ಸಿನಿಮಾ

ಕಲಬುರಗಿ ಉತ್ತರದಲ್ಲಿ ಬಿಜೆಪಿ ಸೇರ್ಪಡೆ ಪರ್ವ

ಕಲಬುರಗಿ: ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದು ಪಾಟೀಲ್ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಜತೆಗೆ ವಿವಿಧ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿರುವ ಕಾರ್ಯಕರ್ತರ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳವಾಗುತ್ತಿದೆ.
ಕಲಬುರಗಿ ಉತ್ತರ ಮತಕ್ಷೇತ್ರದ ಸಂಜೀವನಗರ, ವಾರ್ಡ್ ನಂ.೧೨ರ ವ್ಯಾಪ್ತಿಯ ಮೇಲಿನಕೇರಿಯಲ್ಲಿನ ಅನೇಕ ಯುವಕರು ಕಾಂಗ್ರೆಸ್, ಜೆಡಿಎಸ್ ತೊರೆದು ಚಂದು ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಸುರೇಶ, ಲಚ್ಚಪ್ಪ ಹರವಾಳ್, ಯೇಸುರಾಜ್ ಕಟ್ಟಿಸೂರ್, ಮಹಾದೇವ ಬಂದಳ್ಳಿ, ಚಂದ್ರಕಾಂತ್ ಜೀವಣಗಿ, ಸುನಿಲ್ ಗಡೆಸುರ್, ಮೌನೇಶ, ಚನ್ನಬಸಪ್ಪ ಹತ್ತಿಗೂಡು, ಸುದೀಪ ನಾಯಕ್, ಚಂದ್ರಕಾಂತ ಬಂಡಾರಿ, ಶರಣು ಜೀವಂತಿ, ಅರ್ಜುನ ನಾಯಕ್, ಮಲ್ಲಿಕಾರ್ಜುನ ನಾಯಕ್, ಚನ್ನಬಸಪ್ಪ ದಳವಾಯಿ, ನಾಗರಾಜ್ ಮೈತ್ರಿ, ಸಾಗರ ನಾಯಕ್, ಶಂಕರ ಬಳಿಚಕ್ರ, ಲಕಣಾಪುರ್, ಮೈಲಾರಿ ಗುಂಡಗುರ್ತಿ ಸೇರಿದಂತೆ ನೂರಾರು ಕಾರ್ಯಕರ್ತರು ಪಕ್ಷ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಗಿರಿ, ಪ್ರಕಾಶ್ ಖಡಕೆ, ಯೆಸು, ಪಕ್ಷದ ಮುಖಂಡರು ಇದ್ದರು.

Latest Posts

ಲೈಫ್‌ಸ್ಟೈಲ್