18.5 C
Bangalore
Sunday, December 15, 2019

ಕರ್ನಾಟಕದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಹೆಜ್ಜೆಗುರುತು

Latest News

ಮೊದಲ ಟೆಸ್ಟ್​​ನಲ್ಲಿ ಆಸ್ಟ್ರೇಲಿಯಾಕ್ಕೆ ಬೃಹತ್ ಮುನ್ನಡೆ

ಪರ್ತ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮುನ್ನಡೆ ಕಂಡಿರುವ ಆತಿಥೇಯ ಆಸ್ಟ್ರೇಲಿಯಾ ತಂಡ ಅಹರ್ನಿಶಿ ಟೆಸ್ಟ್ ಪಂದ್ಯಗಳಲ್ಲಿನ ತನ್ನ...

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ ಹಾವು: ವಿಡಿಯೋ ಬಗ್ಗೆ ಬಿಸಿಸಿಐ ಹೇಳಿದ್ದೇನು?

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ...

ವಿದೇಶಿ ಮಹಿಳೆಯಿಂದ ಪಿಂಡಪ್ರದಾನ

ಹೊಸಪೇಟೆ (ಬಳ್ಳಾರಿ): ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು ತಾಯಿಯ ಆತ್ಮಕ್ಕೆ ಶಾಂತಿ, ಸದ್ಗತಿ ದೊರೆಯಲೆಂದು ಶನಿವಾರ ಹಂಪಿ ನದಿ ತೀರದಲ್ಲಿ ಪುರೋಹಿತರ ನೇತೃತ್ವದಲ್ಲಿ ಹಿಂದು ಧಾರ್ವಿುಕ ವಿಧಿವಿಧಾನಗಳಂತೆ...

40 ಲಕ್ಷ ರೂಪಾಯಿ ಮೌಲ್ಯದ ಪೆಟ್ರೋಲ್ ಬಾವಿಗೆ

ಅಂಕೋಲಾ: ಪೆಟ್ರೋಲ್ ಬಂಕ್​ನ ಸಂಗ್ರಹ ಟ್ಯಾಂಕ್​ನಲ್ಲಿ ಸೋರಿಕೆಯುಂಟಾಗಿ ಅಂದಾಜು 40 ಲಕ್ಷ ರೂ. ಮೌಲ್ಯದ ಪೆಟ್ರೋಲ್ ಸಮೀಪದ ಮನೆಯೊಂದರ ಬಾವಿಗೆ ಸೇರಿದೆ. ಖರೀದಿ ಮತ್ತು ಮಾರಾಟದಲ್ಲಿ ವ್ಯತ್ಯಾಸ...

ಕಾಂಗ್ರೆಸ್ ಸೋಲಿಗೆ ಹತ್ತುಹಲವು ಕಾರಣ; ಉಸ್ತುವಾರಿ ವರದಿಗೆ ನಾಯಕರ ನಡುಕ

ಬೆಂಗಳೂರು:  ರಾಜ್ಯದ 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಪಕ್ಷ ಅನುಭವಿಸಿದ ಹೀನಾಯ ಸೋಲಿಗೆ ಹತ್ತು ಕಾರಣಗಳನ್ನು ಪಟ್ಟಿ ಮಾಡಿ ಎಐಸಿಸಿಗೆ ಸಲ್ಲಿಸಿರುವ ಕಾಂಗ್ರೆಸ್ ಉಸ್ತುವಾರಿಗಳ ನಡೆ ರಾಜ್ಯ...

