
ಸೊರಬ: ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಪಟ್ಟಣದ ರಂಗಮಂದಿರದಲ್ಲಿ ಸೊರಬ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕರೊನಾ ಸೇನಾನಿಗಳಿಗೆ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಧಾನಮಂತ್ರಿಯ ದಿಟ್ಟ ನಿರ್ಧಾರದಿಂದ ನಾವಿಂದು ಕರೊನಾವನ್ನು ಸಮರ್ಥವಾಗಿ ಎದುರಿಸುತ್ತಿದ್ದೇವೆ. ಸಿಎಂ ನಿರ್ಧಾರದಿಂದಾಗಿ ಕರ್ನಾಟಕ ಕರೊನಾ ನಿಯಂತ್ರಣದಲ್ಲಿ 2ನೇ ಸ್ಥಾನದಲ್ಲಿದೆ ಎಂದರು.
ಶಾಸಕ ಎಸ್.ಕುಮಾರ್ ಬಂಗಾರಪ್ಪ ಮಾತನಾಡಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಆಡಳಿತದ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಇಂದು ಎಲ್ಲರೂ ಕರೊನಾದೊಂದಿಗೆ ಬದುಕುವುದು ಅನಿವಾರ್ಯ ಎಂದರು.
ತಾಪಂ ಅಧ್ಯಕ್ಷೆ ನಯನಾ ಹೆಗಡೆ, ಎಸಿ ಡಾ. ಎಲ್.ನಾಗರಾಜ, ಡಿಎಚ್ಒ ರಾಜೇಶ್ ಸುರಗೀಹಳ್ಳಿ, ಸಿಡಿಪಿಒ ಜಿಲ್ಲಾ ಅಧಿಕಾರಿ ಈರಣ್ಣಯ್ಯ, ತಹಸೀಲ್ದಾರ್ ನಫೀಸಾ ಬಾನು, ಟಿಎಚ್ಒ ಅಕ್ಷತಾ ಖಾನಾಪುರ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ನಾಗರಾಜ ಗೌಡ, ಗುರುಪ್ರಸನ್ನ ಗೌಡ, ಎಂ.ಡಿ.ಉಮೇಶ, ಟಿ.ಡಿ.ಮೇಘರಾಜ, ವಿಜಯಲಕ್ಷ್ಮೀ, ನಾಗರಾಜ ಚಿಕ್ಕಸವಿ, ಅಶೋಕ ಅಂಗಡಿ, ಶ್ರೀಪಾದ ಹೆಗಡೆ, ಎಚ್.ಎಸ್.ಮಂಜಪ್ಪ, ನಿರಂಜನ, ಎ.ಎಲ್.ಅರವಿಂದ ಇತರರಿದ್ದರು.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಗೌರವಿಸಲಾಯಿತು.