ಕರಾಟೆ ಕಣ್ಮಣಿ ಚಂದನಾ ನಾಯಕ್

ಕರಾಟೆ ಎಂದರೆ ತುಂಬಾ ಇಷ್ಟ. ಅದರಲ್ಲಿಯೇ ಹೆಚ್ಚಿನ ಸಾಧನೆ ಮಾಡಬೇಕು. ಮುಂದೆ ಡಾಕ್ಟರ್ ಆಗುವ ಜತೆಗೆ ಕರಾಟೆಯಲ್ಲಿ ರೆಡ್​ಬೆಲ್ಟ್ ಪಡೆಯುವುದು ಗುರಿ ಬಗ್ಗೆ ಬಿಚ್ಚಿಡುವ ಚಂದನಾ ಜಿ.ನಾಯಕ್, ಈಗಾಗಲೇ ಸಾಧನೆ ಹಾದಿಯಲ್ಲಿ ನೂರಾರು ಪ್ರಶಸ್ತಿಗಳನ್ನು ಬೇಟೆಯಾಡಿದ್ದಾಳೆ.

ಈಕೆ ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ನಿಟ್ಟೂರು ಸೆಂಟ್ರಲ್ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ. ಹತ್ತು ವರ್ಷದ ಚಂದನಾ ನಾಯಕ್ ಬಿಎಸ್​ಎನ್​ಎಲ್ ನೌಕರ ಕೆ.ಗಂಗಾಧರ ನಾಯಕ್ ಮತ್ತು ಯಶೋದಾ ನಾಯಕ್ ದಂಪತಿ ಪುತ್ರಿ. ವಿಜಯ್ ಅಗಡಿ ಮಾರ್ಷಲ್ ಸ್ಪೋರ್ಟ್ಸ್ ಕ್ಲಬ್​ನಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾಳೆ.

2015ರಲ್ಲಿ ಜೈಪುರದಲ್ಲಿ ನಡೆದ ಆಲ್ ಇಂಡಿಯಾ ಕರಾಟೆ-ಡು ಫೆಡರೇಷನ್(ಂMಏಇ)ನಲ್ಲಿ 28 ರಾಜ್ಯದ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಬಂಗಾರದ ಪದಕ ತಂದುಕೊಟ್ಟ ಏಕೈಕ ಕರಾಟೆ ಪಟು ಎನಿಸಿಕೊಂಡಿದ್ದಾಳೆ ಈಕೆ. ಏಳನೇ ವಯಸ್ಸಿನಲ್ಲಿ ಕರಾಟೆ ಕ್ಲಾಸ್​ಗೆ ಸೇರಿಕೊಂಡ ಈ ಬಾಲಕಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನಾಲ್ಕು ಗಂಟೆ ಕರಾಟೆ ಅಭ್ಯಾಸ ಮಾಡುತ್ತಾಳೆ. ಒಂದೇ ವರ್ಷದಲ್ಲಿ ಫಸ್ಟ್ ಡಿಗ್ರಿ ಬ್ಲ್ಯಾಕ್ ಬೆಲ್ಟ್ ಮುಗಿಸಿದ್ದಾಳೆ ಎಂದು ಈಕೆಗೆ ತರಬೇತಿ ನೀಡುತ್ತಿರುವ ಮಾಸ್ಟರ್ ಸನ್​ಸೈ ವಿಜಯ್ ಅಗಡಿ ಹೆಮ್ಮೆಯಿಂದ ಹೇಳುತ್ತಾರೆ.

ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಹೆಣ್ಣು ಮಕ್ಕಳಿಗಾಗಿ ಚಂದನಾ ನಾಯಕ್ ಒಂದು ಕರಾಟೆ ಶಾಲೆ ತೆರೆಯಬೇಕೆಂಬ ಗುರಿಯನ್ನಿಟ್ಟುಕೊಂಡಿದ್ದಾಳೆ. ಕರಾಟೆ ಅಭ್ಯಾಸದಲ್ಲಿ ಅವಳದೇ ಆದ ಶೈಲಿ ಅಳವಡಿಸಿಕೊಂಡಿದ್ದಾಳೆ. ಜಪಾನ್ ರಾಜಧಾನಿ ಟೋಕಿಯೋದಲ್ಲಿ 2020ರಲ್ಲಿ ನಡೆಯಲಿರುವ ಒಲಂಪಿಕ್ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ಹೆಚ್ಚಿನ ತಯಾರಿ ನಡೆಸುತ್ತಿದ್ದಾಳೆ ಎಂದು ಕೋಚ್ ಮಾಸ್ಟರ್ ನಾಗರಾಜ್.ವಿ.ಸುಣಗಾರ ಹೇಳುತ್ತಾರೆ.