|ಡಾ.ಎಸ್.ಆರ್.ಲೀಲಾ

ಬಹು ಪ್ರಾಚೀನಕಾಲದಿಂದಲೂ ಭಾರತದೇಶ ಬಹುಭಾಷೆಗಳ ನೆಲೆವೀಡಾಗಿದೆ. ಒಂದೊಂದು ಪ್ರಾಂತದಲ್ಲೂ ಒಂದೊಂದು ನುಡಿ ಹೊಮ್ಮಿ, ಸಾಹಿತ್ಯ ಫಲಪುಷ್ಪಗಳನ್ನೂ ನೀಡಿ ಪಕ್ವವಾಗಿ ಬೆಳೆದಿದೆ. ಹಿಂದೆ ಮಹಾರಾಷ್ಟ್ರಿ, ಶೌರಸೇನೀ ಮಾಗಧೀ, ಪೈಶಾಚೀ, ಪ್ರಾಚ್ಯ ಭಾಷೆ ಮುಂತಾದವು ಇದ್ದವು. ಪ್ರಸಕ್ತ ಕನ್ನಡ, ತಮಿಳು, ತೆಲುಗು, ಮಲಯಾಳಿ, ಓಡಿಸ್ಸಿ, ಅವಧಿ, ಗುಜರಾತಿ, ಮರಾಠಿ ಮುಂತಾಗಿ ಆಯಾ ಪ್ರಾಂತಗಳಲ್ಲಿ ನುಡಿಗಡಣಗಳೆ ಹುಟ್ಟಿ ಅವು ಕೂಡ ಈ ನೆಲದ ಸತ್ತ್ವವನ್ನು ಹೀರಿ ಪುಷ್ಟವಾಗಿ ಬೆಳೆದಿವೆ. ಈ ಕಾರಣದಿಂದಾಗಿ ಭಾರತದ ಭಾಷಾ ಸಮೃದ್ಧಿ, ಸಾಹಿತ್ಯ ಸಂಪತ್ತು ಅತ್ಯಂತ ವಿಶಿಷ್ಟವಾದುದು. ಭಾರತದ ನೆಲದಲ್ಲಿ ಬೆಳೆದ ಸಂಸ್ಕೃತಿಯಂತೂ ಬಹು ವೈವಿಧ್ಯಮಯವಾಗಿ, ವರ್ಣರಂಜಿತವಾಗಿದೆ. ನುಡಿಯ ಆಂತರ್ಯವನ್ನು, ಸಾಹಿತ್ಯದ ಸಾಧ್ಯತೆಗಳನ್ನು ಕಂಡುಕೊಳ್ಳುವಲ್ಲಿ ನಿರಂತರ ಪ್ರಯತ್ನಶೀಲವಾಗಿರುವ ಭಾರತೀಯ ಶಬ್ದಸತ್ತ್ವ ಹೊಸ ಹೊಸ ಆಯಾಮಗಳನ್ನು ಶೋಧಿಸಿದೆ. ಇದರ ಫಲವಾಗಿಯೇ ಮಾತು ಮಂತ್ರವಾಗುವುದಿದ್ದರೆ ಅದು ಭಾರತದಲ್ಲಿ ಎನ್ನುವಷ್ಟರ ಮಟ್ಟಿಗೆ ಮಾಗಿದೆ.

ಇಂದು ಪ್ರತಿಯೊಂದು ರಾಜ್ಯದಲ್ಲೂ ಆಯಾ ಪ್ರಾಂತಕ್ಕೆ ಸೇರಿದ ಭಾಷೆಗಳನ್ನು ಅಧ್ಯಯನ ಮಾಡುವ, ಗ್ರಂಥರಚನೆಗಳ ಮೂಲಕ ಉಳಿಸಿ ಬೆಳೆಸುವ ಕಾಯಕ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕೆಲಸಕಾರ್ಯಗಳು ಸ್ವಲ್ಪ ಭಿನ್ನವಾಗಿವೆ. ಸಮಗ್ರತೆ ನಿಟ್ಟಿನಲ್ಲಿ ಪರಿಷತ್ತು ಕಾರ್ಯಮಗ್ನವಾಗಿದೆ. ಇಡೀ ಭಾರತದ ನುಡಿ ವೈವಿಧ್ಯವನ್ನು ಗುರುತಿಸುವುದರ ಜೊತೆಗೆ ಅವುಗಳಿಗಿರುವ ಸಾಮ್ಯವನ್ನೂ ಗುರುತಿಸಿ ಸಮರಸ ಭಾವವನ್ನೂ ಬೆಸೆಯುವುದರತ್ತ ತನ್ನ ದೃಷ್ಟಿಯನ್ನು ಹರಿಸುವ ಉದ್ದೇಶದಿಂದ 1966ರಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಆರಂಭವಾಯಿತು. ಭಾರತೀಯ ದೃಷ್ಟಿ ಸೃಷ್ಟಿಗಳನ್ನು ಪುನಃಸ್ಥಾಪಿಸುವ, ಅದರೊಂದಿಗೆ ದೇಶದ ಬೌದ್ಧಿಕ ವಾತಾವರಣವನ್ನು ಬೆಸೆಯುವ ದೊಡ್ಡ ಗುರಿಯೊಂದಿಗೆ ಪರಿಷತ್ತು ಸ್ಥಾಪಿತವಾಗಿದೆ.

