More

  ಕರ್ನಾಟಕದಲ್ಲಿ ಕಾಂಗ್ರೆಸ್‌ನಿಂದ ಓಲೈಕೆ ರಾಜಕಾರಣ | ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿಕೆ

  ಮುದ್ದೇಬಿಹಾಳ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಒಂದೇ ವಾರದಲ್ಲಿ 10 ಕೊಲೆಗಳಾಗಿವೆ. ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಲವ್ ಜಿಹಾದಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರೂ ಮುಖ್ಯಮಂತ್ರಿ, ಗೃಹಮಂತ್ರಿ ಉಡಾೆ ಉತ್ತರ ನೀಡಿ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ರಾಷ್ಟ್ರಪತಿ, ರಾಜ್ಯಪಾಲರು ಕೂಡಲೇ ಈ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಎಬಿವಿಪಿ, ಬಿಜೆಪಿ ಮುದ್ದೇಬಿಹಾಳ ಮಂಡಲ ಘಟಕ ಪದಾಧಿಕಾರಿಗಳು, ಕಾರ್ಯಕರ್ತರು, ವಿದ್ಯಾರ್ಥಿಗಳು ಶನಿವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

  ಬಜಾರ್ ಹನುಮಾನ್ ದೇವಸ್ಥಾನದಿಂದ ಪ್ರಾರಂಭಗೊಂಡ ರ‌್ಯಾಲಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತ ಬಸವೇಶ್ವರ ವೃತ್ತಕ್ಕೆ ಬಂದು ಧರಣಿ ರೂಪ ಪಡೆಯಿತು. ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ- ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸಮೇತ ರ‌್ಯಾಲಿಯಲ್ಲಿದ್ದ ಎಲ್ಲರೂ ರಸ್ತೆ ಮೇಲೆ ಕುಳಿತು ಧರಣಿ ನಡೆಸಿದರು.

  ಮಾಜಿ ಶಾಸಕ ನಡಹಳ್ಳಿ ಮಾತನಾಡಿ, ನೇಹಾ ಹತ್ಯೆ ಬಗ್ಗೆ ಉಡಾೆ ಹೇಳಿಕೆ ನೀಡಿದ್ದಾರೆಂದು ದೂರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಮಂತ್ರಿ ಪರಮೇಶ್ವರ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರನ್ನು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡರು. ಅವರನ್ನು ನಾಲಾಯಕರೆಂದು ಜರಿದು ಕರ್ನಾಟಕದಲ್ಲಿ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿರುವ ಪರಿಣಾಮ ನೇಹಾಳಂಥ ಯುವತಿಯರ ಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿದರು.

  ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ, ಕೊಲೆ ನಡೆದಾಗ ಅದಕ್ಕೆ ಕಾರಣರಾದವರಿಗೆ 3 ತಿಂಗಳೊಳಗೆ ಗಲ್ಲು ಶಿಕ್ಷೆ ಕೊಡಬೇಕೆಂದು ಸುಪ್ರಿಂಕೋರ್ಟ್ ಆದೇಶವಿದೆ. ಆದರೆ ನೇಹಾ ಪ್ರಕರಣದಲ್ಲಿ ಸಿಎಂ, ಗೃಹಮಂತ್ರಿ ಯಾಜ್‌ನನ್ನು ಬಚಾವ್ ಮಾಡುವ ಲಕ್ಷಣ ಕಂಡುಬರುತ್ತಿದೆ. ನಿಮ್ಮ ಸರ್ಕಾರಕ್ಕೆ ಯಾಜ್ ಶಿಕ್ಷಿಸುವ ಧಮ್ ಇಲ್ಲದಿದ್ದರೆ ಅವನನ್ನು ನೇಹಾಳ ಕುಟುಂಬದವರ ಕೈಗೆ ಕೊಡಿ. ನೇಹಾಳಿಗೆ ಚೂರಿ ಇರಿದಂತೆ ಅವನಿಗೂ ನೂರು ಬಾರಿ ಚೂರಿ ಇರಿದು ಸಾಯಿಸುವಂತಾಗಲಿ. ಅವನಿಗೆ ನಾಗರಿಕ ಸಮಾಜದಲ್ಲಿ ಬದುಕುವ ಅರ್ಹತೆ, ಹಕ್ಕು ಇಲ್ಲ ಎಂದು ಕಿಡಿಕಾರಿದರು.

  ಎಬಿವಿಪಿ ಹಿರಿಯ ಮುಖಂಡ ರವೀಂದ್ರ ಬಿರಾದಾರ, ರವಿ ನಾಯಕ, ಸಿದ್ದರಾಜ ಹೊಳಿ, ತಹಸೀಲ್ದಾರ್ ಕಚೇರಿ ಎದುರು ನಡೆದ ಬಹಿರಂಗ ಸಭೆಯಲ್ಲಿ ಎಬಿವಿಪಿ ನಗರ ಸಹಕಾರ್ಯದರ್ಶಿ ಗಂಗಾ ಹಡಪದ, ಅಜೀತಾ ಪವಾರ, ಎವಿಬಿಪಿ ಪ್ರಾಂತ ಕಾರ್ಯಕಾರಿಣಿ ಹಾಗೂ ತಾಲೂಕು ಸಂಚಾಲಕ ಶಿವನಗೌಡ ಬಿರಾದಾರ, ಸರಿತಾ ಸಜ್ಜನ, ನಗರ ಕಾರ್ಯದರ್ಶಿ ಓಂಕಾರ ಪವಾರ, ಸ್ವಾತಿ ಬಿರಾದಾರ, ಡಿಎಸ್‌ಎಸ್ ಮುಖಂಡ ಹರೀಶ ನಾಟಿಕಾರ ಮಾತನಾಡಿ ಘಟನೆಯನ್ನು ಉಗ್ರವಾಗಿ ಖಂಡಿಸಿದರು.

  ರಾಷ್ಟ್ರಪತಿ, ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಎಬಿವಿಪಿ ಪರವಾಗಿ ಉದಯಸಿಂಗ್ ರಾಯಚೂರ, ಬಿಜೆಪಿ ಪರವಾಗಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ್ ಅವರು ತಹಸೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಪ್ರತ್ಯೇಕವಾಗಿ ಸಲ್ಲಿಸಿದರು. ಪಿಎಸ್‌ಐ ಸಂಜಯ್ ತಿಪ್ಪರಡ್ಡಿ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ನೀಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts