ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮದ ಶಕ್ತಿದೇವತೆ ಶ್ರೀ ಕರಿಯಮ್ಮ ದೇವಿಯ ಜಾತ್ರೆ ಐದು ದಿನ ವಿಶೇಷವಾಗಿ ಜರುಗಲಿದ್ದು, ಮಂಗಳವಾರ ನೂರಾರು ಭಕ್ತರ ಸಮ್ಮುಖದಲ್ಲಿ ಮದಲಿಂಗಿತ್ತಿ ಪೂಜಾ ಶಾಸ್ತ್ರ ನೆರವೇರಿತು. ಬುಧವಾರ ಬಾನೋತ್ಸವ ಪೂಜೆ ನಡೆಯಿತು.

15ರಂದು ಗ್ರಾಮದ ಮನೆ-ಮನೆಗೆ ಭೇಟಿ ನೀಡಿ ಭಕ್ತರಿಂದ ದೇವಿಗೆ ಪೂಜೆ ಸ್ವೀಕಾರ ನಡೆಯಲಿದೆ. 16ರಂದು ಪುಷ್ಪಾಲಂಕೃತ ದೇವಿಯ ಉತ್ಸವ ಮೂರ್ತಿಯ ಹೂವಿನ ಪಲ್ಲಕ್ಕಿ ಮೆರವಣಿಗೆ ಗ್ರಾಮದ ರಾಜಬೀದಿಗಳಲ್ಲಿ ಸಂಚರಿಸಲಿದೆ. 17ರಂದು ಅಮ್ಮನ ‘ಸಿಡಿ’ ಮಹೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.
ದೇವಿಯ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಕರಿಯಮ್ಮ ದೇವಿ ಜೀಣೋದ್ಧಾರ ಸೇವಾ ಸಮಿತಿ, ನಂದನಹೊಸೂರು ಗ್ರಾಮಸ್ಥರು ಮನವಿ ಮಾಡಿದ್ದಾರೆ.