1966ರಲ್ಲಿ ಹುಟ್ಟಿದ ಈ ಸಂಸ್ಥೆ ಕರ್ನಾಟಕದಲ್ಲಿ 2015ರಿಂದ ಬಹುಮುಖವಾದ ಚಟುವಟಿಕೆಗಳಲ್ಲಿ ತೊಡಗಿದೆ. ಮೊದಲ ರಾಜ್ಯಮಟ್ಟದ ಸಮ್ಮೇಳನ 2016ರಲ್ಲಿ ಉತ್ತರ ಕನ್ನಡದಲ್ಲಿ ನಡೆಯಿತು. ಭಾರತೀಯ ಸಂಸ್ಕೃತಿಯ ಮೂಲಸ್ತಂಭವಾದ ಕುಟುಂಬ ಇಂದು ತೀವ್ರ ಒತ್ತಡಕ್ಕೆ ಒಳಗಾಗಿದೆ. ಮನೆಮನೆಗಳಲ್ಲಿ ಆತಂಕವನ್ನು ಸೃಷ್ಟಿಸುತ್ತಿದೆ. ಇದರ ಆಯಾಮಗಳನ್ನು ಅರಿಯಲು ‘ಸಾಹಿತ್ಯದಲ್ಲಿ ಕೌಟುಂಬಿಕ ಮೌಲ್ಯಗಳು’ ಎಂಬ ಸಾಮಯಿಕ ವಿಚಾರ ಸಮ್ಮೇಳನದ ವಿಷಯವಾಗಿತ್ತು. ಹಳ್ಳಿಗಳು ಸರಳ-ಸುಂದರ ಭಾರತೀಯ ಬದುಕಿನ ಮುಖ್ಯ ನೆಲೆಯಾಗಿರುವುದರಿಂದ ಶಿರಸಿ ಸಮೀಪದ ಯಡಳ್ಳಿಯಲ್ಲಿ ಸಮ್ಮೇಳನ ಆಯೋಜಿಸಲಾಗಿತ್ತು. ಕರ್ನಾಟಕದ ವಿವಿಧ ಭಾಗಗಳಿಂದ ಬಂದ ಸಾವಿರಕ್ಕೂ ಹೆಚ್ಚಿನ ಪ್ರತಿನಿಧಿಗಳು ಸಮ್ಮೇಳನದ ಅರ್ಥವಂತಿಕೆ ಹೆಚ್ಚಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿಗೆ ತನ್ನ ಕಾರ್ಯ ಸಾರ್ಥಕವಾದದ್ದು ಎನಿಸಿತು. ಬಹುಭಾಷೆಗಳ ತವರಾದ ಭಾರತದಲ್ಲಿ ಕವಿಗೋಷ್ಠಿ ಎಂದರೆ ಅನೇಕ ಕವಿಗಳ- ಬೇರೆ ಬೇರೆ ನಾಡುನುಡಿಗಳಿಂದ ಬಂದವರೊಡನೆ ಸಂವಾದ, ಸಂಭಾಷಣೆ, ವಿಚಾರ ವಿನಿಮಯ, ಕಾವ್ಯಶ್ರವಣ ಆಗಬೇಕು. ಶಿವಮೊಗ್ಗದ ತೀರ್ಥಹಳ್ಳಿಯ ಬಳಿಯ ಹಾದಿಗಲ್ಲು ಇಂಥದೊಂದು ಬಹುಭಾಷಾ ಕವಿಗೋಷ್ಠಿಗೆ ಅಧಿಷ್ಠಾನವಾಯಿತು, ದಕ್ಷಿಣ ಭಾರತ ವ್ಯಾಪ್ತಿಯ ಈ ಗೋಷ್ಠಿಯಲ್ಲಿ ದಕ್ಷಿಣದ ಎಲ್ಲ ಭಾಷಾಕವಿಗಳೂ ಭಾಗವಹಿಸಿದ್ದರು.

