ಸಿನಿಮಾ

ಕರ್ನಾಟಕ `ಕೈ’ವಶ-ಸವಾಲು ಗೆದ್ದ ಖರ್ಗೆ

ಸ.ದಾ. ಜೋಶಿ ಕಲಬುರಗಿ
ಕಲ್ಯಾಣ ಕರ್ನಾಟಕದ ಪ್ರಭಾವಿ ನೇತಾರ, ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ತವರು ರಾಜ್ಯದ ವಿಧಾನಸಭೆ ಚುನಾವಣೆ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬೀಗಿದ್ದಾರೆ. ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದಿರುವುದು ತವರಿನ ಜನರು ಖರ್ಗೆ ಅವರಿಗೆ ಕೊಟ್ಟ ಬಹುದೊಡ್ಡ ಗಿಫ್ಟ್ ಎನಿಸಿದೆ.

ಕಳೆದ ಅಕ್ಟೋಬರ್‌ನಲ್ಲಿ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ಬೆನ್ನಲ್ಲೇ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ನಡೆದವು. ಗುಜರಾತ್‌ನಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತರೆ, ಹಿಮಾಚಲ ಕೈವಶ ಮಾಡಿಕೊಂಡಿತು. ಬಳಿಕ ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ ವಿಧಾನಸಭೆ ಚುನಾವಣೆಗಳಲ್ಲಿ ಕೈಗೆ ಸೋಲಾಗಿ ಮೊದಲನೇ ಬಾರಿಗೆ ಈಶಾನ್ಯ ರಾಜ್ಯಗಳಲ್ಲೂ ಕಮಲ ಅರಳಿತ್ತು. ಹೀಗಾಗಿ ಸವಾಲಾಗಿ ಪರಿಣಮಿಸಿದ್ದ ತವರು ರಾಜ್ಯ ಕೈವಶ ಆಗಿರುವುದು ಖರ್ಗೆ ಪಾಲಿಗೆ ಬಿಗ್ ರಿಲೀಫ್ ನೀಡುವ ಜತೆಯಲ್ಲೇ ೨೦೨೪ರ ಲೋಕಸಭೆ ಚುನಾವಣೆಗೆ ಸಜ್ಜಾಗುವುದಕ್ಕೂ ಶಕ್ತಿ ತುಂಬಿದೆ.

ಬಿಜೆಪಿಯಿAದ ಅಧಿಕಾರ ಕೈವಶಕ್ಕೆ ಕಾಂಗ್ರೆಸ್ ಭಾರಿ ತಂತ್ರ ರೂಪಿಸಿತ್ತು. ಖರ್ಗೆ ಖುದ್ದು ಅಖಾಡಕ್ಕೆ ಧುಮುಕಿ ರಾಜ್ಯಾದ್ಯಂತ ಸಂಚರಿಸಿ ಕಾರ್ಯತಂತ್ರ ಹೆಣೆದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ತವರು ರಾಜ್ಯ ಗುಜರಾತ್ ಜನರು ವಿಧಾನಸಭೆ ಚುನಾವಣೆಯಲ್ಲಿ ಭರಪೂರ ಸಾಥ್ ನೀಡಿದ್ದರು. ಕರ್ನಾಟಕದ ನಾನು ಕಾಂಗ್ರೆಸ್‌ನ ಪರಮೋಚ್ಛ ಹುದ್ದೆಯಲ್ಲಿz್ದೆÃನೆ. ನಾನು ಈ ನಾಡಿನ ಮಣ್ಣಿನ ಮಗ. ಮೋದಿ ಅವರಿಗೆ ಗುಜರಾತ್ ಜನರು ಆಶೀರ್ವದಿಸಿದಂತೆ ಕರ್ನಾಟಕದ ಮತದಾರರು ನನಗೂ ಆಶೀರ್ವದಿಸುವಂತೆ ಖರ್ಗೆ ಮಾಡಿದ ಮನವಿಗೆ ಸ್ಪಂದನೆ ಸಿಕ್ಕಿದೆ. ಅವರ ನಿರೀಕ್ಷೆ ಮೀರಿಸುವಷ್ಟು ಜನಬೆಂಬಲ ಸಿಕ್ಕಿರುವುದು ಖರ್ಗೆ ಖದರ್ ಹೆಚ್ಚಿಸಿದೆ.

ಪಕ್ಷದೊಳಗಿನ ಗುಂಪುಗಾರಿಕೆ, ಬಣ ರಾಜಕೀಯ, ನಾಯಕತ್ವದ ಹಗ್ಗ-ಜಗ್ಗಾಟದ ಜತೆ ಜತೆಗೆ ಚುನಾವಣೆ ವೇಳೆ ಬಿಜೆಪಿಗರು ಬಿಟ್ಟ ಧರ್ಮಾಸ್ತç, ಮೋದಿ ಅಲೆ ಸೇರಿ ನಾನಾ ಸವಾಲುಗಳನ್ನು ದಾಟಿ ಪಕ್ಷವನ್ನು ಅಧಿಕಾರದ ದಡ ಸೇರಿಸುವಲ್ಲಿ ಖರ್ಗೆ ಸಕ್ಸಸ್ ಆಗಿದ್ದಾರೆ. ತವರು ರಾಜ್ಯದ ಜಯ ಖರ್ಗೆ ಅವರಿಗೆ ಮುಂದಿನ ರಾಜಕೀಯ ಹಾದಿ ಕ್ರಮಿಸಲು ಬೂಸ್ಟರ್ ಡೋಸ್ ನೀಡಿದೆ ಎನ್ನಬಹುದು.

