್ಯಾಮರಾ ಹಿಡಿದ ಕೂಡಲೆ ಛಾಯಾಗ್ರಾಹಕರಾಗುವುದಿಲ್ಲ. ಅದರ ಸೂಕ್ಷ್ಮಾತಿ ಸೂಕ್ಷ್ಮ ಸಂಗತಿಗಳನ್ನು ತಿಳಿದುಕೊಳ್ಳಬೇಕು ಎನ್ನುವ ಬಗ್ಗೆ ಗರಣಿ ವೆಂಕಟೇಶ್ ಸವಿಸ್ತಾರವಾಗಿ ವಿವರಿಸಿದ್ದು ಶಿಬಿರಾರ್ಥಿಗಳ ಮನಮುಟ್ಟಿತು.
ಛಾಯಾಗ್ರಾಹಕ ಈಶಾನ್ಯ ಶೋಲ ಕಾಡುಗಳ ಕುರಿತ ಕಿರು ಚಿತ್ರ ಪ್ರದರ್ಶಿಸಿದರು. ಕಲಾವಿದರು ಯಕ್ಷಗಾನ, ಡೊಳ್ಳು, ಮುಂತಾದ ಕಲೆಗಳನ್ನು ಪ್ರದರ್ಶಿಸಿದರೆ ಅದರ ಛಾಯಾಗ್ರಹಣ ಹೇಗೆ ಮಾಡುವುದು ಎನ್ನುವುದನ್ನು ನೆರಳು ಬೆಳಕಿನ ಸಂಯೋಜನೆಯೊಂದಿಗೆ ತೋರಿಸಿಕೊಡಲಾಯಿತು. ಭಾನುವಾರ ನಾಲ್ಕು ದಿನದ ಶಿಬಿರ ಸಂಪನ್ನಗೊಂಡಿತು.
ಎಲ್ಲ ವಯೋಮಾನದವರು ಸಾಕ್ಷಿ: ಹೆಗ್ಗೋಡಿನ ನೀನಾಸಂನ ಸಹಕಾರದಲ್ಲಿ ನಾಲ್ಕು ದಿನಗಳ ಕಾಲ ನಮ್ಮ ಸಾಗರ್ ಫೋಟೋಗ್ರಫಿಕ್ ಸೊಸೈಟಿಯಿಂದ ಛಾಯಾಗ್ರಹಣದ ಕಲಾತ್ಮಕತೆ ಕುರಿತು ಕಾರ್ಯಾಗಾರ ನಡೆಸಿದೆವು. ರಾಜ್ಯದ ವಿವಿಧ ಮೂಲೆಗಳಿಂದ ಹವ್ಯಾಸಿ ಛಾಯಾಗ್ರಹಕರು ಶಿಬಿರಕ್ಕೆ ಸಾಕ್ಷಿಯಾದರು ಎಂದು ಶಿಬಿರ ಸಂಚಾಲಕ ಕೆ.ಎಸ್.ರಾಜಾರಾಮ್ ಹೇಳಿದರು. ಅವರ ಉತ್ಸಾಹ ಕಲಿಕೆಯ ಅಭಿಲಾಷೆ ನಮ್ಮಂತಹ ಸಂಘಟಕರಿಗೆ ಕಾರ್ಯಕ್ರಮಗಳನ್ನು ನಡೆಸಲು ಸ್ಫೂರ್ತಿ ನೀಡಿದೆ. ಎಲ್ಲ ವಯೋಮಾನದವರು ಈ ಶಿಬಿರದಲ್ಲಿ ಪಾಲ್ಗೊಂಡಿರುವುದು ಅವರ ಆಸಕ್ತಿಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಕಲಾತ್ಮಕ ಛಾಯಾಗ್ರಹಣದ ಒಳಗಣ್ಣು ಅನಾವರಣ; ನೀನಾಸಂನಲ್ಲಿ ನಾಲ್ಕು ದಿನಗಳ ಕಾರ್ಯಾಗಾರ
ರಾತ್ರಿ ಮಲಗುವ ಮುನ್ನ ಪಾತ್ರೆಗಳನ್ನು ತೊಳೆದಿಡಬೇಕು ಯಾಕೆ ಗೊತ್ತಾ?; ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ | Reason Behind
ಹಿಂದೂ ಧರ್ಮಗ್ರಂಥಗಳಲ್ಲಿ ನಮ್ಮ ಸೌಕರ್ಯ, ಅದೃಷ್ಟ ಮತ್ತು ಆರೋಗ್ಯದ ಬಗ್ಗೆ ಅನೇಕ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅದನ್ನು…
ಶೀತ-ಕೆಮ್ಮಿನಿಂದ ಬಳಲುತ್ತಿದ್ದೀರಾ?; ಈ ಮನೆಮದ್ದು ಬಳಸಿ ಸಮಸ್ಯೆಗೆ ಗುಡ್ಬೈ ಹೇಳಿ | Health Tips
ಚಳಿಗಾಲದಲ್ಲಿ ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಶೀತ, ಕೆಮ್ಮು, ಗಂಟಲು ನೋವು, ಎದೆನೋವು, ನೆಗಡಿ, ತಲೆನೋವು ಮುಂತಾದ…
ಪಿರಿಯಡ್ಸ್ ಸಮಯದಲ್ಲಿ ನಿದ್ರಾಹೀನತೆ ಅನುಭವಿಸುವುದು ಏಕೆ?; ಇಲ್ಲಿದೆ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips
ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (PMS) ಇದು ಸಾಮಾನ್ಯವಾಗಿ ಮಹಿಳೆಯ ಋತುಚಕ್ರದ ಮೊದಲು ಕಾಣಿಸಿಕೊಳ್ಳುತ್ತದೆ. ಮೂಡ್ ಸ್ವಿಂಗ್ಸ್,…