ಕರ್ನಾಟಕ ಕಂಡ ಅಪರೂಪದ ವಿದ್ವಾಂಸರುಗಳಲ್ಲಿ ಮಹಾಮಹೋಪಾಧ್ಯಾಯ ರಂಗನಾಥ ಶರ್ಮರು ಒಬ್ಬರು. ಆದಿಕಾವ್ಯವಾದ ಶ್ರೀಮದ್ರಾಮಾಯಣವನ್ನು 20ನೇ ಶತಮಾನದ ಮಧ್ಯಭಾಗದಲ್ಲಿ ಸಂಪೂರ್ಣವಾಗಿ ಕನ್ನಡಕ್ಕೆ ತಂದು ವಾಲ್ಮೀಕಿ ಮಹರ್ಷಿಯನ್ನು ಕನ್ನಡಿಗರ ಮನಮಂದಿರಗಳಲ್ಲಿ ಪ್ರತಿಷ್ಠಾಪಿಸಿದವರು ಅವರು. ಸಂಸ್ಕೃತ, ಕನ್ನಡಭಾಷೆಗಳು, ವ್ಯಾಕರಣ, ವೇದಾಂತಶಾಸ್ತ್ರಗಳು, ಕಾವ್ಯ, ನಾಟಕಕ್ಷೇತ್ರಗಳಿಗೆ ಉತ್ಕೃಷ್ಟವಾದ ಕೊಡುಗೆಗಳನ್ನಿತ್ತ ದಿವಂಗತ ರಂಗನಾಥ ಶರ್ಮರ ಜನ್ಮಶತಮಾನೋತ್ಸವವನ್ನೂ, ಅ.ಭಾ.ಸಾ.ಪ. ಕರ್ನಾಟಕ ಆಚರಿಸಿತು. (2017) 2018ರಲ್ಲಿ ‘ಸಾಹಿತ್ಯದಲ್ಲಿ ಭಾರತೀಯತೆ’ ಎಂಬ ವಿವೇಕಪೂರ್ಣ ವಿಷಯ ಕುರಿತು 2ನೇ ರಾಜ್ಯ ಸಮ್ಮೇಳನ ಮೈಸೂರಿನಲ್ಲಿ ನಡೆಯಿತು. ಈ ಸಮ್ಮೇಳನಕ್ಕೆ ಇಡೀ ರಾಜ್ಯದ ಪ್ರತಿನಿಧಿಗಳ ಸ್ಪಂದನೆ ಅದ್ಭುತವಾಗಿತ್ತು. ಎರಡೂವರೆ ಸಾವಿರಕ್ಕೂ ಹೆಚ್ಚಿನ ಜನರು ಭಾಗವಹಿಸಿದರು. ಪ್ರತಿನಿಧಿ ಸಂಖ್ಯೆ ದೃಷ್ಟಿಯಿಂದ ದಾಖಲೆಯ ಕಾರ್ಯಕ್ರಮವಾದ ಈ ಸಮ್ಮೇಳನ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಗೊತ್ತುಗುರಿಗಳನ್ನು ಇನ್ನಷ್ಟು ವಿಶದಪಡಿಸಿ, ಭಾರತೀಯರಿಗೆ ಭಾರತೀಯತೆ ಎಂಬುದು ತೀರ ಅನಿವಾರ್ಯ ಎಂದು ತೋರಿಸಿಕೊಟ್ಟಿತು.

ಜನರಿಗೆ ಆಪ್ತವಾದ ಈ ಭಾರತೀಯತೆಯನ್ನು ಎಲ್ಲೆಡೆ ಪಸರಿಸಲು ಸಂಘಟನೆಯ ಜಾಲ ಹಬ್ಬುತ್ತಿದೆ. ಈವರೆಗೆ 24 ಜಿಲ್ಲೆಗಳಲ್ಲಿ 60ಕ್ಕೂ ಹೆಚ್ಚು ತಾಲೂಕು ಹಾಗೂ ಹೋಬಳಿಗಳಲ್ಲಿ ಚಟುವಟಿಕೆ ನಡೆಯುತ್ತಿದೆ. ಸಮರ್ಥವಾದ ಬೌದ್ಧಿಕ ತಂಡವನ್ನೂ ಕಟ್ಟುವುದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಯೋಜನೆಯಾಗಿದೆ. ಹಾಗೆಯೇ ಸಾಮರ್ಥ್ಯ ಇರುವವರನ್ನು ಗುರುತಿಸಿ ಪುರಸ್ಕರಿಸುವ ಪರಿಪಾಠವನ್ನೂ ಆರಂಭಿಸಲಾಗಿದೆ.

