ಚಿತ್ರದುರ್ಗ: ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ದುರ್ಗದ ಸಿರಿ ಕಲಾ ಸಂಘದಿಂದ ಮಾ. 23ರಂದು ಸಂಜೆ 5ರ ನಂತರ ಕರುನಾಡ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವೇದಿಕೆ ಕಾರ್ಯಕ್ರಮದ ನಂತರ ಆಕರ್ಷಕ ನೃತ್ಯ ರೂಪಕ, ಸಂಗೀತ ಸಂಜೆ ನಡೆಯಲಿದ್ದು, ಅದಕ್ಕಾಗಿ ಮೈದಾನದಲ್ಲಿ ವರ್ಣರಂಜಿತ ಲೈಟಿಂಗ್ಸ್‌ಗಳ ಅಳವಡಿಕೆಯೊಂದಿಗೆ ಸಿದ್ಧತೆ ಭರದಿಂದ ಸಾಗಿದೆ.
ಕನ್ನಡದ ಮೇರುನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಸೇರಿ ಅನೇಕ ಕಲಾವಿದರನ್ನು ಸಂಘದಿಂದ ಇದೇ ವೇಳೆ ಸನ್ಮಾನಿಲಾಗುವುದು.
ವಿಐಪಿ, ವಿವಿಐಪಿ ಹಾಗೂ ಸಾರ್ವಜನಿಕರಿಗಾಗಿ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.
ದುರ್ಗದ ಸಿರಿ ಕಲಾಸಂಘದ ಮಹಂತರೆಡ್ಡಿ, ಅನಂತರೆಡ್ಡಿ, ಸೈಯದ್ ಇಸಾಖ್, ಅಬ್ದುಲ್ ರೆಹಮಾನ್, ಐಶ್ವರ್ಯಾ ಫೋರ್ಟ್‌ನ ಅರುಣ್‌ಕುಮಾರ್, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ನಿರಂಜನಮೂರ್ತಿ ಇತರರು ಸಿದ್ಧತೆ ಪರಿಶೀಲಿಸಿದರು.