ಕರಿಯಪ್ಪನ ಕೆಮಿಸ್ಟ್ರಿಯ ಊರ್ವಶಿ ಹಾಡು

ತಬಲಾ ನಾಣಿ ಮತ್ತು ‘ಕಿರಿಕ್ ಪಾರ್ಟಿ’ ಖ್ಯಾತಿಯ ಚಂದನ್ ಆಚಾರ್ ಮುಖ್ಯಭೂಮಿಕೆಯಲ್ಲಿರುವ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಚಿತ್ರೀಕರಣವೆಲ್ಲ ಮುಗಿದು, ಇದೀಗ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದೇ ಸಂದರ್ಭದಲ್ಲಿ ಚಿತ್ರಕ್ಕಾಗಿ ನವೀನ್ ಸಜ್ಜು ಹಾಡಿರುವ ‘ಊರ್ವಶಿ ಅವಳು..’ ಹಾಡು ಬಿಡುಗಡೆ ಆಗಿದ್ದು, ಕೇಳುಗರಿಗೆ ಇಷ್ಟವಾಗಿದೆ. ಡಾ. ಡಿ.ಎಸ್. ಮಂಜುನಾಥ್ ನಿರ್ವಿುಸಿರುವ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರಕ್ಕೆ ಆರವ್ ರಿಶಿಕ್ ಸಂಗೀತ ಸಂಯೋಜಿಸಿದ್ದಾರೆ. ‘ಊರ್ವಶಿ ಅವಳು..’ ಹಾಡಿಗೆ ನಿರ್ದೇಶಕ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಲವ್ ಪ್ಯಾಥೋ ಸಾಂಗ್ ಇದಾಗಿದ್ದು, ಟಪ್ಪಾಂಗುಚ್ಚಿ ಶೈಲಿಯಲ್ಲಿ ಮೂಡಿ ಬಂದಿದೆ. ಇನ್ನು, ನಾಯಕಿಯಾಗಿ ಸಂಜನಾ ಆನಂದ್ ನಟಿಸಿದ್ದು, ಸುಚೇಂದ್ರ ಪ್ರಸಾದ್ ಡಾ. ಡಿ.ಎಸ್. ಮಂಜುನಾಥ್, ಮೈಕೋ ನಾಗರಾಜ್, ರಾಕ್​ಲೈನ್ ಸುಧಾಕರ್ ಪೋಷಕ ಪಾತ್ರಗಳಲ್ಲಿದ್ದಾರೆ.