(ಲೇಖಕರು ವಿಧಾನಪರಿಷತ್ ಮಾಜಿ ಸದಸ್ಯರು)

ವಾಗ್ದೇವಿ ಪುರಸ್ಕಾರ

ತಮ್ಮ ಬರವಣಿಗೆಯಿಂದ ಭರವಸೆ ಮೂಡಿಸುತ್ತ ಸಾಹಿತ್ಯ ಸೇವೆಯಲ್ಲಿ ನಿರತರಾಗಿರುವ ಕಿರಿಯ ವಯಸ್ಕರಿಗೆ ಈ ಪ್ರಶಸ್ತಿಯನ್ನು ಕೊಡಮಾಡಬೇಕೆಂದು ಪರಿಷತ್ತು ಅಪೇಕ್ಷಿಸುತ್ತದೆ. ಇಸ್ರೋದ ಮಾಜಿ ವಿಜ್ಞಾನಿ, ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಕೆ. ಹರೀಶ್ ಈ ಪ್ರಶಸ್ತಿಯ ದಾನಿಗಳು.

ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ರೋಹಿಣಾಕ್ಷ ಶಿರ್ಲಾಲು ಈ ವರ್ಷದ ವಾಗ್ದೇವಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಭಾರತೀಯ ಸಾಹಿತ್ಯವಲಯ, ವಿಶ್ವವಿದ್ಯಾಲಯಗಳಲ್ಲಿ ಇಂದು ಹಾಸುಹೊಕ್ಕಾಗಿರುವ ಋಣಾತ್ಮಕತೆಯನ್ನು ಎತ್ತಿತೋರಿಸಿ ಓದುಗರನ್ನು ಧನಾತ್ಮಕ ಚಿಂತನೆಯೆಡೆಗೆ ಸೆಳೆಯುವ ಆಕರ್ಷಕ ಬರವಣಿಗೆಯನ್ನು ಅಳವಡಿಸಿಕೊಂಡಿದ್ದಾರೆ ಡಾ. ರೋಹಿಣಾಕ್ಷ.

ನಾಳೆ ಪ್ರಶಸ್ತಿ ಪ್ರದಾನ ಸಮಾರಂಭ

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ವತಿಯಿಂದ ಆದಿಕವಿ ಪುರಸ್ಕಾರ ಮತ್ತು ವಾಗ್ದೇವಿ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 24ರಂದು (ಭಾನುವಾರ) ಬೆಳಗ್ಗೆ 10.30ಕ್ಕೆ ಬೆಂಗಳೂರಿನ ನೃಪತುಂಗ ರಸ್ತೆಯ ದಿ ಮಿಥಿಕ್ ಸೊಸೈಟಿಯಲ್ಲಿ ನಡೆಯಲಿದೆ. ಇನ್ಪೋಸಿಸ್ ಮಾಜಿ ನಿರ್ದೇಶಕ ಡಾ.ಮೋಹನದಾಸ ಪೈ ಮುಖ್ಯ ಅತಿಥಿಯಾಗಿದ್ದು, ಅಭಾಸಾಪ ಕರ್ನಾಟಕ ಅಧ್ಯಕ್ಷ, ವಿಜಯವಾಣಿ ಅಂಕಣಕಾರ ಪ್ರೊ. ಪ್ರೇಮಶೇಖರ ಅಧ್ಯಕ್ಷತೆ ವಹಿಸಲಿದ್ದಾರೆ. ಬಹುಶ್ರುತ ವಿದ್ವಾಂಸ ಡಾ.ಕೆ.ಎಸ್.ನಾರಾಯಣಾಚಾರ್ಯರಿಗೆ ಆದಿಕವಿ ಪುರಸ್ಕಾರ, ಚಿಂತಕ ಡಾ.ರೋಹಿಣಾಕ್ಷ ಶಿರ್ಲಾಲು ಅವರಿಗೆ ವಾಗ್ದೇವಿ ಪ್ರಶಸ್ತಿ ಪ್ರದಾನ ನಡೆಯಲಿದೆ. ವಾಗ್ದೇವಿ ಪ್ರಶಸ್ತಿ ಪೋಷಕರಾದ ಇಸ್ರೋ ಮಾಜಿ ವಿಜ್ಞಾನಿ ಕೆ.ಹರೀಶ್, ಆದಿಕವಿ ಪುರಸ್ಕಾರದ ಪೋಷಕರಾದ ಎಸ್. ಜಯರಾಮ್ ಮತ್ತು ವೀಣಾ ಜಯರಾಮ್ ಅಭಾಸಾಪ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್, ಗೌರವ ಸಲಹೆಗಾರರಾದ ಡಾ.ಎಸ್.ಆರ್.ಲೀಲಾ ಸೇರಿ ಸಾಹಿತ್ಯ, ಬೌದ್ಧಿಕ ರಂಗದ ಸಾಧಕರು, ಗಣ್ಯರು ಉಪಸ್ಥಿತರಿರಲಿದ್ದಾರೆ.