ಕಲ್ಯಾಣ ಕರ್ನಾಟಕದಲ್ಲಿ ಬಂಪರ್ ಫಸಲು: ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯವರಾದ ಕಾರಣ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸ್ಥಾನ ಕಾಂಗ್ರೆಸ್ ಗೆಲ್ಲಬಹುದು ಎಂಬ ನಿರೀಕ್ಷೆಗಳು ಹುಸಿಯಾಗಲಿಲ್ಲ. ಕಕದ ಏಳು ಜಿಲ್ಲೆಗಳಲ್ಲಿ ೪೧ ಸ್ಥಾನಗಳಿದ್ದು, ಕಾಂಗ್ರೆಸ್ ೨೬ರಲ್ಲಿ ಗೆದ್ದು ಭರ್ಜರಿ ಬೇಟೆಯಾಡಿದೆ. ಬಿಜೆಪಿ ಕೇವಲ ೧೦ ಸ್ಥಾನಕ್ಕೆ ತೃಪ್ತಿಪಟ್ಟಿದೆ. ೨೦೧೮ರಲ್ಲಿ ಕಾಂಗ್ರೆಸ್ ೨೧ರಲ್ಲಿ ಗೆದ್ದಿತ್ತು. ಆದರೆ ಆಪರೇಷನ್ ಕಮಲ ಇತರ ಕಾರಣಕ್ಕೆ ಈ ಸಂಖ್ಯೆ ೧೮ಕ್ಕೆ ಇಳಿದಿತ್ತು. ಈಗ ೮ ಸ್ಥಾನ ವೃದ್ಧಿಸಿಕೊಂಡಿದೆ. ೧೮ ಸ್ಥಾನ ಹೊಂದಿದ್ದ ಬಿಜೆಪಿಗೆ ೮ ಮೈನಸ್ ಆಗಿವೆ. ಜೆಡಿಎಸ್ ೪ರಿಂದ ೩ಕ್ಕೆ ಕುಸಿದಿದೆ. ಸ್ವಂತ ಬಲದ ಮೇಲೆ ಅಧಿಕಾರಕ್ಕೇರುವಲ್ಲಿ ಕಕ ಭಾಗ ಮಹತ್ವದ ಪಾತ್ರ ವಹಿಸುತ್ತ ಬಂದಿದೆ. ಲಿಂಗಾಯತರ ಪ್ರಾಬಲ್ಯದ ಕ್ಷೇತ್ರಗಳು ಈ ಭಾಗದಲ್ಲಿ ಹೆಚ್ಚಿದ್ದರೂ ಬಿಜೆಪಿ ನೆಲ ಕಚ್ಚಿರುವುದು ವಿಶೇಷ.

ಬಳ್ಳಾರಿ, ಯಾದಗಿರಿಯಲ್ಲಿ ಬಿಜೆಪಿ ಶೂನ್ಯ ಸಾಧನೆ !: ಬಿಜೆಪಿ ಭದ್ರಕೋಟೆ ಎನಿಸಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಈ ಸಲ ಕಾಂಗ್ರೆಸ್ ಮಿಂಚಿದೆ. ಬಳ್ಳಾರಿಯ ಎಲ್ಲ ಐದು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ. ಯಾದಗಿರಿ ಜಿಲ್ಲೆಯಲ್ಲೂ ಬಿಜೆಪಿ ಶೂನ್ಯ ಸಾಧನೆ ಮಾಡಿದೆ. ಇಲ್ಲಿನ ೪ ಕ್ಷೇತ್ರಗಳಲ್ಲಿ ೩ರಲ್ಲಿ ಕಾಂಗ್ರೆಸ್, ೧ರಲ್ಲಿ ಜೆಡಿಎಸ್ ಗೆದ್ದಿದೆ. ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎನಿಸಿದ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶಿಸಿದೆ. ಇಲ್ಲಿನ ೯ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ೭ರಲ್ಲಿ ಗೆದ್ದಿದೆ. ಬಿಜೆಪಿ ಕೇವಲ ೨ಕ್ಕೆ ತೃಪ್ತಿಪಟ್ಟಿದೆ. ಕಳೆದ ಸಲ ಕಲಬುರಗಿ ಜಿಲ್ಲೆಯಲ್ಲಿ ಬಿಜೆಪಿ ೫, ಕಾಂಗ್ರೆಸ್ ೪ ಸ್ಥಾನ ಹೊಂದಿದ್ದವು. ಖರ್ಗೆ ಪುತ್ರ ಪ್ರಿಯಾಂಕ್ ಸ್ಪರ್ಧಿಸಿದ್ದ ಚಿತ್ತಾಪುರ ಸೇರಿ ಏಳು ಸ್ಥಾನ ತೆಕ್ಕೆಗೆ ಹಾಕಿಕೊಂಡು ಕೈ ಪಡೆ ತಮ್ಮ ನೇತಾರನ ಹಿರಿಮೆ ಹೆಚ್ಚಿಸಿದೆ. ರಾಯಚೂರು ಜಿಲ್ಲೆಯ ೭ ಕ್ಷೇತ್ರಗಳಲ್ಲಿ ೪ ಸ್ಥಾನ ಕೈ ವಶಪಡಿಸಿಕೊಂಡಿದೆ. ಬೀದರ್ ಜಿಲ್ಲೆಯ ೬ ಕ್ಷೇತ್ರಗಳಲ್ಲಿ ಬಿಜೆಪಿ ೪ರಲ್ಲಿ ಗೆದ್ದರೆ, ಕಾಂಗ್ರೆಸ್ ೨ ಸ್ಥಾನ ತನ್ನದಾಗಿಸಿಕೊಂಡಿದೆ. ಕೊಪ್ಪಳ ೩, ವಿಜಯನಗರ ಜಿಲ್ಲೆಯಲ್ಲಿ ೨ ಸ್ಥಾನ ಕಾಂಗ್ರೆಸ್ ಗೆದ್ದಿದೆ.

