ಕಲಬುರಗಿಯಲ್ಲಿ ಅನುಭವ ಮಂಟಪ

ಕಲಬುರಗಿ: ಜನಪರ ಆಡಳಿತಕ್ಕೆ ಎಲ್ಲ ಮಠಾಧೀಶರ ಆಶೀರ್ವಾದ ಕೋರಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 12ನೇ ಶತಮಾನದ ಮಾದರಿಯಂತೆ ಕಲಬುರಗಿಯಲ್ಲೂ ಅನುಭವ ಮಂಟಪವನ್ನು ನಿಮರ್ಿಸಲು ಸರ್ಕಾರ ಸಿದ್ಧವಿದೆ ಎಂದು ಘೋಷಿಸಿದರು.
ಡಾ.ಎಸ್.ಎಂ. ಪಂಡಿತ ರಂಗಮಂದರಿದಲ್ಲಿ ಕಲ್ಯಾಣ ಕರ್ನಾಟಕ ಮಠಾಧೀಶರ ವೇದಿಕೆ ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿದ ಅವರು, ಈ ಅನುಭವ ಮಂಟಪಕ್ಕೆ 20 ಎಕರೆ ಜಮೀನು ಒದಗಿಸುವುದರ ಜತೆಗೆ 50 ಕೋಟಿ ಅನುದಾನ ನೀಡಲಾಗುವುದು. ಮೊದಲ ಹಂತದಲ್ಲಿ 20 ಕೋಟಿ ರೂ. ಬಿಡುಗಡೆಗೊಳಿಸುವುದಾಗಿ ಹೇಳಿದರು.
ಈ ಭಾಗದ ಬಹುದಿನಗಳ ಬೇಡಿಕೆಯಂತೆ ಕಲ್ಯಾಣ ಕರ್ನಾಟಕ ಘೋಷಿಸುವ ಅವಕಾಶ ನನಗೆ ಲಭಿಸಿದ್ದು, ಪೂರ್ವಜನ್ಮದ ಪುಣ್ಯ. ವಿವಿಧ ಮಠಾಧೀಶರ ಆಶೀರ್ವಾದದಿಂದ ಆನೆಬಲ ಬಂದಂತಾಗಿದೆ ಎಂದರು.
ಕಲ್ಯಾಣ ಕರ್ನಾಟಕದ ಮಠಗಳು ಅನ್ನ, ಶಿಕ್ಷಣ, ಧರ್ಮ ದಾಸೋಹ ಮಾಡುತ್ತ ಬಂದಿದ್ದರಿಂದ ಪ್ರದೇಶ ಪ್ರಗತಿ ಪಥದಲ್ಲಿದೆ. ಇಲ್ಲದಿದ್ದರೆ ಮತ್ತಷ್ಟು ಹಿಂದುಳಿಯುತ್ತಿತ್ತು. ಇಷ್ಟೊಂದು ಮುಂದುವರಿಯಲು ಮಠಗಳ ಕೊಡುಗೆ ಅಪಾರವಾಗಿದೆ. ಮಠಗಳು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ನೆರೆ ಸಂತ್ರಸ್ತರ ಪುನರ್ವಸತಿಗೆ ನಾಡಿನ ಅನೇಕ ಮಠಗಳು ಸಹಾಯಹಸ್ತ ಚಾಚಿವೆ. ಶರಣಬಸವೇಶ್ವರ ಮಹಾದಾಸೋಹ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ ಅವರು ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಒಂದು ಕೋಟಿ ರೂ. ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ನಂತರ ಮುಖ್ಯಮಂತ್ರಿಗಳನ್ನು ಮಠಾಧೀಶರು ಸತ್ಕರಿಸಿ ಆಶೀರ್ವದಿಸಿದರು.
ಕಲ್ಯಾಣ ಕರ್ನಾಟಕ ಮಠಾಧೀಶರಿಗೆ ವೇದಿಕೆ ಕಲ್ಪಿಸಿಕೊಟ್ಟ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರರನ್ನು ಎಲ್ಲ ಮಠಾಧೀಶರು ಸನ್ಮಾನಿಸಿದರು. ಸಂಸದರಾದ ಡಾ.ಉಮೇಶ ಜಾಧವ್, ಶ್ರೀ ಡಾ.ಜಯಸಿದ್ಧೇಶ್ವರ ಸ್ವಾಮೀಜಿ ಇದ್ದರು.
ದೇವಾಪುರ ಶ್ರೀ ಶಿವಮೂರ್ತಿ  ಶಿವಾಚಾರ್ಯ ಪ್ರಾಸ್ತಾವಿಕ ಮಾತನಾಡಿದರು. ಮಹಾಗಾಂವ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಗತಿಸಿದರು. ಪಾಳಾ ಶ್ರೀ ರಾಜಶೇಖರ ಶಿವಾಚಾರ್ಯರು ನಿರೂಪಣೆ ಮಾಡಿದರು. ಶಖಾಪುರ ತಪೋವನ ಮಠದ ಶಾಲೆ ಮಕ್ಕಳು ನೃತ್ಯ ಪ್ರಸ್ತುತಪಡಿಸಿದರು. ಶಂಕರ ಹೂಗಾರ ದೇಸಾಯಿ ವಚನಗಾಯನ ನಡೆಸಿಕೊಟ್ಟರು. 


ನಿಜಾಮ ಬ್ರಿಟಿಷರ ಗುಲಾಮನಾಗಿದ್ದ. ನಾವೂ ನಿಜಾಮನ ಗುಲಾಮರಾಗಿದ್ದೆವು. ಹೈದರಾಬಾದ್ ಹೆಸರು ಕಿತ್ತೆಸೆದು ಕಲ್ಯಾಣ ಕರ್ನಾಟಕ ಹೆಸರಿಟ್ಟಿದ್ದು ನಮಗೆ ಮತ್ತೆ ಸ್ವಾತಂತ್ರೃಸಿಕ್ಕಷ್ಟು ಸಂತಸ ತಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಈ ಭಾಗಕ್ಕೆ ಅಂಟಿದ್ದ ಹಿಂದುಳಿದ ಹಣೆಪಟ್ಟಿ ಕಳಚಿದ್ದಾರೆ. ಇನ್ನು ಕಲ್ಯಾಣ ರಾಜ್ಯವಾಗಲಿದೆ.
| ಶ್ರೀ ಡಾ.ಶರಣಬಸವಪ್ಪ ಅಪ್ಪ
ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನ

One Reply to “ಕಲಬುರಗಿಯಲ್ಲಿ ಅನುಭವ ಮಂಟಪ”

  1. Rsir,
    Donation of one crore rupees by sri. SB unit towards nature disaster during the period is highly appreciated & its continuous efforts since more then fifty years for development in education field in all respect too is miracle/remarkable even better then concern Government.

Leave a Reply

Your email address will not be published. Required fields are marked *