ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಪೈಪೋಟಿ; ಯಾರು ಹಿತವರು ಮೂವರೊಳಗೆ…?

blank

ಮಂಜುನಾಥ ಎಸ್. ಅಂಗಡಿ ಧಾರವಾಡ
ರಾಜ್ಯದ 2ನೇ ಹಳೆಯ ವಿಶ್ವವಿದ್ಯಾಲಯ ಎಂಬ ಖ್ಯಾತಿ ಗಳಿಸಿರುವ ಕರ್ನಾಟಕ ವಿಶ್ವವಿದ್ಯಾಲಯ 7 ತಿಂಗಳಿAದ ಪ್ರಭಾರ ಆಡಳಿತದಲ್ಲೇ ಮುಂದುವರಿದಿದೆ. ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕಾಯಂ ಕುಲಪತಿ ನೇಮಕ ಸಂಬ0ಧ ರಾಜ್ಯ ಸರ್ಕಾರ ಅಂತೂ ಶೋಧನಾ ಸಮಿತಿ ರಚಿಸಿದೆ. ಈ ಸಮಿತಿಯು ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಮೂವರ ಹೆಸರುಗಳನ್ನು ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ.
ವಿಶ್ವವಿದ್ಯಾಲಯದ ಕಾಯಂ ಕುಲಪತಿಯಾಗಿದ್ದ ಪ್ರೊ. ಕೆ.ಬಿ. ಗುಡಸಿ, 3 ವರ್ಷ ಆಡಳಿತದ ಚುಕ್ಕಾಣಿ ಹಿಡಿದು 2024ರ ಸೆ. 25ರಂದು ನಿವೃತ್ತರಾಗಿದ್ದಾರೆ. ಅಲ್ಲಿಂದ ಈವರೆಗೆ ವಿಶ್ವವಿದ್ಯಾಲಯ ಮೂವರು ಪ್ರಭಾರ ಕುಲಪತಿಗಳನ್ನು ಕಂಡಿದೆ. 2025ರ ಜ. 1ರಿಂದ ಡಾ. ಎಸ್. ಜಯಶ್ರೀ ಪ್ರಭಾರ ಕುಲಪತಿಯಾಗಿದ್ದಾರೆ.
ಕುಲಪತಿ ಹುದ್ದೆಯ ಆಯ್ಕೆಗೆ ಅರ್ಹ ಪ್ರಾಧ್ಯಾಪಕರಿಂದ ಸರ್ಕಾರ ಅರ್ಜಿ ಆಹ್ವಾನಿಸಿತ್ತು. ಶೋಧನಾ ಸಮಿತಿಗೆ ದೇಶದ ವಿವಿಧ ವಿಶ್ವವಿದ್ಯಾಲಯಗಳ 191 ಪ್ರಾಧ್ಯಾಪಕರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಕರ್ನಾಟಕ ವಿಶ್ವವಿದ್ಯಾಲಯದ 30 ಪ್ರಾಧ್ಯಾಪಕರಿದ್ದರು. ಉಳಿದಂತೆ ಮೈಸೂರು, ಬೆಂಗಳೂರು, ಕಲಬುರಗಿ ಹಾಗೂ ಇತರ ವಿಶ್ವವಿದ್ಯಾಲಯಗಳ ಸುಮಾರು 25ರಿಂದ 30 ವರ್ಷಕ್ಕಿಂತ ಹೆಚ್ಚು ಬೋಧನಾ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಿದ್ದಾರೆ.
ಅರ್ಹ ಅಭ್ಯರ್ಥಿಗಳ ಆಯ್ಕೆಗೆ ರಾಜ್ಯ ಸರ್ಕಾರ ಶೋಧನಾ ಸಮಿತಿ ರಚಿಸಿತ್ತು. ಸಮಿತಿಯ ಅಧ್ಯಕ್ಷರಾಗಿ ಗುಲ್ಬರ್ಗ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ಎ.ಎಚ್. ರಾಜಾಸಾಬ ಅವರನ್ನು ನೇಮಿಸಿತ್ತು. ಪ್ರೊ. ಕೈಲಾಶಚಂದ್ರ ಶರ್ಮಾ ಯುಜಿಸಿ ನಾಮನಿರ್ದೇಶಿತ), ಡಾ. ಟಿ.ಆರ್. ಥಾಪಕ್ (ರಾಜ್ಯಪಾಲರ ನಾಮನಿರ್ದೇಶಿತ) ಮತ್ತು ಡಾ. ವಿ.ಜಿ. ತಳವಾರ (ಸಿಂಡಿಕೇಟ್ ನಾಮನಿರ್ದೇಶಿತ) ಸಮಿತಿಯ ಸದಸ್ಯರಾಗಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಶಶಿಧರ ಜಿ. ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ.