ಆಡಳಿತ ರಾಜ್ಯಗಳ ಸಂಖ್ಯೆ ನಾಲ್ಕಕ್ಕೇರಿಕೆ: ಕರ್ನಾಟಕದ ಗೆಲುವಿನ ಮೂಲಕ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಸಂಖ್ಯೆ ೪ಕ್ಕೇರಿದೆ. ದೇಶದ ೩೧ ರಾಜ್ಯಗಳ ಪೈಕಿ ಕಾಂಗ್ರೆಸ್ ಛತ್ತೀಸ್‌ಗಢ, ರಾಜಸ್ಥಾನ, ಹಿಮಾಚಲ ಪ್ರದೇಶಗಳಲ್ಲಿ ಮಾತ್ರ ಅಧಿಕಾರದಲ್ಲಿತ್ತು. ಇದೀಗ ಖರ್ಗೆ ತವರು ರಾಜ್ಯವೂ ಸೇರಿದೆ. ಸ್ವಾತಂತ್ರÈದ ನಂತರ ಬರೋಬ್ಬರಿ ಆರು ದಶಕ ಕೇಂದ್ರ ಮತ್ತು ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಪಾರುಪತ್ಯವಿತ್ತು. ಲೋಕಸಭೆಯಲ್ಲಂತೂ ನಿಚ್ಚಳ ಬಹುಮತವೇ ಪಡೆಯುತ್ತಿತ್ತು. ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಬಿಟ್ಟರೆ ಗತಿಯೇ ಇರಲಿಲ್ಲ. ಆದರೆ ಸ್ಥಿತಿ ಕ್ರಮೇಣ ಬದಲಾಗುತ್ತ ಸಾಗಿ ಆಡಳಿತದಿಂದ ಕೈ ಹಿಡಿತ ಒಂದೊAದೇ ಕಳಚುತ್ತಿವೆ. ಮುಂಚೆ ಅಲ್ಲೊಂದು, ಇಲ್ಲೊಂದು ಕಡೆ ಇರುತ್ತಿದ್ದ ಬಿಜೆಪಿ ಈಗ ೧೬ಕ್ಕೂ ಹೆಚ್ಚು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ. ಸಂಸತ್ತಿನಲ್ಲಿ ಬಿಜೆಪಿ ೩೦೩ ಸ್ಥಾನ ಹೊಂದಿದ್ದರೆ, ಕಾಂಗ್ರೆಸ್ ಸಂಖ್ಯೆ ಕೇವಲ ೫೩. ಈ ಅಂಕಿ ಅಂಶಗಳು ಕಾಂಗ್ರೆಸ್ (ದು)ಸ್ಥಿತಿಯನ್ನು ತೋರಿಸುತ್ತವೆ. ದಕ್ಷಿಣ ಭಾರತದಲ್ಲಿ ನೆಲೆ ಗಟ್ಟಿಗೊಳಿಸಿಕೊಳ್ಳಲು ಕರ್ನಾಟಕವೇ ವೇದಿಕೆ. ಲೋಕಸಭೆ ಚುನಾವಣೆಗೂ ಮುನ್ನ ಇಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿರುವುದು ರಾಷ್ಟçಕ್ಕೆ ಹೊಸ ಸಂದೇಶ ರವಾನಿಸಿದಂತಾಗಿದೆ.

Latest Posts

ಲೈಫ್‌ಸ್ಟೈಲ್