ಬಹುಮಖ ಪ್ರತಿಭೆ

ಕರಾಟೆಯಲ್ಲಿ ಮಾತ್ರವಲ್ಲ ಓದಿನಲ್ಲೂ ಮುಂದಿದ್ದಾಳೆ. ಸೈನ್ಸ್ ಒಲಂಪಿಯಡ್ ಫೌಂಡೇಷನ್​ನಲ್ಲಿ ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್​ನಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂಗಾರದ ಪದಕ ಪಡೆದಿದ್ದಾಳೆ. ಚಿತ್ರಕಲೆಯಲ್ಲೂ ಆಸಕ್ತಿ ಇರುವ ಚಂದನಾಗೆ ಹಲವು ಬಹುಮಾನ ದಕ್ಕಿವೆ. ರಾಜ್ಯಮಟ್ಟದ ಚಿಂತನ ಸ್ಪರ್ಧೆಗಳಲ್ಲೂ ಪದಕಗಳು ಸಂದಿವೆ. ಶಿಪ್ ಅಬಕಾಸ್​ನಲ್ಲೂ ಬಹುಮಾನ ಬಂದಿದೆ.

ಚಂದನಾಳ ಪ್ರಶಸ್ತಿ ಬೇಟೆ

2014ರ ಜುಲೈನಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ನ್ಯಾಷನಲ್ ಮಾರ್ಷಲ್ ಆರ್ಟ್ ಬೀಟ್ ಡೌನ್ ಚಾಂಪಿಯನ್​ಶಿಪ್​ನಲ್ಲಿ ಕಟಾದಲ್ಲಿ ಪ್ರಥಮ ಸ್ಥಾನ.

ಶಿವಮೊಗ್ಗದಲ್ಲಿ 2014ರ ಆಗಸ್​ನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಚಾಂಪಿಯನ್​ಶಿಪ್​ನಲ್ಲಿ ಕಟಾದಲ್ಲಿ ಪ್ರಥಮ ಸ್ಥಾನ, ಕುಮಿಟೆಯಲ್ಲಿ ದ್ವಿತೀಯ ಸ್ಥಾನ.

2014ರ ಅಕ್ಟೋಬರ್​ನಲ್ಲಿ ಮಂಗಳೂರಿನಲ್ಲಿ ನಡೆದ 32ನೇ ಆಲ್ ಇಂಡಿಯಾ ಬುಡೋಕಾನ್ ಕರಾಟೆ ಚಾಂಪಿಯನ್​ಶಿಪ್​ನಲ್ಲಿ ಕಟಾದಲ್ಲಿ ಪ್ರಥಮ ಸ್ಥಾನ, ಕುಮಿಟೆಯಲ್ಲಿ ದ್ವಿತೀಯ ಸ್ಥಾನ.

2014ರ ಡಿಸೆಂಬರ್​ನಲ್ಲಿ ಹಾವೇರಿಯಲ್ಲಿ ಏರ್ಪಡಿಸಿದ್ದ 10ನೇ ನ್ಯಾಷನಲ್ ಕರಾಟೆ ಚಾಂಪಿಯನ್​ಶಿಪ್​ನಲ್ಲಿ ಕಟಾದಲ್ಲಿ ಪ್ರಥಮ, ಕುಮಿಟೆಯಲ್ಲಿ ದ್ವಿತೀಯ ಸ್ಥಾನ.

ರಾಜಸ್ಥಾನದ ಜೈಪುರದಲ್ಲಿ 2015ರ ಜನವರಿಯಲ್ಲಿ ನಡೆದ ಆಲ್ ಇಂಡಿಯಾ ಕರಾಟೆ-ಡು- ಫೆಡರೇಷನ್(ಂMಏಈ) ನ್ಯಾಷನಲ್ ಕರಾಟೆ ಚಾಂಪಿಯನ್​ಶಿಪ್​ನ ಕುಮಿಟೆಯಲ್ಲಿ ಪ್ರಥಮ, ಕಟಾದಲ್ಲಿ ತೃತೀಯ ಸ್ಥಾನ.

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹುಬ್ಬಳ್ಳಿ ಧಾರವಾಡದಲ್ಲಿ 2015ರ ಜುಲೈನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಚಾಂಪಿಯನ್​ಶಿಪ್​ನ ಕಟಾದಲ್ಲಿ ಪ್ರಥಮ ಸ್ಥಾನ, ಕುಮಿಟೆಯಲ್ಲಿ ತೃತೀಯ ಸ್ಥಾನ.