ವಾಲ್ಮೀಕಿ ಪುರಸ್ಕಾರ

ವಾಲ್ಮೀಕಿ ಮಹರ್ಷಿಯನ್ನು ಆದಿಕವಿ ಎಂದು ಕೊಂಡಾಡುತ್ತಿದ್ದರೂ ನಮ್ಮ ದೇಶದಲ್ಲಿ ಇದುವರೆಗೆ ಆದಿಕವಿಯ ಹೆಸರಿನಲ್ಲಿ ಯಾವ ಪ್ರಶಸ್ತಿಯೂ ಇಲ್ಲ. ಆದ್ದರಿಂದ ಆದಿಕವಿ ಪುರಸ್ಕಾರ ಪ್ರದಾನಿಸಲು ನಿರ್ಧರಿಸಲಾಗಿದೆ. ಈ ಪ್ರಶಸ್ತಿಯ ದಾನಿಗಳು ಸಮಾಜಸೇವಾಸಕ್ತರಾದ ವೀಣಾ ಮತ್ತು ಜಯರಾಮ್ ದಂಪತಿ. ಭಾರತೀಯ ಸಾಹಿತ್ಯ, ಶಾಸ್ತ್ರ, ಸಂಸ್ಕೃತಿ ಪರಂಪರೆಯ ಮೂಲಸ್ರೋತಸ್ಸು ರಾಷ್ಟ್ರೀಯತೆ ಅಲ್ಲದೆ ಬೇರೆ ಅಲ್ಲ ಎಂದು ಅನಿತರಸಾಧಾರಣವಾದ ರೀತಿಯಲ್ಲಿ ಪ್ರತಿಪಾದಿಸುತ್ತಿರುವ; ಕನ್ನಡ, ಇಂಗ್ಲಿಷ್, ಸಂಸ್ಕೃತ, ತಮಿಳು ಭಾಷೆಗಳಲ್ಲಿ ಅಗಾಧವಾದ ವಿದ್ವತ್ತನ್ನು ಹೊಂದಿರುವ ನಾಡಿನ ಬೇಡಿಕೆಯ ಬರಹಗಾರರಾದ, ಓದುಗರಲ್ಲಿ ಮಿಂಚಿನ ಸಂಚಾರವುಂಟು ಮಾಡುವ ‘ವಿಜಯವಾಣಿ’ಯ ಅಂಕಣಕಾರರೂ ಆದ ಪ್ರಾಚಾರ್ಯ ಡಾ. ಕೆ. ಎಸ್. ನಾರಾಯಣಾಚಾರ್ಯರಿಗೆ ಆದಿಕವಿ ಪುರಸ್ಕಾರ ನೀಡಿ ಗೌರವಿಸಬೇಕೆಂದು ಪರಿಷತ್ತು ನಿರ್ಣಯಿಸಿದೆ.

Stay connected

278,753FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...