* ಮೂವರ ಹೆಸರು ಅಂತಿಮ:
ಶೋಧನಾ ಸಮಿತಿಯು 191 ಅಭ್ಯರ್ಥಿಗಳ ಪೈಕಿ ಮೂವರ ಹೆಸರನ್ನು ಅಂತಿಮಗೊಳಿಸಿದೆ. ಮಂಗಳೂರು ವಿಶ್ವವಿದ್ಯಾಲಯದ ಇಲೆಕ್ಟಾçನಿಕ್ಸ್ ವಿಭಾಗದ ಡಾ. ಎ.ಎಂ. ಖಾನ್, ಕರ್ನಾಟಕ ವಿಶ್ವವಿದ್ಯಾಲಯದ ಬಯೋಟೆಕ್ನಾಲಜಿ ಆ್ಯಂಡ್ ಮೈಕ್ರೋಬಯಾಲಜಿ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ವೇದಮೂರ್ತಿ ಎ.ಬಿ., ಹಾಗೂ ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದ ಸಮಾಜಶಾಸ್ತç ವಿಭಾಗದ ಪ್ರಾಧ್ಯಾಪಕಿ ಡಾ. ಸಮತಾ ಬಿ. ದೇಶಮಾನೆ ಅವರ ಹೆಸರುಗಳನ್ನು ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ.
ಶೋಧನಾ ಸಮಿತಿಯು ಉನ್ನತ ಶಿಕ್ಷಣ ಇಲಾಖೆಗೆ ಮೂವರ ಹೆಸರನ್ನು ಆಯ್ಕೆ ಮಾಡಿ ವರದಿ ನೀಡಿದೆ. ಇಲಾಖೆಯಿಂದ ಮುಖ್ಯಮಂತ್ರಿಗೆ ಪಟ್ಟಿ ಸಲ್ಲಿಕೆಯಾಗಲಿದೆ. ಅಲ್ಲಿಂದ ರಾಜ್ಯಪಾಲರಿಗೆ ಸಲ್ಲಿಕೆಯಾಗಿ ಮೂವರಲ್ಲಿ ಒಬ್ಬರ ಹೆಸರು ಅಂತಿಮಗೊಳ್ಳಲಿದೆ. ಅಂತೂ ಇನ್ನೊಂದು ತಿಂಗಳಲ್ಲಿ ವಿಶ್ವವಿದ್ಯಾಲಯಕ್ಕೆ ಕಾಯಂ ಕುಲಪತಿ ನೇಮಕವಾಗುವ ಸಾಧ್ಯತೆ ಇದ್ದು, ಯಾರು ಹಿತವರು ಮೂವರೊಳಗೆ…? ಎಂಬುದು ಕುತೂಹಲ ಮೂಡಿಸಿದೆ.

blank
Share This Article
blank

ಇದು ನೇರಳೆ ಹಣ್ಣಿನ ಸೀಸನ್​ ಮಿಸ್​ ಮಾಡ್ದೆ ತಿನ್ನಿ… ತಿಂದ್ರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ…Black jamun

Black jamun : ಆಯಾ ಋತುವಿನಲ್ಲಿ ಸಿಗುವ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು…

ಬೆಳಿಗ್ಗೆ ಈ ಸೂಪರ್​ ಫುಡ್​ಗಳನ್ನು ಸೇವಿಸಿ: ನಿಮ್ಮ ದೇಹದಲ್ಲಾಗುವ ಸಕಾರಾತ್ಮಕ ಬದಲಾವಣೆ ಗಮನಿಸಿ | Superfoods

Superfoods: ಸಾಮಾನ್ಯವಾಗಿ ಬೆಳಗಿನ ಸಮಯವು ದಿನಪೂರ್ತಿ ಮನಸ್ಥಿತಿಯನ್ನು ನಿರ್ಧರಿಸುತ್ತದೆ. ಎದ್ದ ತಕ್ಷಣ ನೀವು ಏನು ಮಾಡುತ್ತೀರಿ…

blank