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನಲ್ಲಿ 2015ರ ಅಕ್ಟೋಬರ್​ನಲ್ಲಿ ನಡೆದ ಆಲ್ ಇಂಡಿಯಾ ಕರಾಟೆ ಚಾಂಪಿಯನ್​ಶಿಪ್​ನ ಕಟಾ ಮತ್ತು ಕುಮಿಟೆಯಲ್ಲಿ ದ್ವಿತೀಯ ಬಹುಮಾನ.

ಬಳ್ಳಾರಿಯಲ್ಲಿ 2015ರ ಡಿಸೆಂಬರ್​ನಲ್ಲಿ ನಡೆದ 2ನೇ ಸೌತ್ ಇಂಡಿಯಾ ಕರಾಟೆ ಚಾಂಪಿಯನ್​ಶಿಪ್​ನಲ್ಲಿ ಕಟಾದಲ್ಲಿ ಪ್ರಥಮ, ಕುಮಿಟೆಯಲ್ಲಿ ತೃತೀಯ ಪ್ರಶಸ್ತಿ.

2016ರಲ್ಲಿ ಬೆಂಗಳೂರು ಓಪನ್ ಚಾಂಪಿಯನ್​ಶಿಪ್​ನಲ್ಲಿ ಪ್ರಥಮ ಸ್ಥಾನ.

30ನೇ ರಾಜ್ಯಮಟ್ಟದ ಶೊಟೋಕಾನ್ ಕರಾಟೆ ಚಾಂಪಿಯನ್​ಶಿಪ್​ನ ಕಟಾದಲ್ಲಿ ಪ್ರಥಮ, ಕುಮಿಟೆಯಲ್ಲಿ ತೃತೀಯ ಬಹುಮಾನ.

ಕರಾಟೆ ಟೀಚರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಒಂದನೇ ನ್ಯಾಷನಲ್ ಕರಾಟೆ ಚಾಂಪಿಯನ್​ಶಿಪ್​ನ ಕಟಾದಲ್ಲಿ ಪ್ರಥಮ ಸ್ಥಾನ.

ದಾವಣಗೆರೆಯಲ್ಲಿ ನಡೆದ 1ನೇ ರಾಜ್ಯಮಟ್ಟದ ಓಪನ್ ಬುಡೋ ಚಾಂಪಿಯನ್​ಶಿಪ್​ನಲ್ಲಿ ಪ್ರಥಮ ಸ್ಥಾನ.

ಹುಬ್ಬಳ್ಳಿಯಲ್ಲಿ ನಡೆದ 1ನೇ ರಾಜ್ಯಮಟ್ಟದ ಶೊಟೋಕಾನ್ ಕರಾಟೆ ಚಾಂಪಿಯನ್​ಶಿಪ್​ನ ಕಟಾ ಮತ್ತು ಕುಮಿಟೆಯಲ್ಲಿ ಪ್ರಥಮ ಬಹುಮಾನ.ಭಲೇ ಪುಟಾಣಿ!

ನಿಮ್ಮನೆ, ನಿಮ್ಮೂರಲ್ಲೂ ಅಸಾಮಾನ್ಯ ಪ್ರತಿಭೆಗಳಿದ್ದರೆ ನಮಗೆ ಮಾಹಿತಿ ನೀಡಿ. ವಿಜಯವಾಣಿ ಪುಟಾಣಿ ಪುರವಣಿಯಲ್ಲಿ ಪ್ರಕಟಿಸುತ್ತೇವೆ. ನೆನಪಿರಲಿ ಪುಟಾಣಿ ವಯಸ್ಸು 12 ವರ್ಷ ಮೀರಿರಬಾರದು.

ಸಂಪಾದಕರು, ಭಲೇ ಪುಟಾಣಿ ವಿಭಾಗ

ಪುಟಾಣಿ ಪುರವಣಿ, ವಿಜಯವಾಣಿ,

ನಂ.24, ಸಾಯಿರಾಂ ಟವರ್ಸ್, 5ನೇ ಮುಖ್ಯರಸ್ತೆ,

ಚಾಮರಾಜಪೇಟೆ, ಬೆಂಗಳೂರು-18.

ಇ-ಮೇಲ್ ವಿಳಾಸ: [email protected]

Leave a Reply

Your email address will not be published. Required fields are marked *