ಕರಿಬಸವೇಶ್ವರ ರಥ ಎಳೆದ‌‌ ನಾರಿಯರು

ದಾವಣಗೆರೆ: ಎಲ್ಲರ ಮನೆಯ ರಥ ಎಳೆಯುವ ಶಕ್ತಿ ಸ್ವರೂಪಿಣಿಗೆ ಗೌರವ, ಸ್ಥಾನಮಾನ ನೀಡಬೇಕು. ಅಂತಹ ಮನೆಯಲ್ಲಿ ಲಕ್ಷ್ಮೀ, ಸರಸ್ವತಿ ಹಾಗೂ ಪಾರ್ವತಿಯರು ಶಾಶ್ವತವಾಗಿ ನೆಲೆಸುತ್ತಾರೆ ಎಂದು ಉಜ್ಜಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಯರಗುಂಟೆ ಕ್ಷೇತ್ರದ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದಿಂದ ಭಾನುವಾರ ಹಮ್ಮಿಕೊಂಡಿದ್ದ, ಶ್ರೀ ಗುರು ಕರಿಬಸವೇಶ್ವರ ಸ್ವಾಮಿಯ ದ್ವಾದಶ ಮಹೋತ್ಸವ ಹಾಗೂ ರಥೋತ್ಸವದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪತ್ನಿ. ಮಗಳು, ತಾಯಿ ಯಾವುದೇ ಹೆಣ್ಣುಮಕ್ಕಳನ್ನು ಮನೆಗಳಲ್ಲಿ ಕೆಟ್ಟ ಭಾವನೆಯಿಂದ ನೋಡಬಾರದು. ಕೆಟ್ಟ ಪದಗಳಿಂದ ನಿಂದಿಸಬಾರದು. ಹೆಣ್ಣುಮಕ್ಕಳು ಕಣ್ಣೀರು ಹಾಕಿದರೆ ಅಂತಹ ಮನೆಗಳಲ್ಲಿ ಎಷ್ಟೇ ದುಡಿದರೂ ಶಾಂತಿ- ನೆಮ್ಮದಿ ಇರುವುದಿಲ್ಲ. ಹೆಣ್ಣುಮಕ್ಕಳಿಗೆ ಪುರುಷರು ರಥ ಎಳೆಯುವ ಅವಕಾಶ ಕೊಟ್ಟರೆ ಸಾಲದು, ಅವರಿಗೆ ಗೌರವಾದರವನ್ನೂ ನೀಡಬೇಕು ಎಂದು ತಿಳಿಸಿದರು.
ಭಾರತ ಎಂದಾಗ ನೆನಪಾಗುವುದೇ ದೇವರು ಮತ್ತು ಧರ್ಮ. ನಮ್ಮ ದೇಶದಲ್ಲಿರುವಷ್ಟು ದೇವಾಲಯ, ಮಠಗನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಹೀಗಾಗಿ ಭಾರತಕ್ಕೆ ವಿಶ್ವದಲ್ಲೇ ಆಧ್ಯಾತ್ಮಿಕತೆಯಲ್ಲಿ ಜಗದ್ಗುರು ಸ್ಥಾನ ಸಿಗಬೇಕೆಂದು ಸ್ವಾಮಿ ವಿವೇಕಾನಂದರು ು ಪ್ರತಿಪಾದಿಸಿದರು.
ಕರಿಬಸವೇಶ್ವರರು 16ನೇ ಶತಮಾನದ ಮುಂಚೂಣಿಯ ಕಾಯಕಯೋಗಿ, ಪವಾಡ ಪುರುಷ. ಜನರ ದುಃಖ ನಿವಾರಿಸಿ, ನಂಬಿ ಬಂದವರನ್ನು ಕಾಪಾಡಿ ಧೈರ್ಯ-ಸ್ಥೈರ್ಯ, ನೈತಿಕ ಮೌಲ್ಯ ತುಂಬಿದ, ಲೋಕಕಲ್ಯಾಣಕ್ಕಾಗಿ ಬದುಕಿದ್ದ ಮೇರು ವ್ಯಕ್ತಿತ್ವ ಅವರದಾಗಿತ್ತು. 21ನೇ ಶತಮಾನದಲ್ಲೂ ಅವರನ್ನು ಸ್ಮರಿಸಲು ಅವರಲಿದ್ದ ಲೋಕಾತ್ಮ ಗುಣ ಕಾರಣ. ಅವರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಉದ್ಯಮಿ ಎಚ್.ಎಸ್.ನಾಗರಾಜ್, ಬಿಜೆಪಿ ಮುಖಂಡ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾವರಕೆರೆಯ ಡಾ. ಅಭಿನವ ಸಿದ್ಧಲಿಂಗ ಸ್ವಾಮೀಜಿ, ಚನ್ನಗಿರಿಯ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ಉಕ್ಕಡಗಾತ್ರಿಯ ಶ್ರೀ ಹಾಲಶಂಕರ ಸ್ವಾಮೀಜಿ, ನಂದಿಗಾವಿಯ ಶ್ರೀ ಹಾಲಸ್ವಾಮೀಜಿ, ಯರಗುಂಟೆ ಕ್ಷೇತ್ರದ ಶ್ರೀ ಪರಮೇಶ್ವರ ಸ್ವಾಮೀಜಿ, ಸಮ್ಮುಖ ವಹಿಸುವರು. ಧರ್ಮಸಭೆ ನಂತರದಲ್ಲಿ ನಾರಿಯರಿಂದ ಕರಿಬಸವೇಶ್ವರ ರಥೋತ್ಸವ ನೆರವೇರಿತು.

Share This Article

ಒಂದು ಬಾರಿ ಇದನ್ನು ಕುಡಿದರೆ ಸಾಕು ನಿಮ್ಮ ಹೊಟ್ಟೆ ಫುಲ್​ ಕ್ಲೀನ್ ಆಗಿಬಿಡುತ್ತೆ! Stomach problems

ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಆ ನೋವು ( Stomach problems ) ಅಥವಾ ಕಿರಿಕಿರಿ…

Health Tips : ಸಕ್ಕರೆ ಕಾಯಿಲೆಯಿಂದ ಬಳಲುತ್ತೀದ್ದೀರಾ? ಬೆಳ್ಳಂಬೆಳಗ್ಗೆ ಕರಿಬೇವಿನ ಎಲೆಯ ನೀರನ್ನು ಕುಡಿಯಿರಿ ಸಾಕು

ಬೆಂಗಳೂರು: ಕರಿಬೇವು ಕೇವಲ ಬೆಳಗಿನ ತಿಂಡಿಗೆ ರುಚಿ ಕೊಡಲು ಒಗ್ಗರಣೆಗೆ ಮಾತ್ರ ಮೀಸಲಾಗಿಲ್ಲ. ಕರಿಬೇವಿನ ಎಲೆಗಳು…

ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ

ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…